ವಿಮಾನ ಲ್ಯಾಂಡಿಂಗ್‌ನ ಕಾಕ್‌ಪಿಟ್ ದೃಶ್ಯ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. ಮೋಡಗಳ ಮೂಲಕ ವಿಮಾನ ಇಳಿಯುವಾಗ ಪೈಲಟ್‌ಗಳಿಗೆ ಕ್ಷಣಕಾಲ ಏನೂ ಕಾಣುವುದಿಲ್ಲ. ನಂತರ ಭೂಮಿ, ರನ್‌ವೇ ಕಾಣಿಸಿಕೊಂಡು ಸುರಕ್ಷಿತ ಲ್ಯಾಂಡಿಂಗ್ ಆಗುತ್ತದೆ. ಕೆಲ ನೆಟ್ಟಿಗರು ವಿಡಿಯೋದ ನೈಜತೆಯನ್ನು ಪ್ರಶ್ನಿಸಿದ್ದಾರೆ. ಟೇಕಾಫ್‌ಗಿಂತ ಲ್ಯಾಂಡಿಂಗ್ ಕಠಿಣ ಎಂದು ತಿಳಿದುಬಂದಿದೆ.
ವಿಮಾನದಲ್ಲಿ ಮೊದಲ ಬಾರಿ ಅಥವಾ ಯಾವಾಗಲೇ ಪ್ರಯಾಣ ಮಾಡುವ ಪ್ರಯಾಣಿಕರ ಆಸೆ ಕಿಟಕಿ ಪಕ್ಕದ ಆಸನದಲ್ಲಿಯೇ ಕುಳಿತು ಪ್ರಯಾಣಿಸಬೇಕೆಂದು ಬಯಸುತ್ತಾರೆ. ವಿಂಡೋ ಸೀಟ್‌ನಲ್ಲಿ ಕುಳಿತೆರ ಮೋಡಗಳ ಆಟ ಮತ್ತು ಮೇಲಿನಿಂದ ಭೂಮಿಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಪ್ಲೇನ್ ಲ್ಯಾಂಡ್ ಅಥವಾ ಟೇಕಾಫ್ ಆಗುವ ವೇಳೆ ನಗರದ ಪಕ್ಷಿನೋಟವನ್ನು ನೋಡಬಹುದು. ಆದ್ರೆ ಪೈಲಟ್‌ಗಳ ಮುಂದೆ ದೊಡ್ಡ ಗ್ಲಾಸ್ ಇರುತ್ತದೆ. ವಿಮಾನ ಟೇಕಾಫ್ ಆಗುವ ಅವರಿಗೆ ಕಾಣುವ ದೃಶ್ಯ ಹೇಗಿರುತ್ತೆ ಎಂದು ಊಹಿಸಿಕೊಂಡಿದ್ದೀರಾ? ಖಂಡಿತ ಆ ದೃಶ್ಯ ಅತ್ಯಂತ ರೋಮಾಂಚನದ ಅನುಭವವನ್ನು ನೀಡುತ್ತದೆ. ಈ ಕುರಿತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಮಾನ ಲ್ಯಾಂಡ್ ಆಗುವ ವೇಳೆ ಕಾಕ್‌ಪಿಟ್‌ನಿಂದ ಹೇಗೆ ಕಾಣುತ್ತೆ ಎಂಬುದನ್ನು ತೋರಿಸುವ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. @insidehistory ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಕ್‌ಪಿಟ್‌ನಿಂದ ಸೆರೆ ಹಿಡಿಯಲಾದ ಲ್ಯಾಂಡಿಂಗ್ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವಿಮಾನವೊಂದು ಲ್ಯಾಂಡ್ ಆಗುವಾಗ ಹೇಗೆ ಮೋಡಗಳ ಮಧ್ಯೆ ಸಾಗುತ್ತೆ ಎಂಬುದನ್ನು ನೋಡಬಹುದು. ಬಹುತೇಕ ಸಿನಿಮಾಗಳಲ್ಲಿ ವಿಮಾನ ಲ್ಯಾಂಡ್ ಹೇಗೆ ಆಗುತ್ತೆ ಎಂಬುದನ್ನು ತೋರಿಸಲಾಗಿರುತ್ತದೆ. ಆದ್ರೆ ಇದರಲ್ಲಿ ಕೆಲ ತಂತ್ರಜ್ಞಾನ ಬಳಕೆ ಮಾಡೋದರಿಂದ ನೈಜತೆ ಇರಲ್ಲ.
