ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಸುನೀತಾ ಬಾವಾ ಯಾವುದೇ ನಾಚಿಕೆಯಿಲ್ಲದೆ ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಸಿಲುಕಿಸಲು ಬೆದರಿಕೆ ಹಾಕಿ ಲಂಚ ಪಡೆಯುತ್ತಿದ್ದಾಗ ಈ ದಾಳಿ ನಡೆದಿದೆ.
ಚಂಡೀಗಢ: ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಂಚ ಪಡೆಯುತ್ತಿದ್ದಾಗ ಮಹಿಳಾ ಸಬ್ ಇನ್‌ಸ್ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾರೆ. ಬಂಧಿತ ಅಧಿಕಾರಿಯನ್ನು ಸುನೀತಾ ಬಾವಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಹಿಳಾ ಅಧಿಕಾರಿ ಯಾವುದೇ ನಾಚಿಕೆ ಇಲ್ಲದೆ, ನಗು ನಗುತ್ತಾ ಸ್ಟೇಷನ್ನಿಂದ ಹೊರ ಹೋಗುತ್ತಿರುವ ವಿಡಿಯೋ ಸದ್ಯ ಎಲ್ಲಾ ಕಡೆ ವೈರಲ್ ಆಗಿದೆ.
ಅರೆಸ್ಟ್ ವಿಡಿಯೋ ವೈರಲ್!
ಅರೆಸ್ಟ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಬ್ ಇನ್‌ಸ್ಪೆಕ್ಟರ್ ಸುನೀತಾ ಬಾಬಾ, ಏನು ಆಗಿಲ್ಲ.. ಎಲ್ಲಾ ಚೆನ್ನಾಗಿದೆ. ಕೆಲವೊಮ್ಮೆ ಇಂತಹ ಸಣ್ಣ ಏರಿಳಿತಗಳು ಆಗುತ್ತೆ ಅಷ್ಟೇ ಎಂದು ಯಾವುದೇ ನಾಚಿಕೆ ಇಲ್ಲದೆ ಹೇಳಿರುವುದು ಕಾಣಬಹುದಾಗಿದೆ.
ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಸಂತ್ರಸ್ತರೊಬ್ಬರು ದೂರು ನೀಡಿದ್ದು, ಇದರಂತೆ ಫಿರೋಜ್‌ಪುರ ರೇಂಜ್ ಇನ್ಸ್ ಪೆಕ್ಟರ್ ಗಗನ್ ದೀಪ್ ಕೌರ್ ಅವರ ತಂಡ ದಾಳಿ ನಡೆಸಿತ್ತು. ಆದರೆ ದಾಳಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ ವೇಳೆ, ನಗುತ್ತಾ ಮಾತನಾಡಿದ ಐಪಿಎಸ್ ಅಧಿಕಾರಿ, ಇಂತಹ ಸಂದರ್ಭದಲ್ಲಿ ಧೈರ್ಯವಾಗಿ ಇರಬೇಕು. ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಒಳ್ಳೆದಾಗುತ್ತದೆ ಎಂದು ಹೇಳಿದ್ದರು.
50 ಸಾವಿರ ಲಂಚ ಪಡೆಯುತ್ತಿದ್ದ ಅಧಿಕಾರಿ
ಇನ್ನು, ಲಂಚ ಪಡೆದ ಆರೋಪ ಮೇರೆ ಕೋಟಾ ಇಸಾ ಖಾನ್ ಸ್ಟೇಷನ್ ಹೌಸ್ ಆಫೀಸರ್ ಇನ್‌ಸ್ಪೆಕ್ಟರ್ ಸುನೀತಾ ಬಾಬಾ ಅಚವರೊಂದಿಗೆ ಅವರ ಗನ್ ಮ್ಯಾನ್ ಅವರನ್ನು ಬಂಧಿಸಲಾಗಿದೆ. ಮಾದಕ ವಸ್ತು ಸಾಗಾಣೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದರಂತೆ. ಆದರೆ ಈ ಪ್ರಕರಣದಲ್ಲಿ ಗ್ರಾಮ ಮತ್ತೋರ್ವ ವ್ಯಕ್ತಿಯನ್ನು ಸಿಲುಕಿಸಲು ಬೆದರಿಕೆ ಹಾಕಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈಗಾಗಲೇ ಮುಂಗುಡವಾಗಿ 50 ಸಾವಿರ ರೂಪಾಯಿ ಪಡೆದುಕೊಂಡಿದ್ದ ಅಧಿಕಾರಿ, ಉಳಿದ ಐವತ್ತು ಸಾವಿರ ರೂಪಾಯಿಯನ್ನು ಪಡೆದುಕೊಳ್ಳುತ್ತಿದ್ದ ವೇಳೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ದೂರು ಬಂದ ಬಳಿಕ ಪ್ರಾಥಮಿಕ ವಿಚಾರಣೆ ನಡೆಸಿದ ವಿಜಿಲೆನ್ಸ್ ಅಧಿಕಾರಿಗಳಿಗೆ ದೂರಿನಲ್ಲಿ ಸತ್ಯಾಂಶ ಇರುವುದು ಖಚಿತವಾಗಿತ್ತು. ಇದರಂತೆ ರಾತ್ರಿ 09 ಗಂಟೆಯ ಸಮಯದಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದರು. ಇದರಂತೆ ಟ್ರ್ಯಾಪ್ ಸೃಷ್ಟಿಸಿದ್ದ ವಿಜಿಲೆನ್ಸ್ ಅಧಿಕಾರಿಗಳು ಫೀಲ್ಟ್ಗೆ ಇಳಿದಿದ್ದರು. ಅಧಿಕೃತ ಸಾಕ್ಷಿಗಳ ಸಮ್ಮುಖದಲ್ಲಿಯೇ ಸಂತ್ರಸ್ತ ವ್ಯಕ್ತಿಯಿಂದ, ತಮ್ಮ ಗನ್ ಮ್ಯಾನ್ ಸಹಾಯದಿಂದ ಇನ್‌ಸ್ಪೆಕ್ಟರ್ 50 ಸಾವಿರ ಲಂಚ ಸ್ವೀಕರಿಸಿದ್ದರು. ಸದ್ಯ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ.


