ಏಕರೂಪ ನಾಗರಿಕ ಸಂಹಿತೆ ಬಗ್ಗೆ ನೆಹರೂ ಸಲಹೆ ಹಂಚಿಕೊಂಡ ಶಶಿ ತರೂರ್‌: ಕಾಂಗ್ರೆಸ್‌ ನಿಲುವು ಹೀಗಿದೆ..

ಏಕರೂಪ ನಾಗರಿಕ ಸಂಹಿತೆಯ ಕುರಿತ ಸರ್ಕಾರದ ಕರಡು ಏನು ಹೇಳುತ್ತದೆ ಎಂಬುದನ್ನು ನೋಡಲು ತಮ್ಮ ಪಕ್ಷವು ಕಾಯಲಿದೆ ಎಂದು ಶಶಿ ತರೂರ್‌ ಹೇಳಿದ್ದಾರೆ.

jawaharlal nehru said ucc desirable but need to take everyone along shashi tharoor ash

ನವದೆಹಲಿ (ಜುಲೈ 10, 2023): ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದ ಬಳಿಕ  ಪ್ರಸ್ತಾವಿತ ಸಮಾನ ನಾಗರಿಕ ಕಾನೂನುಗಳ ಬಗ್ಗೆ ದೇಶಾದ್ಯಂತ ಚರ್ಚೆಗಳು ಹುಟ್ಟಿಕೊಂಡಿವೆ. ಈ ತಿಂಗಳು ಪ್ರಾರಂಭವಾಗಲಿರುವ ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಯುಸಿಸಿಯನ್ನು ಮಂಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮುಸ್ಲಿಂ ಸಂಘಟನೆಗಳು ಇದನ್ನು ವಿರೋಧಿಸುತ್ತಲೇ ಇದ್ದರೂ, ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ಯುಸಿಸಿಗೆ ಸಂಬಂಧಿಸಿದಂತೆ ಪಕ್ಷದ ನಿಲುವಿನ ಬಗ್ಗೆ ಹೇಳಿಕೆ ನೀಡಿದ್ದಾರೆ.

ಅಲ್ಲದೆ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಜವಾಹರಲಾಲ್‌ ನೆಹರೂ ಏನು ಹೇಳಿದ್ದರು ಎಂಬ ಬಗ್ಗೆಯೂ ಶಶಿ ತರೂರ್‌ ಹೇಳಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು 
"ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಈ ಕಲ್ಪನೆಯು ಸಂಪೂರ್ಣವಾಗಿ ಅಪೇಕ್ಷಣೀಯವಾಗಿದೆ. ಆದರೆ ನೀವು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು" ಎಂದು ಹೇಳಿದ್ದರು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. 

ಇದನ್ನು ಓದಿ: ಇಸ್ಲಾಮಿಕ್‌ ದೇಶಗಳಲ್ಲೂ ಸುಧಾರಣೆಯಾಗ್ತಿದೆ ವೈಯಕ್ತಿಕ ಕಾನೂನು: ಭಾರತದಲ್ಲಿ ಮಾತ್ರ Uniform Civil Codeಗೆ ತೀವ್ರ ವಿರೋಧ

ಹಾಗೂ, ಈ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳುವ ಮೊದಲು ಏಕರೂಪ ನಾಗರಿಕ ಸಂಹಿತೆಯ ಕುರಿತ ಸರ್ಕಾರದ ಕರಡು ಏನು ಹೇಳುತ್ತದೆ ಎಂಬುದನ್ನು ನೋಡಲು ತಮ್ಮ ಪಕ್ಷವು ಕಾಯಲಿದೆ ಎಂದೂ ಶಶಿ ತರೂರ್‌ ಹೇಳಿದ್ದಾರೆ. ಸರ್ಕಾರದ ಪ್ರಸ್ತಾವನೆ ಏನು ಎಂಬುದನ್ನು ಮೊದಲು ನೋಡಬೇಕು. ಸರ್ಕಾರವು ಇನ್ನೂ ಕರಡನ್ನು ಮಂಡಿಸಿಲ್ಲ ಅಥವಾ ಮಧ್ಯಸ್ಥಗಾರರೊಂದಿಗೆ ಯಾವುದೇ ಚರ್ಚೆಯನ್ನು ಪ್ರಾರಂಭಿಸಿಲ್ಲ ಎಂದೂ ಕೆರಳದ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಆದ್ದರಿಂದ, ಕರಡು ಲಭ್ಯವಾಗುವವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಯುಸಿಸಿ ಸುತ್ತ ಇರುವ ಕಾಳಜಿ ಮತ್ತು ಆತಂಕಗಳು
ಈ ಮಧ್ಯೆ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಶಿ ತರೂರ್, ಇದು ವಿವಿಧ ಸಮುದಾಯಗಳ ಹಕ್ಕುಗಳ ನಾಶಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಹಿಂದೂ ಕೋಡ್ ಬಿಲ್ ಅನ್ನು ತರಲು 9 ವರ್ಷಗಳು ಬೇಕಾಯಿತು ಮತ್ತು ಅಂತಹ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಸಮಯ ತೆಗೆದುಕೊಳ್ಳುತ್ತದೆ ಎಂದೂ ಶಶಿ ತರೂರ್‌ ಅವರು ಸೂಚಿಸಿದರು.

ಇದನ್ನೂ ಓದಿ: ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ: ಅಲ್ಪಸಂಖ್ಯಾತರ ಹೊರಗಿಡಿ ಎಂದ ಮುಸ್ಲಿಂ ಬೋರ್ಡ್‌

ಯುಸಿಸಿಯನ್ನು ವಿರೋಧಿಸುತ್ತದೆ AIMPLB 
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕೂಡ ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸಿದೆ. ಎಐಎಂಪಿಎಲ್‌ಬಿ ಮುಸ್ಲಿಂ ಧಾರ್ಮಿಕ ಮುಖಂಡರಿಂದ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ತನ್ನ ಪ್ಲ್ಯಾನ್‌ಗಳನ್ನು ಕೈಬಿಡುವಂತೆ ಒತ್ತಾಯಿಸಿದೆ. ಕಾನೂನು ಆಯೋಗದ ಶಿಫಾರಸುಗಳಿಗೆ ಪ್ರತಿಕ್ರಿಯಿಸಲು ಮತ್ತು ಯುಸಿಸಿ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸುವಂತೆ ಅವರು ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾರೆ.

SGPC ಯಿಂದ್ಲೂ ಯುಸಿಸಿಗೆ ವಿರೋಧ
ಅತಿದೊಡ್ಡ ಸಿಖ್ ಸಂಘಟನೆಯಾದ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (ಎಸ್‌ಜಿಪಿಸಿ) ಕೂಡ ಯುಸಿಸಿಗೆ ತನ್ನ ವಿರೋಧ ವ್ಯಕ್ತಪಡಿಸಿದೆ. SGPC ಪ್ರಕಾರ, UCC ದೇಶದ ಅಲ್ಪಸಂಖ್ಯಾತ ಸಮುದಾಯಗಳ ವಿಶಿಷ್ಟ ಗುರುತನ್ನು ಹಾನಿಗೊಳಿಸುತ್ತದೆ. ಶನಿವಾರ (ಜುಲೈ 8) ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸಂವಿಧಾನವು “ವಿವಿಧತೆಯಲ್ಲಿ ಏಕತೆ” ತತ್ವವನ್ನು ಗುರುತಿಸಿರುವುದರಿಂದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿಲ್ಲ ಎಂದೂ ಸದಸ್ಯರು ಹೇಳಿದರು.

ಇದನ್ನೂ ಓದಿ: ತೆಲಂಗಾಣದಲ್ಲೂ ಕೈ ‘ಗ್ಯಾರಂಟಿ’ ಘೋಷಣೆ; ಏಕರೂಪ ಸಂಹಿತೆ ಬಗ್ಗೆ ಕಾದು ನೋಡುವ ತಂತ್ರ!

Latest Videos
Follow Us:
Download App:
  • android
  • ios