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪೈಲಟ್ ನಂಬಿರುತ್ತಾರೆ. ಪೈಲಟ್‌ಗಳು ನಮ್ಮನ್ನು ನಿಗದಿತ ಸಮಯದಲ್ಲಿ ಗಮ್ಯಸ್ಥಾನಕ್ಕೆ ತಲುಪಿಸುತ್ತಾರೆ ಎಂಬ ನಂಬಿಕೆಯಿಂದ ವಿಮಾನದಲ್ಲಿ ನೆಮ್ಮದಿಯಿಂದ ಪ್ರಯಾಣಿಸುತ್ತಾರೆ. ಪೈಲಟ್‌ಗಳು ಸಹ ಅಷ್ಟೇ ನಿಷ್ಠೆಯಿಂದ ಈ ಕೆಲಸ ಮಾಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿ ಬಂದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪ್ರಯತ್ನಿಸುತ್ತಾರೆ. ವಿಮಾನ ಲ್ಯಾಂಡ್ ಆಗುವಾಗ ಪೈಲಟ್ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ನೋಡಿದ್ರೆ ನಿಮ್ಮ ವಿಮಾನ ಪ್ರಯಾಣದ ವೇಳೆ ಈ ದೃಶ್ಯ ನಿಮ್ಮ ಕಣ್ಮುಂದೆ ಬರುತ್ತದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವೈರಲ್ ವಿಡಿಯೋವನ್ನು ಪೈಲಟ್‌ಗಳು ಕುಳಿತುಕೊಳ್ಳುವ ಕಾಕ್‌ಪಿಟ್‌ನಿಂದ ಸೆರೆ ಹಿಡಿಯಲಾಗಿದೆ. ವಿಮಾನ ಅತ್ಯಂತ ವೇಗವಾಗಿ ಸಾಗುತ್ತಿರುತ್ತದೆ. ಮೋಡಗಳ ಮಧ್ಯೆ ವಿಮಾನ ಬಂದಾಗ ಕೆಲವು ಕ್ಷಣ ಮುಂದೆ ಏನಿದೆ ಅನ್ನೋದು ಪೈಲಟ್‌ಗಳಿಗೂ ಕಾಣಿಸಲ್ಲ. ನಂತರ ಭೂಮಿ ಮತ್ತು ರನ್‌ವೇ ಕಾಣಿಸುತ್ತದೆ. ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನ ಲ್ಯಾಂಡ್ ಆಗಿ ರನ್‌ವೇನಲ್ಲಿ ಚಲಿಸಲು ಆರಂಭಿಸುತ್ತದೆ.
ಇದನ್ನೂ ಓದಿ: ವ್ಯಾಪಾರಿಯನ್ನು ಮದ್ವೆಯಾದ್ರೆ ಹೀಗೆ ಆಗೋದು? ಯುವತಿಯರೇ ಮಿಸ್ ಮಾಡದೇ ಈ ವಿಡಿಯೋ ನೋಡಿ
ಟೇಕಾಫ್‌ಗಿಂತ ಲ್ಯಾಂಡಿಂಗ್ ತುಂಬಾ ಕಷ್ಟ?
ಟೇಕಾಫ್‌ಗಿಂತ ವಿಮಾನ ಲ್ಯಾಂಡಿಂಗ್ ಮಾಡೋದು ಕಷ್ಟಕರವಾದ ಕೆಲಸವಾಗಿದೆ. ಪೈಲಟ್ ಎಲ್ಲವನ್ನು ಸ್ಪಷ್ಟವಾಗಿ ನೋಡಬಹುದು ಎಂದು ಖಚಿತಪಡಿಸಿಕೊಂಡ ನಂತರವೇ ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಪೈಲಟ್‌ಗಳಿಂದ ಖಚಿತತೆ ಸಿಕ್ಕನಂತರವೇ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಬಹುದು. ದಟ್ಟವಾದ ಮೋಡಗಳ ಮೂಲಕ ಇಳಿಯುವಾಗ ಪೈಲಟ್‌ಗೆ ಹೆಚ್ಚು ಸಮಯದವರೆಗೆ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ. ಇದೇ ರೀತಿಯ ದೃಶ್ಯವನ್ನು ನೀವು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು. ಏನು ಕಾಣಿಸುತ್ತಿಲ್ಲ ಎಂಬ ಸಮಯದಲ್ಲಿಯೇ ವಿಮಾನ ಭೂಮಿಯ ಸಮೀಪಕ್ಕೆ ಬಂದಿರುತ್ತೆ ಮತ್ತು ಎಲ್ಲವೂ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಪೈಲಟ್ ಪ್ರತಿಕ್ಷಣವೂ ಎಚ್ಚರಿಕೆಯಿಂದಿರಬೇಕು.
ನೆಟ್ಟಿಗರಿಂದ ಸಣ್ಣ ಅನುಮಾನ
ವೈರಲ್ ಆಗಿರುವ ಈ ವಿಡಿಯೋ ಇಲ್ಲಿಯವರೆಗೆ 2 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ಜನರು ತಮ್ಮ ವಿಮಾನಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನಂತರ ತನ್ನ ಕಣ್ಣುಗಳನ್ನು ನಂಬಲು ಸಾಧ್ಯವಾಗಲಿಲ್ಲ ಎಂದು ಓರ್ವ ನೆಟ್ಟಿಗ ಬರೆದ್ರೆ ತುಂಬಾ ರೋಮಾಂಚನಕಾರಿಯಾಗಿದೆ ಎಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನಕಲಿ ಅಥವಾ ವಿಡಿಯೋ ಸ್ಪೀಡ್ ಹೆಚ್ಚಿಸಲಾಗಿದೆ ಎಂದ ಅನುಮಾನನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನಿಮಗೆ ಹೇಗೆ ಅನ್ನಿಸಿದೆ ಎಂಬುದರ ಬಗ್ಗೆ ತಪ್ಪದೇ ಕಮೆಂಟ್ ಮಾಡಿ.
ಇದನ್ನೂ ಓದಿ: ಆಸ್ಪತ್ರೆಯಲ್ಲೇ ಮದುವೆ: ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ


