ನಗರವೊಂದರಲ್ಲಿ ಮನೆಗೆಲಸದಾಕೆಯೊಬ್ಬಳು ಚಿಕನ್ ಸಾರು ಮಾಡುವಾಗ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆಯದೆ ಹಾಗೆಯೇ ಅಡುಗೆ ಮಾಡಿ ಎಡವಟ್ಟು ಮಾಡಿದ್ದಾಳೆ. ಈ ಘಟನೆಯ ವಿಡಿಯೋವನ್ನು ಮನೆಯೊಡತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಆಕೆಯನ್ನು ಕೆಲಸದಲ್ಲಿ ಮುಂದುವರೆಸಬೇಕೇ ಅಥವಾ ಬೇಡವೇ ಎಂದು ಅಭಿಪ್ರಾಯ ಕೇಳಿದ್ದಾರೆ.

ಕೆಲಸದಾಕೆಯ ಮಾಡಿದ ಎಡವಟ್ಟು ಏನು?

ನಗರ ಪ್ರದೇಶಗಳಲ್ಲಿ ಅನೇಕ ಶ್ರೀಮಂತರು ಹಾಗೂ ಆರ್ಥಿಕ ಸ್ಥಿತಿ ಅನುಕೂಲಕರವಾಗಿರುವ ಅನೇಕ ಕುಟುಂಬಗಳು ಮನೆಯೊಳಗಿನ ಕೆಲಸಕ್ಕೆ ಕೆಲಸದವರನ್ನು ಇರಿಸಿಕೊಂಡಿರುತ್ತಾರೆ. ಮನೆಯ ಸ್ವಚ್ಛತೆ ಬಟ್ಟೆ ಒಗೆಯುವುದು ಪಾತ್ರೆ ತೊಳೆಯುವುದು ಅಡುಗೆ ಮಾಡುವುದು ಹೀಗೆ ಪ್ರತಿಯೊಂದನ್ನು ಆ ಮನೆಗೆ ಬರುವ ಕೆಲಸದವರು ಮಾಡುತ್ತಾರೆ. ವಿಶೇಷವಾಗಿ ಉತ್ತಮ ವೇತನವಿರುವ ದಂಪತಿಗಳು ಅಡುಗೆ ಹಾಗೂ ಪಾತ್ರೆ ತೊಳೆಯುವುದಕ್ಕೆ ಕೆಲಸದವರನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇಲ್ಲೊಂದು ಮನೆ ಕೆಲಸದಾಕೆ ದೊಡ್ಡ ಎಡವಟ್ಟು ಮಾಡಿದ್ದು, ಆ ಘಟನೆಯನ್ನು ಮನೆಯೊಡತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಕೆಯನ್ನು ಕೆಲಸದಿಂದ ತೆಗಿಬೇಕಾ ಬೇಡ್ವಾ ಏನ್ ಮಾಡಲಿ ಎಂದು ಕೇಳಿದ್ದಾರೆ. ಹಾಗಿದ್ರೆ ಮನೆ ಕೆಲಸದಾಕೆ ಮಾಡಿದ ತಪ್ಪೇನು?

ಮಹಾನಗರಿಯಲ್ಲಿ ಮನೆ ಕೆಲಸ ಮಾಡುವವರಲ್ಲಿ ಹಲವು ವಿಧಗಳಿವೆ. ಕೆಲವರು ತುಸು ಜಾಸ್ತಿಯೇ ಕೆಲಸ ಮಾಡಿದರೆ ಮತ್ತೆ ಕೆಲವರು ಇರುವ ಕೆಲಸವನ್ನುಮಾಡುವುದಿಲ್ಲ, ಹಾಗೆ ಇನ್ನೂ ಕೆಲವರು ಮಾಡಿದ ಪ್ರತಿ ಕೆಲಸದಲ್ಲಿ ನೂರೆಂಟು ಎಡವಟ್ಟು ಮಾಡಿ ಮನೆ ಮಾಲೀಕರಿಗೆ ತಲೆನೋವು ತರುವವರು. ಮಹಾನಗರಿಗಳಲ್ಲಿ ಹಲವು ಮನೆಗಳಲ್ಲಿ ಮನೆ ಕೆಲಸ ಮಾಡುವ ಮಹಿಳೆಯರು ತಿಂಗಳಿಗೆ ಕಾರ್ಪೋರೇಟ್ ಉದ್ಯೋಗಿಗಳಿಗಿಂತ ಹೆಚ್ಚು ದುಡಿಮೆ ಮಾಡ್ತಾರೆ. ಹೀಗೆ ಹಲವು ಮನೆಗಳಲ್ಲಿ ಕೆಲಸ ಮಾಡುವವರೇ ಬಹುಶಃ ತುರ್ತಾಗಿ ಕೆಲಸ ಮಾಡುವ ಭರದಲ್ಲಿ ಏನಾದರೊಂದು ಎಡವಟ್ಟು ಮಾಡಿ ಬಿಡುತ್ತಾರೆ.

