Asianet Suvarna News Asianet Suvarna News

ಏಕರೂಪ ನಾಗರಿಕ ಸಂಹಿತೆ ಕರಡು ಸಿದ್ಧ, ಶೀಘ್ರ ಸರ್ಕಾರಕ್ಕೆ ಹಸ್ತಾಂತರ: ಉತ್ತರಾಖಂಡ ಸಿಎಂ ಧಾಮಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ 2022ರ ಫೆಬ್ರವರಿಯಲ್ಲಿ ಧಾಮಿ ಘೋಷಿಸಿದ್ದರು. ಇದಾದ ಬಳಿಕ ಸರ್ಕಾರ ರಚನೆ ಮಾಡಿ ಮೊದಲ ಸಂಪುಟ ಸಭೆಯಲ್ಲಿಯೇ ಯುಸಿಸಿಗೆ ಅಂಗೀಕಾರ ನೀಡಿದ್ದರು.

uniform civil code likely to be passed in uttarakhand assembly session ash
Author
First Published Jan 27, 2024, 4:19 PM IST

ಡೆಹರಾಡೂನ್‌ (ಜನವರಿ 27, 2024): ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಐವರು ಸದಸ್ಯರ ಸಮಿತಿ ಕರಡು ಪ್ರತಿಯನ್ನು ಸಿದ್ಧಗೊಳಿಸಿದ್ದು, ಶೀಘ್ರವೇ ಸರ್ಕಾರಕ್ಕೆ ಹಸ್ತಾಂತರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಶುಕ್ರವಾರ ಹೇಳಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗುವುದು. ಇದಾದ ಬಳಿಕ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಮದುವೆ, ವಿಚ್ಛೇದನ, ಭೂಮಿ, ಆಸ್ತಿ, ವಂಶಪಾರಂಪರ್ಯತೆಗೆ ಸಂಬಂಧಿಸಿದಂತೆ ಒಂದು ಕಾನೂನು ಚೌಕಟ್ಟನ್ನು ಯುಸಿಸಿ ರಚಿಸಲಿದೆ. ಅಲ್ಲದೇ ಇದು ಸಾಮಾಜಿಕ ಸಾಮರಸ್ಯವನ್ನು ಮೂಡಿಸಿ, ಲಿಂಗಾಧಾರಿತ ತಾರತಮ್ಯವನ್ನು ಹೋಗಲಾಡಿಸುತ್ತದೆ ಎಂದು ಅವರು ಹೇಳಿದರು.

ಇದನ್ನು ಓದಿ: ಇಸ್ಲಾಮಿಕ್‌ ದೇಶಗಳಲ್ಲೂ ಸುಧಾರಣೆಯಾಗ್ತಿದೆ ವೈಯಕ್ತಿಕ ಕಾನೂನು: ಭಾರತದಲ್ಲಿ ಮಾತ್ರ Uniform Civil Codeಗೆ ತೀವ್ರ ವಿರೋಧ

ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ 2022ರ ಫೆಬ್ರವರಿಯಲ್ಲಿ ಧಾಮಿ ಘೋಷಿಸಿದ್ದರು. ಇದಾದ ಬಳಿಕ ಸರ್ಕಾರ ರಚನೆ ಮಾಡಿ ಮೊದಲ ಸಂಪುಟ ಸಭೆಯಲ್ಲಿಯೇ ಯುಸಿಸಿಗೆ ಅಂಗೀಕಾರ ನೀಡಿದ್ದರು. ಇದಾದ ಬಳಿಕ 5 ಮಂದಿಯ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ 60ಕ್ಕೂ ಹೆಚ್ಚು ಸಭೆ ನಡೆಸಿದ್ದು, 60 ಸಾವಿರಕ್ಕೂ ಹೆಚ್ಚು ಜನರ ಜೊತೆ ಸಂವಾದ ನಡೆಸಿ 2.3 ಲಕ್ಷ ಸಲಹೆಗಳನ್ನು ಸ್ವೀಕರಿಸಿತ್ತು.

 

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ನೆಹರೂ ಸಲಹೆ ಹಂಚಿಕೊಂಡ ಶಶಿ ತರೂರ್‌: ಕಾಂಗ್ರೆಸ್‌ ನಿಲುವು ಹೀಗಿದೆ..

ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ:

ಅಲ್ಪಸಂಖ್ಯಾತರ ಹೊರಗಿಡಿ ಎಂದ ಮುಸ್ಲಿಂ ಬೋರ್ಡ್‌

 

Follow Us:
Download App:
  • android
  • ios