ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಅಲ್ಲಿನ ನಾಗರಿಕರು ನಾವು ಪಾಕಿಸ್ತಾನಕ್ಕೆ ಸೇರಿದವರಲ್ಲ ಪಿಒಕೆ ಪಾಕಿಸ್ತಾನದ ಭಾಗವಲ್ಲ ಎಂದು ಗುಡುಗಿದ್ದಾರೆ. ಅಲ್ಲದೇ ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಮಾರ್ಗ ಬೇರೆಯೇ ಇರುತ್ತದೆ ಎನ್ನುವ ಮೂಲಕ  ಭಾರತಕ್ಕೆ ಸೇರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

  • -ಪಿಒಕೆಯಲ್ಲಿ ತಿಂಗಳಿನಿಂದ ನಡೆಯುತ್ತಿರುವ ಹೋರಾಟ
  • -ನಮಗೆ ಪಾಕ್‌ ಅಗತ್ಯವಿಲ್ಲ: ಸರ್ಕಾರಕ್ಕೆ ನೇರ ಸವಾಲು

ಇಸ್ಲಾಮಾಬಾದ್‌ (ಜು.1): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ‘ನಾವು ಪಾಕ್‌ನ ಭಾಗವೇ ಅಲ್ಲ’ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಸವಾಲೆಸೆಯುತ್ತಿದ್ದಾರೆ. ಅಲ್ಲದೆ, ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಬೇರೆ ಮಾರ್ಗದತ್ತ (ಭಾರತ) ತಿರುಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮಗೆ ಪಾಕಿಸ್ತಾನ ಬೇಡ

ಈದ್ಗಾ ಮೈದಾನದಲ್ಲಿ ನಡೆದ ಭಾರಿ ಪ್ರತಿಭಟನೆಯಲ್ಲಿ ಮಾತನಾಡಿದ ಜೆಎಎಸಿ ನಾಯಕ ಸರ್ದಾರ್ ಅಮಾನ್ ಖಾನ್, ‘ಪಿಒಕೆ ಪಾಕಿಸ್ತಾನದ ಭಾಗವಲ್ಲ. ನಮಗೆ ಪಾಕಿಸ್ತಾನ ಬೇಡ, ಆದರೆ ಪಾಕಿಸ್ತಾನಕ್ಕೆ ಪಿಒಕೆ ಅಗತ್ಯ. ನಾವು ಬೇರೆ ಮಾರ್ಗದತ್ತ (ಭಾರತ) ಹೊರಡುವ ಅಗತ್ಯವನ್ನು ಸೃಷ್ಟಿಸಬೇಡಿ. ಆ ದಾರಿ ತೆರೆದರೆ, ನೀವೇ ನಮ್ಮ ಬಳಿ ಬೇಡಿಕೊಳ್ಳುವ ಸ್ಥಿತಿ ಬರುತ್ತದೆ’ ಎಂದು ಎಚ್ಚರಿಸಿದ್ದಾರೆ.

ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ಏಕೆ?:

ಪಾಕ್ ಸರ್ಕಾರ ಪಿಒಕೆ ಪ್ರದೇಶಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣ. ಹೀಗಾಗಿ ಜೂ.9ರಿಂದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಪಾಕ್‌ ಅಧಿಕಾರಿಗಳು ಆಹಾರ ಮತ್ತು ಅಗತ್ಯ ವಸ್ತುಗಳ ಸರಬರಾಜು ನಿರ್ಬಂಧಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.