ಹಾಗೆಯೇ ಇಲ್ಲೊಬ್ಬಳು ಮನೆ ಕೆಲಸದಾಕೆ ಮನೆಯವರಿಗಾಗಿ ಚಿಕನ್ ಸಾರ್‌ ಮಾಡಿದ್ದಾಳೆ. ಆದರೆ ಅದರ ವೀಡಿಯೋ ನೋಡಿದರೆ ನಿಮ್ಮ ಪಿತ್ತ ನೆತ್ತಿಗೇರುವುದು ಪಕ್ಕಾ ಹೌದು, ಮಾಂಸಾಹಾರವನ್ನು ಮಾಡುವಾಗ ಚೆನ್ನಾಗಿ ತೊಳೆದು ಅರಿಸಿಣ ಉಪ್ಪು ಹುಳಿ ಹಾಕಿ ಕೆಲ ಕಾಲ ತೆಗೆದಿಟ್ಟು ನಂತರ ಮಸಾಲೆ ಅರಿದು ಬಹುತೇಕರು ಚಿಕನ್ ಸಾರ್ ಮಾಡ್ತಾರೆ. ಆದರೆ ಈಕೆ ಮಾಡಿದ ಚಿಕನ್ ಸಾರ್ ನೋಡಿದರೆ ಆಘಾತಗೊಳ್ಳುವುದು ಪಕ್ಕಾ. ಈಕೆ ಅಂಗಡಿಯಿಂದ ತಂದ ಚಿಕನ್‌ನ ಪ್ಲಾಸ್ಟಿಕ್ ಕವರ್‌ನ್ನು ಕೂಡ ಬಿಚ್ಚದೇ ಹಾಗೆಯೇ ಚಿಕನ್ ಪ್ಯಾಕೇಟ್‌ನ್ನು ಮಸಾಲೆಗೆ ಹಾಕಿ ಸಾರು ಮಾಡಿದ್ದು, ಸಾಂಬಾರ್‌ನಲ್ಲಿ ಚಿಕನ್ ತುಂಬಿರುವ ಪ್ಲಾಸ್ಟಿಕ್ ಕವರ್ ತೇಲಾಡುವುದುನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನು ನೋಡಿ ಮನೆಯೊಡತಿ ಹೌಹಾರಿದ್ದು, ಆಕೆಯನ್ನು ಕೆಲಸದಿಂದ ತೆಗಿಬೇಕೆ ಬೇಡ್ವೇ ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ವೀಡಿಯೋ ನೋಡಿದ ನೆಟ್ಟಿಗರು ಕೂಡಲೇ ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ಸೂಚಿಸಿದ್ದಾರೆ. ಆಕೆ ಉದ್ದೇಶಪೂರ್ವಕವಾಗಿಯೇ ಈ ಕೃತ್ಯವೆಸಗಿದ್ದಾಳೆ. ಬಹುಶಃ ಆಕೆಗೆ ಮಾಂಸಾಹಾರಿ ಅಡುಗೆ ಮಾಡಲು ಇಷ್ಟವಿಲ್ಲದಿರಬಹುದು, ಅಥವಾ ಅವಳು ಆ ಜವಾಬ್ದಾರಿಯಿಂದ ಹಿಂದೆ ಸರಿಯಲು ಪ್ರಯತ್ನಿಸುತ್ತಿರಬಹುದು. ಹೀಗೆ ಮಾಡುವುದರಿಂದ ಮತ್ತೊಮ್ಮೆ ಚಿಕನ್ ಸಾರು ಮಾಡುವುದಕ್ಕೆ ನೀವು ಆಕೆಗೆ ಹೇಳುವುದಿಲ್ಲ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಯಾವ ರೀತಿಯಿಂದಲೂ ನೋಡಿದರು ಅದು ಉದ್ದೇಶಪೂರ್ವಕವಾಗಿ ಕಾಣುತ್ತದೆ. ಹೆಚ್ಚಿನ ಸಂಬಳ ಕೊಟ್ಟಾದರೂ ಸರಿ, ಸಾಧ್ಯವಾದಷ್ಟು ಬೇಗ ಹೊಸ ಅಡುಗೆಯವರ ಹುಡುಕಾಟವನ್ನು ಪ್ರಾರಂಭಿಸಲು ಎಂದು ನಾನು ಶಿಫಾರಸು ಮಾಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ನೋಡಿದ ಮೇಲೆ ಸೀದಾ ಹೋಗಿ ನನ್ನ ಮನೆಕೆಲಸದಾಕೆಯ ಕಾಲಿಗೆ ಬೀಳೋಣ ಎಂದೆನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಅವರ ಮನೆಕೆಲಸದಾಕೆ ಒಳ್ಳೆಯವರಿರಬೇಕು. ಈಕೆದು ನೊಟೀಸ್ ಪಿರೇಡ್ ನಡಿತಿದ್ಯೋ ಏನೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮತ್ತೆ ಮತ್ತೆ ಕಾಣಿಸುವ ಹೊಟ್ಟೆನೋವು ಗ್ಯಾಸ್ಟಿಕ್ ಅಂತ ನಿರ್ಲಕ್ಷಿಸಿಬೇಡಿ: ಈ ಕಿರುತೆರೆ ನಟಿಗೆ ಏನಾಯ್ತು ನೋಡಿ

ನೀವು ಈ ವೀಡಿಯೋ ನೋಡಿ ಈ ಬಗ್ಗೆ ನಿಮಗೇನನಿಸುತ್ತಿದೆ. ಆಕೆ ಉದ್ದೇಶಪೂರ್ವಕವಾಗಿಯೇ ಮಾಡಿರಬಹುದೇ ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ...

View post on Instagram