MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ( Giorgia Meloni) ತಾನು ತನ್ನ ಪತಿ ಆಂಡ್ರಿಯಾ ಗಿಂಬ್ರೂನೊರಿಂದ ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  ಈ ಬಗ್ಗೆ ಸ್ವತಃ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ವಿಚಾರ ಬಹಿರಂಗಪಡಿಸಿದ್ದಾರೆ.  

2 Min read
Anusha Kb
Published : Oct 20 2023, 03:11 PM IST| Updated : Oct 20 2023, 03:42 PM IST
Share this Photo Gallery
  • FB
  • TW
  • Linkdin
  • Whatsapp
112

ರೋಮ್‌: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ( Giorgia Meloni) ತಾನು ತನ್ನ ಪತಿ ಆಂಡ್ರಿಯಾ ಗಿಂಬ್ರೂನೊರಿಂದ ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  

212

ಜಾರ್ಜಿಯಾ ಮೆಲೋನಿ ಪತಿ ಆಂಡ್ರಿಯಾ ಗಿಂಬ್ರೂನೊ ಟಿವಿ ಪತ್ರಕರ್ತನಾಗಿದ್ದು, ಇತ್ತೀಚೆಗೆ ಟಿವಿ ಲೈವ್‌ನಲ್ಲೇ ಸೆಕ್ಸಿಯೆಷ್ಟ್ ಕಾಮೆಂಟ್ ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. 
 

312
ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಜಾರ್ಜಿಯಾ ಮೆಲೋನಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಜಾರ್ಜಿಯಾ ಮೆಲೋನಿ

ಈ ಬಗ್ಗೆ ಸ್ವತಃ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ವಿಚಾರ ಬಹಿರಂಗಪಡಿಸಿದ್ದಾರೆ. ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಳ್ಳುತ್ತದೆ  ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

412

ಕೆಲ ಸಮಯದಿಂದ ನಮ್ಮ ಮಾರ್ಗಗಳು ಭಿನ್ನವಾಗಿವೆ ಮತ್ತು ಅದನ್ನು ಈಗ ಒಪ್ಪಿಕೊಳ್ಳುವ ಸಮಯ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಆಂಡ್ರಿಯಾ ಗಿಯಾಂಬ್ರುನೊ ದಂಪತಿಗೆ ಒಂದು ಪುಟ್ಟ ಹೆಣ್ಣು ಮಗುವಿದೆ. 

512

ಮೀಡಿಯಾ ಸೆಟ್‌ನಲ್ಲಿ ಸುದ್ದಿ ನಿರೂಪಕನಾಗಿ ಮೆಲೋನಿ ಪತಿ ಜಿಯಾಂಬ್ರುನೋ ಕೆಲಸ ಮಾಡುತ್ತಿದ್ದರು.  ಇದು ಇಟಲಿ ಮಾಜಿ ಪ್ರಧಾನ ಮಂತ್ರಿ ಮತ್ತು ಜಾರ್ಜಿಯಾ ಮೆಲೋನಿ ಮಿತ್ರ ದಿವಂಗತ ಸಿಲ್ವಿಯೊ ಬೆರ್ಲುಸ್ಕೋನಿಯ ಉತ್ತರಾಧಿಕಾರಿಯ ಮಾಲೀಕತ್ವದ  ಮಾಧ್ಯಮ ಸಂಸ್ಥೆ

612
ಜಿ-20 ವೇಳೆ ಪ್ರಧಾನಿ ಮೋದಿ ಜೊತೆ ಜಾರ್ಜಿಯಾ ಮೆಲೋನಿ

ಜಿ-20 ವೇಳೆ ಪ್ರಧಾನಿ ಮೋದಿ ಜೊತೆ ಜಾರ್ಜಿಯಾ ಮೆಲೋನಿ

ಈ ವಾರದ ಆರಂಭದಲ್ಲಿ ಮೀಡಿಯಾಸೆಟ್‌,  ಮೆಲೋನಿ ಪತಿ ಜಿಯಾಂಬ್ರುನೋ ನ್ಯೂಸ್‌ ಕಾಸ್ಟಿಂಗ್‌ ಸಮಯದಲ್ಲಿ  ಅಸಭ್ಯ ಭಾಷೆಯನ್ನು ಬಳಸುತ್ತಿರುವ ವೀಡಿಯೋವೊಂದನ್ನು ಪ್ರಸಾರ ಮಾಡಿತ್ತು.

712
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜೊತೆ ಜಾರ್ಜಿಯಾ ಮೆಲೋನಿ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜೊತೆ ಜಾರ್ಜಿಯಾ ಮೆಲೋನಿ

ಈ ಪ್ರಸಾರದ ವೇಳೆ ಅವರು  ಮಹಿಳಾ ಸಹೋದ್ಯೋಗಿಯ ಜೊತೆ ಫ್ಲರ್ಟ್‌ ಕೂಡ ಮಾಡುತ್ತಿದ್ದರು.  ಈ ವೇಳೆ ಈ ಮಹಿಳಾ ಸಹೋದ್ಯೋಗಿ ನಾನೇಕೆ ನಿನ್ನ ಈ ಮೊದಲೇ ಭೇಟಿ ಮಾಡಲಿಲ್ಲ ಎಂದು ಕೇಳಿದ್ದಳು. 

