ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಬ್ಯಾವರದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ವರನೂ ತನ್ನ ಅನಾರೋಗ್ಯ ಪೀಡಿತ ವಧುವನ್ನು ಎತ್ತಿಕೊಂಡು ಆಸ್ಪತ್ರೆಯಲ್ಲೇ 7 ಸುತ್ತುಗಳ ಸಪ್ತಪದಿ ತುಳಿದಿದ್ದಾನೆ.
Kannada
ಮಧ್ಯಪ್ರದೇಶದಲ್ಲಿ ನಡೆದ ಅಪರೂಪದ ವಿವಾಹ
ಈ ಮೂಹೂರ್ತ ಬಿಟ್ಟರೆ ಇವರ ಮದುವೆಗೆ ಇನ್ನೂ ಎರಡು ವರ್ಷ ಕಾಯಬೇಕಿತ್ತು. ಹೀಗಾಗಿ ವಧು ಅನಾರೋಗ್ಯಪೀಡಿತಳಾದರೂ ಲೆಕ್ಕಿಸದೇ ವಧುವನ್ನು ಎತ್ತಿಕೊಂಡೇ ವರ ಒಪಿಡಿಯಲ್ಲಿ ಹಸೆಮಣೆ ಏರಿದ್ದಾನೆ
Kannada
ಆಸ್ಪತ್ರೆಯಲ್ಲಿ ಅಲಂಕೃತವಾದ ವಿವಾಹ
ಬ್ಯಾವರದಲ್ಲಿ ಅಕ್ಷಯ ತೃತೀಯದಂದು ಈ ಅಪರೂಪದ ಮದುವೆ ನಡೆದಿದೆ.. ವರನು ಮದುವೆಯ ಮೆರವಣಿಗೆಯೊಂದಿಗೆ ಆಸ್ಪತ್ರೆಗೆ ಬಂದು OPDಯಲ್ಲಿದ್ದ ವಧುವನ್ನು ಎತ್ತಿಕೊಂಡು ಸಪ್ತಪದಿ ತುಳಿದಿದ್ದಾರೆ.
Kannada
ನಡೆಯಲಾಗದ ವಧು
ಮದುವೆಯ 7 ದಿನಗಳ ಮೊದಲು ವಧು ನಂದಿನಿಯ ಆರೋಗ್ಯ ಹದಗೆಟ್ಟಿದ್ದು ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆಕೆಗೆ ಕಟ್ಟುನಿಟ್ಟಾದ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರು.
Kannada
ಎರಡು ವರ್ಷಗಳ ನಂತರ ಮುಹೂರ್ತ
ಇಂತಹ ಸಂದರ್ಭದಲ್ಲಿ ಇವರ ಕುಟುಂಬವು ಮದುವೆಯನ್ನು ಮುಂದೂಡಲು ಬಯಸಲಿಲ್ಲ, ಏಕೆಂದರೆ ಮುಂದಿನ ಶುಭ ಮುಹೂರ್ತ ಎರಡು ವರ್ಷಗಳ ನಂತರ ಇತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಮದುವೆ ಮಾಡಲು ನಿರ್ಧರಿಸಲಾಯಿತು.
Kannada
ಎತ್ತಿಕೊಂಡು ಏಳು ಸುತ್ತುಗಳು
ಹೀಗಾಗಿ ವರ ಆದಿತ್ಯ ವಧು ನಂದಿನಿಯನ್ನು ಎತ್ತಿಕೊಂಡು ಆಸ್ಪತ್ರೆಯ OPD ವಾರ್ಡ್‌ನಲ್ಲಿ ಎಲ್ಲಾ ಸಂಪ್ರದಾಯಗಳೊಂದಿಗೆ ಸಪ್ತಪದಿ ತುಳಿದರು.
Kannada
ಆಸ್ಪತ್ರೆಯೇ ವಧುವಿನ ಮನೆಯಾಯಿತು
ಮದುವೆಗಾಗಿ ಆಸ್ಪತ್ರೆಯನ್ನು ಮಂಟಪದಂತೆ ಅಲಂಕರಿಸಲಾಗಿತ್ತು. ದ್ವಾರದಲ್ಲಿ ಮದುವೆ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಸಂಬಂಧಿಕರು ಪುಷ್ಟವೃಷ್ಟಿಗೈದರು ಜೊತೆಗೆ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಯಿತು.
Kannada
ವೈದ್ಯರ ಸಹಕಾರ
ಆಸ್ಪತ್ರೆ ಆಡಳಿತ ಮತ್ತು ವೈದ್ಯರು ಕುಟುಂಬದ ಭಾವನೆಗಳನ್ನು ಅರ್ಥಮಾಡಿಕೊಂಡು ಮದುವೆಗೆ ಅನುಮತಿ ನೀಡಿದರು. ಈ ನಿರ್ಧಾರ ಎಲ್ಲರ ಹೃದಯವನ್ನು ಮುಟ್ಟಿತು.
Kannada
ಮಾದರಿಯಾಯಿತು ಈ ವಿವಾಹ
ವಧು-ವರರ ಈ ವಿವಾಹ ಕೇವಲ ಒಂದು ವಿಧಿ ವಿಧಾನವಾಗದೇ ಪ್ರೀತಿ, ಜವಾಬ್ದಾರಿ ಮತ್ತು ಕುಟುಂಬದ ಬೆಂಬಲಕ್ಕೆ ಒಂದು ಉದಾಹರಣೆಯಾಯಿತು.