ಸೇಂಟ್ ಮಾರ್ಟಿನ್ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ಆಗುವಾಗ ಪ್ರವಾಸಿಗರು ಗಾಳಿಯಲ್ಲಿ ತೇಲಿದ ವಿಡಿಯೋ ವೈರಲ್ ಆಗಿದೆ. ವಿಮಾನದ ಜೆಟ್ ಗಾಳಿಯ ರಭಸಕ್ಕೆ ಪ್ರವಾಸಿಗರು ತೂರಾಡಿದ್ದಾರೆ. ಭದ್ರತಾ ನಿಯಮಗಳನ್ನು ಪಾಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ಅವುಗಳ ಸಮೀಪದಲ್ಲಿ ನಿಲ್ಲಬಾರದು ಎಂದು ಹೇಳುತ್ತಿರುತ್ತಾರೆ. ಯಾಕೆ ಎಂದು ಕೇಳುವ ಜನರು ಈ ವಿಡಿಯೋವನ್ನು ನೋಡಬಹುದು. ವೈರಲ್ ಆಗಿರುವ ಈ ವಿಡಿಯೋಗೆ 16 ಮಿಲಿಯನ್‌ಗೂ ಅಧಿಕ ವ್ಯೂವ್, 59 ಸಾವಿರ ಲೈಕ್ಸ್, 7.8 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಈ ವಿಡಿಯೋ ಹಂಚಿಕೊಂಡಿರುವ ಪೋಸ್ಟ್‌ಗೆ ಇದೇ ರೀತಿಯ ವೈರಲ್ ಕ್ಲಿಪ್‌ಗಳನ್ನು ಕಮೆಂಟ್ ಮಾಡಲಾಗಿದೆ.
1 ನಿಮಿಷ 35 ಸೆಕೆಂಡ್‌ವುಳ್ಳ ಈ ವಿಡಿಯೋ ಕೆರೆಬಿಯನ್ ದ್ವೀಪದ ಸೇಂಟ್ ಮಾರ್ಟಿನ್ ವಿಮಾನ ನಿಲ್ದಾಣದ್ದು ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಪ್ರಯಾಣಿಕರ ವಿಮಾನ ವೊಂದು ಟೇಕಾಫ್ ಆಗುತ್ತಿರೋದನ್ನು ಗಮನಿಸಬಹುದು. ರನ್‌ವೇ ಹಿಂದೆ ಅನತಿ ದೂರದಲ್ಲಿ ನಿಂತ ಕೆಲವರು ವಿಮಾನ ಟೇಕಾಫ್ ಆಗುತ್ತಿರೋದನ್ನು ನೋಡುತ್ತಿರುತ್ತಾರೆ. ಕೆಲವರು ಮೊಬೈಲ್‌ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡುತ್ತಿರುತ್ತಾರೆ. ವಿಮಾನ ಟೇಕಾಫ್ ಆಗಲು ಸಿದ್ಧವಾಗುತ್ತಿದ್ದಂತೆ ನೀವು ಊಹಿಸಲಾಗದ ಘಟನೆ ನಡೆದಿದೆ.
ಕೆಲ ವರದಿಗಳ ಪ್ರಕಾರ, ಜೆಟ್ ಆರಂಭ 100-150 mph (160-240 km/h) ವೇಗದಲ್ಲಿ ಗಾಳಿಯನ್ನುಂಟು ಮಾಡುತ್ತದೆ. ಈ ಗಾಳಿಯ ವೇಗ ಸಾಮಾನ್ಯ ಚಂಡಮಾರುತಕ್ಕಿಂತ ಮೂರುಪಟ್ಟು ಅಧಿಕವಾಗಿರುತ್ತದೆ. ಇದರ ಜೊತೆ ಜೆಟ್ ಇಂಜಿನ್ ಶಬ್ದವು ತುಂಬಾ ಜೋರಾಗಿರುತ್ತದೆ. ಅತಿ ಸಮೀಪದಲ್ಲಿ ನಿಂತರೆ ಶಾಶ್ವತ ಕಿವುಡುತನ ಉಂಟಾಗುವ ಸಾಧ್ಯತೆಗಳಿರುತ್ತವೆ. ಟೇಕಾಫ್ ಸಂದರ್ಭದಲ್ಲಿ ನೀವು ವಿಮಾನದ ಹಿಂದೆ ನಿಂತಿದ್ರೆ ಗಾಳಿಯ ವೇಗಕ್ಕೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲ್ಲ. ಇದರಿಂದ ನೀವು ದೂರ ಬಂದು ಬೀಳುವ ಅಪಾಯವಿರುತ್ತದೆ. ಈ ಸಂದರ್ಭದಲ್ಲಿ ಕಲ್ಲು ಅಥವಾ ಗಟ್ಟಿಯಾದ ಸ್ಥಳದಲ್ಲಿ ಬಿದ್ರೆ ಗಂಭೀರ ಗಾಯಗಳಾಗುವ ಸಾಧ್ಯತೆ ಇರುತ್ತದೆ. ವಿಮಾನ ನಿಲ್ದಾಣದ ಭದ್ರತಾ ನಿಯಮಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು.