812

ಎರಡನೆಯದಾಗಿ, ಗುರುವಾರ ಪ್ರಸಾರವಾದ ಹೆಚ್ಚು ಸ್ಪಷ್ಟವಾದ ರೆಕಾರ್ಡಿಂಗ್‌ನಲ್ಲಿ, ಜಿಯಾಂಬ್ರುನೋ ಅವರು ತಾನು ಹೊಂದಿರುವ ಒಂದು ಎಕ್ಟ್ರಾ ಸಂಬಂಧದ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಮಹಿಳಾ ಸಹೋದ್ಯೋಗಿಗಳು ಗುಂಪು ಲೈಂಗಿಕತೆಯಲ್ಲಿ ಭಾಗವಹಿಸಿದರೆ ಅವರು ತನಗಾಗಿ ಕೆಲಸ ಮಾಡಬಹುದು ಎಂದು ಹೇಳುತ್ತಾರೆ. 

912

ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ನಿಂದಿಸುತ್ತಿರುವ ಕಾಮೆಂಟ್‌ಗಳ ಕಾರಣಕ್ಕೂ ಈ ಪತ್ರಕರ್ತ ವ್ಯಾಪಕ ಟೀಕೆಗೆ ಒಳಗಾಗಿದ್ದರು. 

1012

ನೀವು ನೃತ್ಯ ಮಾಡಲು ಹೋದರೆ ಅಲ್ಲಿ ನಿಮಗೆ ಕುಡಿಯಲು ಕೂಡ ಹಕ್ಕಿದೆ ಅಲ್ಲಿ ಯಾವುದೇ ರೀತಿಯ ತಪ್ಪು ತಿಳುವಳಿಕೆ ಮತ್ತು ಯಾವುದೇ ರೀತಿಯ ಸಮಸ್ಯೆ ಇರಬಾರದು. ಆದರೆ ನೀವು ಕುಡಿದು ನಿಮ್ಮ ಇಂದ್ರಿಯಗಳ ಮೇಲಿನ ಹಿಡಿತ ಕಳೆದುಕೊಳ್ಳುವುದನ್ನು ತಪ್ಪಿಸಿದರೆ, ನೀವು ಕೆಲವು ಸಮಸ್ಯೆಗಳಿಗೆ ಒಳಗಾಗುವುದನ್ನು ಕೂಡ ತಪ್ಪಿಸಬಹುದು ಎಂದು  ಜಿಯಾಂಬ್ರುನೋ ಕಾಮೆಂಟ್ ಮಾಡಿದ್ದರು. 

1112

ಆ ಎಪಿಸೋಡ್‌ನಲ್ಲಿ ತನ್ನ  ಪತಿ ಮಾಡಿದ ಕಾಮೆಂಟ್‌ಗೆ ತನ್ನನ್ನು ಜನ ಜಡ್ಜ್ ಮಾಡಬಾರದು ಹಾಗೂ ಭವಿಷ್ಯದಲ್ಲಿ ಆತನ ನಡವಳಿಕೆ ಬಗ್ಗೆ ನಾನು ಉತ್ತರಿಸುವಂತಾಗಬಾರದು ಎಂದು ಮೆಲೋನಿ ಈ ಸಂದರ್ಭದಲ್ಲಿ ಹೇಳಿದ್ದಾರೆ. 

1212
ಪ್ರಧಾನಿ ಮೋದಿ ಜೊತೆ ಜಾರ್ಜಿಯಾ ಮೆಲೋನಿ

ಪ್ರಧಾನಿ ಮೋದಿ ಜೊತೆ ಜಾರ್ಜಿಯಾ ಮೆಲೋನಿ


ಇಟಲಿಯ ಬಲಪಂಥೀಯ ನಾಯಕಿಯಾಗಿರುವ ಮೆಲೋನಿ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹಲವು ಬದಲಾವಣೆ ತಂದಿದ್ದು,  ಇಟಾಲಿಯನ್‌ ಹೊರತಾಗಿ ಇಂಗ್ಲೀಷ್‌ ಅಥವಾ ಬೇರಾವುದೇ ವಿದೇಶಿ ಭಾಷೆ ಬಳಸಿದರೆ ಬರೋಬ್ಬರಿ 89 ಲಕ್ಷ ರು. ಗಳ ದಂಡ ವಿಧಿಸುವ ನೂತನ ಕಾನೂನನ್ನು ಜಾರಿಗೆ ತಂದು ಸುದ್ದಿಯಾಗಿದ್ದರು

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved