ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡುತ್ತಿದ್ದಾಗ 41 ವರ್ಷದ ಲಲಿತ್ ಸಿಂಗ್ ಎಂಬುವವರು  ಗಂಟಲಿನಲ್ಲಿ ರಸಗುಲ್ಲಾ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ಸಾವು:

ಮದುವೆ ಮನೆಯಲ್ಲಿ ಊಟ ಮಾಡ್ತಿದ್ದಾಗ ರಸಗುಲ್ಲಾ ಗಂಟಲಿನಲ್ಲಿ ಸಿಲುಕಿ ಉಸಿರುಕಟ್ಟಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಊಟ ಮಾಡುತ್ತಿದ್ದ ವೇಳೆ ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು 41 ವರ್ಷದ ಲಲಿತ್ ಸಿಂಗ್ ಎಂದು ಗುರುತಿಸಲಾಗಿದೆ. ಲಲಿತ್ ಸಿಂಗ್ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಮಲಿಯಂತ ಗ್ರಾಮಕ್ಕೆ ಹೋಗಿದ್ದಾಗ ಶನಿವಾರ ಈ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈದ್ಯರ ಪ್ರಕಾರ, ಸಿಹಿತಿನಿಸು ರಸಗುಲ್ಲಾ ಅವರ ಗಂಟಲಿನಲ್ಲಿ ಸಿಲುಕಿ ಉಸಿರಾಟದ ನಾಳವನ್ನು ಬಂದ್ ಮಾಡಿದ್ದರಿಂದ, ಅವರ ದೇಹಕ್ಕೆ ಆಮ್ಲಜನಕದ ಪೂರೈಕೆ ಕಡಿತಗೊಂಡು ಅವರು ಸಾವನ್ನಪ್ಪಿದ್ದಾರೆ. ರಸಗುಲ್ಲಾ ಅವರ ಉಸಿರಾಟದ ನಾಳವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ ಪರಿಣಾಮವಾಗಿ, ಸಿಂಗ್ ಕೆಲವೇ ನಿಮಿಷಗಳಲ್ಲಿ ನಿಧನರಾದರು. ಭೋಜನದ ಸಮಯದಲ್ಲಿ ಸಿಂಗ್ ಕುಸಿದು ಬಿದ್ದರು, ನಂತರ ಸ್ಥಳದಲ್ಲಿದ್ದ ಜನರು ಅವರನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ದರು ಆದರೆ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಲಲಿತ್ ಸಿಂಗ್ ಅವರ ದೇಹವನ್ನು ನೀಡಲಾಯ್ತು.

ಇದನ್ನೂ ಓದಿ: ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು: ಹಠ ಮಾಡಿದ ಎಮ್ಮೆ ಕರುವಿಗೆ ಬಾಲಕಿಯ ಸವಾಲು: ವೀಡಿಯೋ ವೈರಲ್