ನೆರೆದೇಶವನ್ನು ದ್ವೇಷಿಸುವುದೇ ದೇಶಭಕ್ತಿ ಅಲ್ಲ: ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್
ಭಾರತದ ಸಿನಿಮಾ ಉದ್ಯಮದಿಂದ ಪಾಕಿಸ್ತಾನಿ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

ಮುಂಬೈ: ಭಾರತದ ಸಿನಿಮಾ ಉದ್ಯಮದಿಂದ ಪಾಕಿಸ್ತಾನಿ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಕಲೆ, ಸಂಗೀತ ಮತ್ತು ಸಂಸ್ಕೃತಿ, ಇವು ಶಾಂತಿ ಮತ್ತು ಏಕತೆಯನ್ನು ಪ್ರೋತ್ಸಾಹಿಸುತ್ತದೆ. ಆದರೆ ನಿಷೇಧ ಮಾಡುವುದರಿಂದ ಸಾಂಸ್ಕೃತಿಕ ಸಾಮರಸ್ಯ ಉತ್ತೇಜಿಸಲು ಸಾಧ್ಯವಾಗುವುದಿಲ್ಲ ಇದೊಂದು ಸಾಮರಸ್ಯದೆಡೆಗಿನ ಹಿಮ್ಮುಖ ಹೆಜ್ಜೆ ಎಂದು ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ. ಪಾಕಿಸ್ತಾನಿ ಕಲಾವಿದರಿಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡಿರುವುದರಿಂದ ತನ್ನ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಅರ್ಜಿದಾರರು ದೇಶಭಕ್ತಿಯನ್ನು ತಪ್ಪಾಗಿ ಗ್ರಹಿಸಿದ್ದಾರೆ. ನಿಜವಾದ ದೇಶಭಕ್ತ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಚಟುವಟಿಕೆಗಳನ್ನು ಸ್ವಾಗತಿಸುತ್ತಾನೆ ಎಂದು ಕೋರ್ಟ್ ಹೇಳಿದೆ.
ಭಾರತೀಯ ಚಲನಚಿತ್ರೋದ್ಯಮದಲ್ಲಿ ಪಾಕಿಸ್ತಾನಿ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಗೀತ ರಚನೆಕಾರ ಮತ್ತು ಚಲನಚಿತ್ರ ನಿರ್ಮಾಪಕರಾದ ಅನ್ವರ್ ಖುರೇಷಿ ಅರ್ಜಿ ಸಲ್ಲಿಸಿದ್ದರು. ಕಲೆ ,ಸಂಗೀತ, ಕ್ರೀಡೆ, ಸಂಸ್ಕೃತಿ, ನೃತ್ಯ ಗಡಿ ಹಾಗೂ ರಾಷ್ಟ್ರೀಯತೆಯನ್ನು ಮೀರಿದ ಚಟುವಟಿಕೆಗಳು. ಇಂತಹ ಚಟುವಟಿಕೆಗಳು ರಾಷ್ಟ್ರ ರಾಷ್ಟ್ರಗಳ ನಡುವೆ ಶಾಂತಿ, ಏಕತೆ ಮತ್ತು ಸಾಮರಸ್ಯವನ್ನು ತರುತ್ತವೆ ಎಂದು ನ್ಯಾಯಮೂರ್ತಿ ಸುನಿಲ್ ಶುಕ್ರೆ (Sunil Shukre) ಮತ್ತು ನ್ಯಾಯಮೂರ್ತಿ ಫಿರ್ದೋಶ್ ಪೂನಿವಾಲಾ (Firdosh Pooniwalla) ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಇಸ್ರೇಲ್ ಯುದ್ಧ ಕಣಕ್ಕಿಳಿದ ಅಮೆರಿಕ: 100ಕ್ಕೂ ಹೆಚ್ಚು ಹಮಾಸ್ ನೆಲೆಗಳ ಮೇಲೆ ಅಟ್ಯಾಕ್
ಸಿನಿ ಕೆಲಸಗಾರರು, ಗಾಯಕರು, ಸಂಗೀತಗಾರರು, ಗೀತ ರಚನೆಕಾರರು ಮತ್ತು ತಂತ್ರಜ್ಞರಾಗಿ ಕೆಲಸ ಮಾಡುವ ಯಾವುದೇ ಪಾಕಿಸ್ತಾನಿ ಕಲಾವಿದರನ್ನು ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ (Union Govt) ನಿರ್ದೇಶನ ನೀಡುವಂತೆ ಖುರೇಷಿ ಬಾಂಬೆ ಹೈಕೋರ್ಟ್‌ಗೆ (Bombay High Court) ಅರ್ಜಿ ಸಲ್ಲಿಸಿದ್ದರು. ಪಾಕಿಸ್ತಾನಿ ಕಲಾವಿದರಿಗೆ ವೀಸಾ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಕೋರಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯ (Pulwama Attack) ಹಿನ್ನೆಲೆಯಲ್ಲಿ ಅಖಿಲ ಭಾರತ ಸಿನಿಮಾ ಕೆಲಸಗಾರರ ಸಂಘವೂ ಪಾಕಿಸ್ತಾನಿ ಕಲಾವಿದರ ಮೇಲೆ ಸಂಪೂರ್ಣ ನಿಷೇಧ ಹೇರುವ ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಸೆಪ್ಟೆಂಬರ್ 2016 ರಲ್ಲಿ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಹಾಗೂ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಐಎಂಪಿಪಿಎ) ಕೂಡ ಇದೇ ರೀತಿಯ ಮನವಿಗಳನ್ನು ಮಾಡಿದೆ ಎಂದು ಅವರು ಕೋರ್ಟ್‌ಗೆ ಹೇಳಿದರು.
ಭಾರತ ಎಚ್ಚರಿಕೆಯ ಬಳಿಕ ಸ್ವದೇಶಕ್ಕೆ ತೆರಳಿದ ಕೆನಡಾದ 41 ರಾಯಭಾರಿಗಳು
ಅರ್ಜಿ ಸಲ್ಲಿಸಿದ್ದ ಖುರೇಷಿ ಪರ ವಕೀಲರು, ಖುರೇಷಿ ನಿಜವಾದ ದೇಶಭಕ್ತ ಹೀಗಾಗಿ ಅವರು ಪಾಕಿಸ್ತಾನಿ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೋರುತ್ತಾರೆ. ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರದಿದ್ದರೆ ಭಾರತೀಯ ಕಲಾವಿದರು, ಸಿನಿ ಕಾರ್ಮಿಕರಿಗೆ ತೊಂದರೆ ಆಗುತ್ತದೆ. ಏಕೆಂದರೆ ಪಾಕಿಸ್ತಾನಿ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿ ಇಲ್ಲಿ ಪಾಕಿಸ್ತಾನಿಯರಿಗಿರುವಂತೆ ಅಲ್ಲಿ ಭಾರತೀಯ ಕಲಾವಿದರಿಗೆ ಅಂತಹ ಅನುಕೂಲಕರ ವಾತಾವರಣ ಇಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ ಎಂದು ವಕೀಲರು ಹೇಳಿದರು.
ಸುಮ್ನೆ ಅಲ್ಲ ಹಿಟ್ಲರ್ ಯಹೂದಿಗಳ ಮರಣಹೋಮ ಮಾಡಿದ್ದು ಎಂದ ಬ್ಯಾಂಕ್ ಉದ್ಯೋಗಿ ಮನೆಗೆ
ಪಾಕಿಸ್ತಾನಿ ಕಲಾವಿದರಿಗೆ ಅವಕಾಶ ನೀಡುವುದರಿಂದ ನಮ್ಮ ಭಾವನೆಗೆ ಧಕ್ಕೆ ಆಗುವುದರ ಜೊತೆ ನಮ್ಮ ಹಕ್ಕುಗಳಿಗೂ ತೊಂದರೆಯಾಗಿದೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ದೇಶಭಕ್ತರಾಗಲು ನೆರೆಯ ರಾಷ್ಟ್ರವನ್ನೋ ಅಥವಾ ವಿದೇಶವನ್ನೋ ದ್ವೇಷಿಸಲೇಬೇಕು ಎಂಬ ನಿಯಮವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ನಿಜವಾದ ದೇಶಭಕ್ತ ನಿಸ್ವಾರ್ಥವಾಗಿ ತನ್ನ ದೇಶಕ್ಕಾಗಿ ಅರ್ಪಿತನಾಗಿರುತ್ತಾನೆ. ತನ್ನ ದೇಶದಲ್ಲಿ ಶಾಂತಿ, ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಯಾವುದೇ ಚಟುವಟಿಕೆಯನ್ನು ಆತ ಸ್ವಾಗತಿಸುತ್ತಾನೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.
ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