ಪ್ರಯಾಣಿಕರ ಮನವಿಗೆ ಕೊನೆಗೂ ಓಗೊಟ್ಟಿರುವ ಕೇಂದ್ರ ಸರ್ಕಾರ, ವಿಮಾನಗಳಲ್ಲಿ ನಿಗದಿತ ಸೀಟುಗಳ ಆಯ್ಕೆ ಸೇರಿದಂತೆ ವಿವಿಧ ಸೇವೆಗಳಿಗೆ ವಿಧಿಸುವ ಹೆಚ್ಚುವರಿ ಶುಲ್ಕಗಳಿಗೆ ಬ್ರೇಕ್‌ ಹಾಕಿದೆ. ಅಲ್ಲದೆ ಶುಲ್ಕ ನಿಗದಿ ಸಂಬಂಧ ಪಾರದರ್ಶಕ ನೀತಿ ಅನುಸರಿಸುವಂತೆಯೂ ಸೂಚಿಸಿದೆ.

ನವದೆಹಲಿ : ಪ್ರಯಾಣಿಕರ ಮನವಿಗೆ ಕೊನೆಗೂ ಓಗೊಟ್ಟಿರುವ ಕೇಂದ್ರ ಸರ್ಕಾರ, ವಿಮಾನಗಳಲ್ಲಿ ನಿಗದಿತ ಸೀಟುಗಳ ಆಯ್ಕೆ ಸೇರಿದಂತೆ ವಿವಿಧ ಸೇವೆಗಳಿಗೆ ವಿಧಿಸುವ ಹೆಚ್ಚುವರಿ ಶುಲ್ಕಗಳಿಗೆ ಬ್ರೇಕ್‌ ಹಾಕಿದೆ. ಅಲ್ಲದೆ ಶುಲ್ಕ ನಿಗದಿ ಸಂಬಂಧ ಪಾರದರ್ಶಕ ನೀತಿ ಅನುಸರಿಸುವಂತೆಯೂ ಸೂಚಿಸಿದೆ.

Add Asianetnews Kannada as a Preferred SourcegooglePreferred

ನಾಗರಿಕ ವಿಮಾಯಾನ ಸಚಿವಾಲಯದ ಹೊಸ ಸೂಚನೆ

ನಾಗರಿಕ ವಿಮಾಯಾನ ಸಚಿವಾಲಯದ ಹೊಸ ಸೂಚನೆ ಅನ್ವಯ, ಎಲ್ಲಾ ವಿಮಾನಗಳಲ್ಲೂ ಶೇ.60ರಷ್ಟು ಸೀಟುಗಳನ್ನು ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆಯೇ ನೀಡುವಂತೆ ಆದೇಶಿಸಲಾಗಿದೆ. ಹೀಗಾಗಿ ವಿಮಾನದ ಮುಂಭಾಗದ ಸೀಟುಗಳು, ಕಿಟಕಿ ಬದಿಯ ಸೀಟು, ಮಧ್ಯದ ಸೀಟನ್ನು ಹೊರತುಪಡಿಸಿದ ಉಳಿದ ಸೀಟುಗಳನ್ನು ಆಯ್ಕೆ ಮಾಡಿಕೊಂಡರೆ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಬೀಳಲಿದೆ. ಪ್ರಸಕ್ತ ಶೇ.20ರಷ್ಟು ಸೀಟುಗಳನ್ನು ಮಾತ್ರವೇ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಬುಕ್‌ ಮಾಡಬಹುದಾಗಿದೆ. ಅದನ್ನು ಇದೀಗ ಶೇ.60ಕ್ಕೆ ಹೆಚ್ಚಿಸಲು ಸರ್ಕಾರ ಸೂಚಿಸಿದೆ.

ಇದರ ಜೊತೆಗೆ ಒಂದೇ ಪಿಎನ್‌ಆರ್‌ನಲ್ಲಿ ಸೀಟ್‌ ಬುಕ್‌ ಮಾಡಿದ ಪ್ರಯಾಣಿಕರಿಗೆ ಒಂದೇ ಕಡೆ ಸೀಟು ಲಭ್ಯವಾಗುವುದನ್ನು ಖಚಿತಪಡಿಸುವಂತೆಯೂ ವಿಮಾನಯಾನ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ.

ಪಾರದರ್ಶಕ ನೀತಿ:

ಇದೇ ವೇಳೆ ಕ್ರೀಡಾ ಉಪಕರಣ, ಸಂಗೀತ ಸಾಮಗ್ರಿ ಮತ್ತು ಸಾಕು ಪ್ರಯಾಣಿಗಳ ಪ್ರಯಾಣಕ್ಕೆ ವಿಧಿಸುವ ಶುಲ್ಕ ಸಂಬಂಧ ಪಾರದರ್ಶಕ ನೀತಿ ಪಾಲಿಸುವಂತೆಯೂ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.