MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ವಿಮಾನ ರೀತಿಯ ಸೌಕರ್ಯ, 180ಕಿ.ಮೀ ಸ್ಪೀಡ್, ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ವಿಶೇಷತೆ

ವಿಮಾನ ರೀತಿಯ ಸೌಕರ್ಯ, 180ಕಿ.ಮೀ ಸ್ಪೀಡ್, ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ವಿಶೇಷತೆ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಐಷಾರಾಮಿತನ, 180 ಕಿಲೋಮೀಟರ್ ಸ್ಪೀಡ್ ಸೇರಿದಂತೆ ಹಲವು ವಿಶೇಷತೆಗಳು ಈ ರೈಲಿನಲ್ಲಿದೆ. ಪ್ರಯಾಣದ ಸಮಯ ಸೇರಿದಂತೆ ಡಿಟೇಲ್ಸ್ ಇಲ್ಲಿದೆ.

1 Min read
Author : Chethan Kumar
Published : Jul 06 2026, 06:10 PM IST
Share this Photo Gallery
  • FB
  • TW
  • Linkdin
  • Whatsapp
15
ವಂದೇ ಭಾರತ್ ಸ್ಲೀಪರ್ ಸ್ಪೆಷಾಲಿಟಿ
Image Credit : stockPhoto

ವಂದೇ ಭಾರತ್ ಸ್ಲೀಪರ್ ಸ್ಪೆಷಾಲಿಟಿ

ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರ ಹಲವು ಸಮಸ್ಸೆಗಳಿಗೆ ಉತ್ತರವಾಗಿದೆ. ರೈಲಿನ ಸ್ಲೀಪರ್ ಬರ್ತ್ ಐಷಾರಾಮಿ ಹೊಟೆಲ್ ರೀತಿಯಲ್ಲಿದೆ. ಅಷ್ಟೇ ಲಕ್ಷುರಿ ಫೀಲ್ ನೀಡಲಾಗಿದೆ. ಜೊತೆಗೆ ರೈಲು 180 ಕಿಲೋಮೀಟರ್ ವೇಗದಲ್ಲಿ ಸಾಗಲಿದೆ. ಹೀಗಾಗಿ ಪ್ರಯಾಣಧ ಅವಧಿಯೂ ಕಡಿತಗೊಳ್ಳಲಿದೆ. ಬೆಂಗಳೂರು ಹಾಗೂ ಮುಂಬೈ ಇದೀಗ ಮತ್ತಷ್ಟು ಹತ್ತಿರವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರೈಲಿನ ವಿಶೇಷತೆ
Image Credit : Getty

ರೈಲಿನ ವಿಶೇಷತೆ

ರೈಲಿನಲ್ಲಿ ಬಯೋ-ವ್ಯಾಕ್ಯೂಮ್ ಶೌಚಾಲಯಗಳನ್ನು ಅಳವಡಿಸಲಾಗುತ್ತಿದ್ದು, ಇವು ವಾಸನೆ ರಹಿತ ಮತ್ತು ಸ್ವಚ್ಛವಾಗಿರಲಿವೆ. ರೈಲು ಚಲಿಸುವಾಗ ಒಳಗಡೆ ಯಾವುದೇ ಕರ್ಕಶ ಶಬ್ದ ಕೇಳಿಸದಂತೆ ‘ಸೌಂಡ್ ಪ್ರೂಫಿಂಗ್’ ತಂತ್ರಜ್ಞಾನವನ್ನು ಬಳಸಲಾಗಿದೆ.