ಈ ವಿಡಿಯೋವನ್ನು Massimo (@Rainmaker1973) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. MD80 ಸಿರೀಸ್ ಏರ್‌ಕ್ರಾಫ್ಟ್ ಟೇಕಾಫ್ ಸಂದರ್ಭದಲ್ಲಿ ಪ್ರವಾಸಿಗರು ಗಾಳಿಗೆ ಹೇಗೆ ಹಾರಿದ್ದಾರೆ ಅನ್ನೋದನ್ನು ಗಮನಿಸಿ ಎಂದು ಬರೆದುಕೊಳ್ಳಲಾಗಿದೆ. ಬೀಚ್ ಸಮೀಪದಲ್ಲಿಯೇ ವಿಮಾನ ನಿಲ್ದಣ ಇರೋದರಿಂದ ಪ್ರವಾಸಿಗರೆಲ್ಲರೂ ಟೇಕಾಫ್ ನೋಡಲು ರನ್‌ವೇ ಸಮೀಪಕ್ಕೆ ಬಂದಿದ್ದಾರೆ. ವಿಮಾನದ ಜೆಟ್ ಆನ್ ಆಗುತ್ತಿದ್ದಂತೆ ವೇಗದ ಗಾಳಿಗೆ ಎಲ್ಲರೂ ಹಿಂದಕ್ಕೆ ಬಂದಿದ್ದಾರೆ. ಗಾಳಿ ವೇಗ ಹೆಚ್ಚಾದ್ರೂ ಕೆಲವರು ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕೆಲವರು ಮರಳಿನ ಮೇಲೆ ಉರುಳುತ್ತಾ ಕೆಳಗೆ ಬಿದ್ದಿದ್ದಾರೆ. ಬೀಚ್‌ನಲ್ಲಿದ್ದ ಪ್ರವಾಸಿಗರ ಹಾಸಿಗೆ ಮತ್ತು ಬಟ್ಟೆಗಳು ಗಾಳಿಗೆ ನೀರುಪಾಲಾಗಿವೆ.
ಇದನ್ನೂ ಓದಿ: ಜಗತ್ತಿನ ಮೊದಲ ವಿಮಾನ ಹಾರಾಟದ ಟಿಕೆಟ್ ದರ ಎಷ್ಟಿತ್ತು ಗೊತ್ತಾ?
@TheGlobal_Index ಹೆಸರಿನ ಖಾತೆಯಲ್ಲಿ ಸೇಂಟ್ ಮಾರ್ಟಿನ್ ವಿಮಾನ ನಿಲ್ದಾಣದಿಂದ ಬೋಯಿಂಗ್ 747 ಪ್ಲೇನ್ ಟೇಕಾಫ್ ಆಗುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿಯೂ ಬೀಚ್‌ನಲ್ಲಿದ್ದ ಜನರು ಚೆಲ್ಲಾಪಿಲ್ಲಿಯಾಗಿದ್ದು, ಮರಳು ಗಾಳಿಯಲ್ಲಿ ಹಾರಾಡಿದೆ.
ಇದನ್ನೂ ಓದಿ: ಏರ್ ಇಂಡಿಯಾದಿಂದ ಭರ್ಜರಿ ಕೊಡುಗೆ, ಟಿಕೆಟ್ ಬೆಲೆ ಕೇವಲ 599 ರೂ ಆರಂಭ
