ಮದುವೆ ಮಂಟಪದಲ್ಲಿ ವರನಿಗೆ ಗ್ರಾಹಕನ ಕರೆ ಬಂದ ವಿಡಿಯೋ ವೈರಲ್ ಆಗಿದೆ. ಶಾಸ್ತ್ರದ ನಡುವೆಯೂ ವ್ಯಾಪಾರಿ ವರ ಗ್ರಾಹಕನೊಂದಿಗೆ ಮಾತನಾಡಿದ್ದು, ವಧು ಸೇರಿದಂತೆ ಎಲ್ಲರೂ ನಕ್ಕರು. ಈ ವಿಡಿಯೋಗೆ ಎರಡು ಕೋಟಿಗೂ ಅಧಿಕ ವೀಕ್ಷಣೆ ಬಂದಿದ್ದು, ನೆಟ್ಟಿಗರು ವರನ ವೃತ್ತಿಪರತೆ ಮೆಚ್ಚಿದ್ದಾರೆ. ವಧುವಿಗೆ "ವ್ಯಾಪಾರಿಯನ್ನು ಮದುವೆಯಾಗಿದ್ದೀರಿ ಎಂಬುದನ್ನು ಮರೆಯಬೇಡಿ" ಎಂದು ಸಲಹೆ ನೀಡಿದ್ದಾರೆ.

Newly Married Couple: ಯುವತಿಯರು ತಾವು ಮದುವೆ ಹುಡುಗನ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಕೆಲವರು ತಮ್ಮಿಷ್ಟದ ಹುಡುಗನನ್ನು ಮದುವೆಯದ್ರೆ, ಬಹುತೇಕರು ಪೋಷಕರು ತೋರಿಸಿದ ಹುಡುಗನೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಾರೆ. ಹುಡುಗ ಚೆನ್ನಾಗಿ ಓದಿಕೊಂಡಿರಬೇಕು, ಕೈತುಂಬಾ ಸಂಬಳ ಬರೋ ಹುದ್ದೆಯಲ್ಲಿರಬೇಕು ಎಂದು ಬಹುತೇಕ ಯುವತಿಯುರು ಬಯಸುತ್ತಾರೆ. ಅದರಲ್ಲಿಯೂ ಹುಡುಗ ಸರ್ಕಾರಿ ಉದ್ಯೋಗದಲ್ಲಿದ್ರೆ ಪೋಷಕರು ತಮ್ಮ ಮಗಳನ್ನು ಧಾರೆ ಎರೆಯಲು ಮುಂದಾಗುತ್ತಾರೆ. ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವ್ಯಾಪಾರಿ ಹುಡುಗನನ್ನು ಮದುವೆಯಾದ್ರೆ ಹೀಗೆ ಆಗೋದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 

ವ್ಯಾಪಾರಿಗಳ ಜೀವನ ತುಂಬಾ ವಿಭಿನ್ನವಾಗಿರುತ್ತದೆ. ಬೆಳಗ್ಗೆ ಅಂಗಡಿ ತೆಗೆದ ಕೂಡಲೇ ಗ್ರಾಹಕರು ಬರೋದನ್ನು ನಿರೀಕ್ಷಿಸುತ್ತಿರುತ್ತಾರೆ. ಕೆಲವೊಮ್ಮೆ ಅಂಗಡಿ ಬಾಗಿಲು ಹಾಕುವಾಗಲೂ ಗ್ರಾಹಕರು ಬಂದ್ರೂ ಬೇಸರ ಮಾಡಿಕೊಳ್ಳಲ್ಲ. ಅಷ್ಟು ಮಾತ್ರವಲ್ಲ ಮನೆಗೆ ಹೋದ ನಂತರವೂ ಇವತ್ತು ಎಷ್ಟು ವ್ಯಾಪಾರ ಆಯ್ತು? ಸ್ಟಾಕ್ ಕಡಿಮೆಯಾಗಿದೆಯಾ ಎಂದು ಚಿಂತಿಸುತ್ತಿರುತ್ತಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆಯಾಗಿರುವ ಜೋಡಿ ಮನೆಯೊಳಗೆ ಪ್ರವೇಶ ಮಾಡುವಾಗ ವರನಿಗೆ ಗ್ರಾಹಕನಿಂದ ಕರೆ ಬರುತ್ತದೆ. 

ವೈರಲ್ ಆಗಿರುವ ವಿಡಿಯೋವನ್ನು ಖುಷ್ಬೂ ಮತ್ತು ಆಶ್ರಯ್ (imkhushboo__2.o and aashray__arora) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 2 ಕೋಟಿಗೂ ಅಧಿಕ ವ್ಯೂವ್ ಬಂದಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. 14 ಲಕ್ಷಕ್ಕೂ ಅಧಿ ಲೈಕ್ಸ್ ಪಡೆದುಕೊಂಡಿದೆ. ಹುಡುಗಿಯರು ಈ ವಿಡಿಯೋಗೆ ತಮಾಷೆಯಾಗಿ ಕಮೆಂಟ್ ಮಾಡಿದ್ರೆ, ಪುರುಷರು ವರನ ವ್ಯಾಪಾರದ ಬದ್ಧತೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 

ವೈರಲ್ ವಿಡಿಯೋದಲ್ಲಿ ಏನಿದೆ?
ಮದುವೆಯಾಗಿರೋ ಬಂದಿರುವ ನವಜೋಡಿಯನ್ನು ಕುಟುಂಬಸ್ಥರು ಮನೆ ತುಂಬಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ವರನ ಮೊಬೈಲ್ ರಿಂಗ್ ಆಗುತ್ತದೆ. ಕಾಲ್ ರಿಸೀವ್ ಮಾಡಿದಾಗಗ ವರನಿಗೆ ಅದು ತನ್ನ ಗ್ರಾಹಕ ಎಂದು ಗೊತ್ತಾಗುತ್ತದೆ. ಶಾಸ್ತ್ರದಲ್ಲಿ ಬ್ಯುಸಿಯಾಗಿದ್ರೂ ವರ, ತಾಳ್ಮೆಯಿಂದ ಗ್ರಾಹಕನೊಂದಿಗೆ ಮಾತನಾಡುತ್ತಾನೆ. ಇಂದು ನಮ್ಮ ಅಂಗಡಿ ಬಂದ್ ಆಗಿದೆ. ನಾಳೆ ನಿಮಗೆ ಹೇಳುವೆ ಎಂದು ವರ ಹೇಳುತ್ತಾನೆ. ಬಹುಶಃ ಗ್ರಾಹಕ ಇಂದಿನ ಬೆಲೆ ಎಷ್ಟಿದೆ ಎಂದಾದ್ರೂ ಅಂತ ಕೇಳಿದಾಗ ವರ 180 ರೂಪಾಯಿ ಎಂದು ಹೇಳುತ್ತಾನೆ. 

ಇದನ್ನೂ ಓದಿ: ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ

ವರನ ಮಾತುಗಳನ್ನು ಕೇಳಿ ವಧು ಸೇರಿದಂತೆ ಸುತ್ತಲೂ ನಿಂತಿದ್ದ ಮಹಿಳೆಯರು ಜೋರಾಗಿ ನಗಲು ಆರಂಭಿಸುತ್ತಾರೆ. ಮಹಿಳೆಯೊಬ್ಬರು, ಲಕ್ಷ್ಮೀಯನ್ನು ಹೋಗಲು ಬಿಡಲ್ಲ ಎಂದು ತಮಾಷೆ ಮಾಡುತ್ತಾರೆ. ಅಷ್ಟರಲ್ಲಿಯೇ ಹಿಂದಿನಿಂದ ವ್ಯಕ್ತಿ, ವರನ ಕೈಯಲ್ಲಿದ್ದ ಮೊಬೈಲ್ ತೆಗೆದುಕೊಂಡು ಗ್ರಾಹಕನೊಂದಿಗೆ ಮಾತನಾಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. 

ನೆಟ್ಟಿಗರು ಹೇಳಿದ್ದೇನು? 
ಈ ವಿಡಿಯೋ ನೋಡಿದ ನೆಟ್ಟಿಗರು, ನೀನು ಮದುವೆಯಾಗಿರೋದು ಓರ್ವ ವ್ಯಾಪಾರಿ ಅಂತ ಮರೆಯಬೇಡ ಎಂದು ವಧುವಿಗೆ ಸಲಹೆ ನೀಡಿದ್ದಾರೆ. ವ್ಯಾಪಾರಿಗಳು ಯಾವುದೇ ಕಾರಣಕ್ಕೂ ತಮ್ಮ ಗ್ರಾಹಕರನ್ನು ಕಳೆದುಕೊಳ್ಳಲು ಇಷ್ಟಪಡಲ್ಲ. ಎಷ್ಟೇ ಒತ್ತಡ, ಬೇಸರವಿದ್ರೂ ಗ್ರಾಹಕರೊಂದಿಗೆ ತುಂಬಾನೇ ಮೃದುವಾಗಿ ಮಾತನಾಡುತ್ತಾರೆ. ನಿಮಿಬ್ಬರ ಜೋಡಿ ತುಂಬಾ ಮುದ್ದಾಗಿದೆ. ಸೋ ಕ್ಯೂಟ್. ಪುಣ್ಯಕ್ಕೆ ಯಾರು ಸಹ ಕೆಟ್ಟದಾಗಿ ಕಮೆಂಟ್ ಹಾಕಿಲ್ಲ ಎಂದು ಕೆಲವರು ಬರೆದಿದ್ದಾರೆ. ಓರ್ವ ಮಹಿಳೆ ಯುವಕನನ್ನು ಸರ್ಟಿಫೈಡ್ ವರ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಸ್ಟಾರ್‌ಡಮ್ ಬದಿಗಿಟ್ಟು ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ ಆಡ್ತಾ ಇರೋ 100 ಕೋಟಿ ಹೀರೋ ಯಾರು?

View post on Instagram