Related Articles

Related image1
Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!
Related image2
ನಮ್ಮ ಪಕ್ಕದ ರಾಜ್ಯದಲ್ಲೇ ಇದೆ ಮನುಷ್ಯನಿಗಿಂತ ನಿಧಾನವಾಗಿ ಚಲಿಸುವ ರೈಲು! ಇದರಲ್ಲಿ ಹೋಗೋಕೆ ಜನ ಯಾಕೆ ಮುಗಿಬೀಳ್ತಾರೆ ಗೊತ್ತಾ?
35
ವಿಮಾನದ ರೀತಿಯ ಸೌಕರ್ಯ
Image Credit : Asianet News

ವಿಮಾನದ ರೀತಿಯ ಸೌಕರ್ಯ

ರೈಲಿನ ಒಳಭಾಗವನ್ನು ಪ್ರೀಮಿಯಂ ಹಾಗೂ ಐಷಾರಾಮಿ ಲುಕ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ದರ್ಜೆಯ ಬರ್ತ್‌ಗಳು (ಮಲಗುವ ಆಸನಗಳು), ರೋಮಾಂಚಕ ಲೈಟಿಂಗ್ ವ್ಯವಸ್ಥೆ ಇರಲಿದೆ.ಪ್ರತಿಯೊಂದು ಕೋಚ್‌ನಲ್ಲಿಯೂ ಸ್ವಯಂಚಾಲಿತ ಸೆನ್ಸಾರ್ ಆಧರಿತ ಒಳಗಿನ ಬಾಗಿಲುಗಳು, ಅಗ್ನಿ ನಿರೋಧಕ ವ್ಯವಸ್ಥೆ ಮತ್ತು ಜಾಗತಿಕ ದರ್ಜೆಯ ‘ಕವಚ್’ (Kavach) ರೈಲು ಅಪಘಾತ ನಿಯಂತ್ರಣ ತಂತ್ರಜ್ಞಾನ ಇರಲಿದೆ.

45
ಬೆಂಗಳೂರು ಮುಂಬೈ ಸಮಯದ ಅವಧಿ
Image Credit : Asianet News

ಬೆಂಗಳೂರು ಮುಂಬೈ ಸಮಯದ ಅವಧಿ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧತೆ ನಡೆಯುತ್ತಿದೆ. ಸಾಮಾನ್ಯವಾಗಿ ಸದ್ಯ ಬೆಂಗಳೂರು ಮುಂಬೈ ರೈಲು ಪ್ರಯಾಣಕ್ಕೆ 20 ರಿಂದ 24 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ ವಂದೇ ಭಾರತ್ ಸ್ಲೀಪರ್ ರೈಲು 14 ರಿಂದ 18 ಗಂಟೆ ಸಮಯ ಸಾಕು.

55
ಮಾರ್ಗ ಯಾವುದು
Image Credit : X

ಮಾರ್ಗ ಯಾವುದು

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಅಥವಾ ಯಶವಂತಪುರ ರೈಲು ನಿಲ್ದಾಣದಿಂದ ಈ ಸ್ಲೀಪರ್ ರೈಲು ಹೊರಡಲಿದೆ. ಕರ್ನಾಟಕದ ಪ್ರಮುಖ ನಗರಗಳಾದ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ ಮೂಲಕ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತಲುಪಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತ ಸುದ್ದಿ
ಭಾರತೀಯ ರೈಲ್ವೆ
ರೈಲು

Latest Videos
Recommended Stories
Recommended image1
Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!
Recommended image2
ರಾಮ ಮಂದಿರದಲ್ಲಿ ಕಳ್ಳತನ ಘಟನೆ: ಭಾಗಿಯಾದವರ ಬಗ್ಗೆ ಶಾಕಿಂಗ್​ ಮಾಹಿತಿ ಬಾಯ್ದಿಟ್ಟ ಆರೋಪಿ
Recommended image3
ಪ್ರೀತಿಗೆ ತಿರುಗಿದ ಸಹೋದರಿಯರ ಸ್ನೇಹ: 8 ಲಕ್ಷ ಸಾಲ ಮಾಡಿ ಲಿಂಗ ಬದಲಿಸಿ ಮದುವೆ
Related Stories
Recommended image1
Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!
Recommended image2
ನಮ್ಮ ಪಕ್ಕದ ರಾಜ್ಯದಲ್ಲೇ ಇದೆ ಮನುಷ್ಯನಿಗಿಂತ ನಿಧಾನವಾಗಿ ಚಲಿಸುವ ರೈಲು! ಇದರಲ್ಲಿ ಹೋಗೋಕೆ ಜನ ಯಾಕೆ ಮುಗಿಬೀಳ್ತಾರೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved