Man enters lion enclosure : ಪ್ರಾಣಿ ಪಾಲಕನಾಗುವ ಆಸೆಯಿಂದ ಮೃಗಾಲಯವೊಂದರಲ್ಲಿ ಸಿಂಹವಿದ್ದ ಆವರಣಕ್ಕೆ ಪ್ರವೇಶಿಸಿದ 19 ವರ್ಷದ ಯುವಕ ಸಿಂಹಿಣಿಯ ದಾಳಿಗೆ ಬಲಿಯಾಗಿದ್ದಾನೆ. ಬ್ರೇಜಿಲ್‌ನಲ್ಲಿ ಈ ಘಟನೆ ನಡೆದಿದೆ.
ಪ್ರಾಣಿ ಪಾಲಕನಾಗಬೇಕೆಂದು ಬಯಸಿದವನ ಕತೆ ಮುಗಿದೇ ಹೋಯ್ತು:
ಪ್ರಾಣಿಗಳ ಪಾಲಕನಾಗಬೇಕೆಂದು ಬಯಸಿದ್ದ ಯುವಕನೋರ್ವನನ್ನು ಸಿಂಹವೊಂದು ಕೊಂದು ಹಾಕಿದ ಘಟನೆ ನಡೆದಿದೆ. 19ರ ಹರೆಯದ ಗೆರ್ಸನ್ ಡಿ ಮೆಲೊ ಮಚಾದೊ ಸಿಂಹದಿಂದ ಸಾವಿಗೀಡಾದ ಯುವಕ. ಸಿಂಹಗಳ ಪಾಲನೆ ಮಾಡಬೇಕು ಎಂಬ ಅತೀವ ಆಸಕ್ತಿ ಹೊಂದಿದ್ದ ಮಚಾದೋ ಸಿಂಹ ಇದ್ದ ಮೃಗಾಲಯದ 20 ಅಡಿ ಎತ್ತರದ ಗೋಡೆ ಮತ್ತು ಭದ್ರತಾ ಬೇಲಿಯನ್ನು ಹತ್ತಿ ಸಿಂಹವಿದ್ದ ಆವರಣಕ್ಕೆ ಪ್ರವೇಶಿಸಿದ ನಂತರ ಈ ದುರಂತ ಘಟನೆ ನಡೆದಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಬ್ರೆಜಿಲ್‌ನಲ್ಲಿ.
ಮೃಗಾಲಯದ ಗೋಡೆ ಏರಿ ಸಿಂಹಗಳಿದ್ದ ಜಾಗಕ್ಕೆ ಇಳಿದವನ ಕತೆ ಮುಗಿಸಿದ ಸಿಂಹಿಣಿ:
ನ್ಯೂಯಾರ್ಕ್ ಪೋಸ್ಟ್ ಪ್ರಕಾರ , ಸಿಂಹ ಪಳಗಿಸುವ ಕನಸು ಕಂಡಿದ್ದ 19 ವರ್ಷದ ಬ್ರೆಜಿಲ್ ಯುವಕನ ಮೇಲೆ ಮೇಲೆ ಭಾನುವಾರ ಜೋವೊ ಪೆಸ್ಸೋವಾ ನಗರದ ಪಾರ್ಕ್ ಝೂಬೊಟಾನಿಯೊ ಅರುಡಾ ಕಾಮರಾ ಎಂಬ ಪ್ರದೇಶದಲ್ಲಿ ಸಿಂಹಿಣಿಯೊಂದು ಮಾರಣಾಂತಿಕ ದಾಳಿ ನಡೆಸಿದೆ. ಮೃಗಾಲಯದ ವೀಕ್ಷಣೆಗೆ ಬಂದ ಪ್ರವಾಸಿಗರು ಈ ದೃಶ್ಯವನ್ನು ನೋಡಿ ಗಾಬರಿಗೊಂಡಿದ್ದಲ್ಲದೇ ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹೀಗಾಗಿ ಈ ಭಯಾನಕ ಘಟನೆಯ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಂಹಿಣಿ ಲಿಯೋನಾ, ಮೆಲೊ ಮಚಾದೊನನ್ನು ನೆಲಕ್ಕೆ ಎಳೆದು ಬೀಳಿಸಿ ದಾಳಿ ಮಾಡಿದ್ದರಿಂದ ಅವನಿಗೆ ಮಾರಣಾಂತಿಕ ಗಾಯಗಳಾದವು. ಅವನನ್ನು ರಕ್ಷಿಸಲು ಪ್ರಯತ್ನಿಸಲಾಯಿತ್ತಾದ್ದರೂ ಗಂಭೀರ ಗಾಯಗೊಂಡಿದ್ದರಿಂದ ಆತ ಬದುಕುಳಿಯಲಿಲ್ಲ.
ಇದನ್ನೂ ಓದಿ: 2029ರೊಳಗೆ ಭಾರತದ ನೌಕಾಪಡೆ ಮಡಿಲು ಸೇರಲಿದೆ ರಾಫೆಲ್ ಎಂ ಫೈಟರ್ ಜೆಟ್
ಸಿಂಹದ ದಾಳಿಯಿಂದ ಮೃತನಾದ ಮಚಾದೊಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು ಎಂದು ಕುಟುಂಬದವರು ಹಾಗೂ ಸ್ನೇಹಿತರು ಹೇಳಿದ್ದಾರೆ. ಮಚಾದೋಗೆ ಸ್ಕಿಜೋಫ್ರೇನಿಯಾ ಸೇರಿದಂತೆ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳ ಇತಿಹಾಸವಿದೆ. ಅವರು ಈ ಹಿಂದೆ ಸಿಂಹಗಳೊಂದಿಗೆ ಕೆಲಸ ಮಾಡುವ ಆಶಯದೊಂದಿಗೆ ಆಫ್ರಿಕಾಕ್ಕೆ ವಿಮಾನ ಹತ್ತಲು ಪ್ರಯತ್ನಿಸಿದ್ದರು ಎಂದು ಅವರ ಕುಟುಂಬದವರು ಹೇಳಿದ್ದಾರೆ. ಘಟನೆಯ ಬಳಿಕ ತನಿಖೆಗಾಗಿ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮತ್ತು ಅಧಿಕಾರಿಗಳು ಸಿಂಹ ಲಿಯೋನಾಳ ಆರೋಗ್ಯಸ್ಥಿತಿ ಮತ್ತು ಈ ಘಟನೆಯ ಹೊರತಾಗಿ ಆಕ್ರಮಣಕಾರಿ ನಡವಳಿಕೆಯನ್ನು ಅದು ಹೊಂದಿರದ ಹಿನ್ನೆಲೆಯಲ್ಲಿ ಅದಕ್ಕೆ ದಯಾಮರಣ ನೀಡುವ ವಿಚಾರವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಸರಸ ಸಲ್ಲಾಪ ಮಾಡೋರೆ ಜೋಕೆ: ರೋಮ್ಯಾನ್ಸ್ ವೀಡಿಯೋ ವೈರಲ್
ಘಟನೆಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಮೃಗಾಲಯದ ತಾಂತ್ರಿಕ ತಂಡವು ಸಿಂಹವನ್ನು ಘಟನೆ ನಡೆದ ತಕ್ಷಣವೇ ತಪಾಸಣೆ ಮಾಡಿತು ಪರೀಕ್ಷೆಯ ವೇಳೆ ಅದು ಹೆಚ್ಚಿನ ಮಟ್ಟದ ಒತ್ತಡವನ್ನು ಅನುಭವಿಸಿದೆ ಎಂದು ತಿಳಿದಿದ್ದರಿಂದ ಅದನ್ನು ನಿರಂತರ ವೀಕ್ಷಣೆ ಮತ್ತು ಮೇಲ್ವಿಚಾರಣೆಗೆ ಇಡಲಾಗಿದೆ. ಸಿಂಹ ಲಿಯೋನಾ ಆರೋಗ್ಯವಾಗಿದ್ದಾಳೆ, ಈ ಘಟನೆಯ ಹೊರತಾಗಿ ಆಕೆ ಈ ಹಿಂದೆಂದು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸಿಲ್ಲ ಹೀಗಾಗಿ ಆಕೆಗೆ ದಯಾಮರಣ ನೀಡಲಾಗುವುದಿಲ್ಲ. ಈ ರೀತಿಯ ಸಂದರ್ಭಗಳಲ್ಲಿ ಪ್ರೋಟೋಕಾಲ್‌ನಲ್ಲಿ ಇದ್ದಂತೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.


