Chicken Biryani in Mid-day Meal: ಇನ್ನು ಮುಂದೆ ಈ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಿಡ್ ಡೇ ಮೀಲ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ವಾರಿ ಚಿಕನ್ ಬಿರಿಯಾನಿ ಬಡಿಸುವ ಪ್ರಸ್ತಾವನೆ ಮಾಡಲಾಗಿದೆ. ಸಿಎಂ ಗ್ರೀನ್ ಸಿಗ್ನಲ್ ಕೊಟ್ಟರೆ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಸರ್ಕಾರದ ಈ ಭರ್ಜರಿ ಉಡುಗೊರೆ ಲಭ್ಯವಾಗಲಿದೆ.

ಈ ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳಿಗೆ ಇನ್ಮುಂದೆ 'ಚಿಕನ್ ಬಿರಿಯಾನಿ’

ದೇಶಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಈ ಆಹಾರವನ್ನು ನೀಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ಚಪಾತಿ, ಅನ್ನ, ಸಾರು, ಪಲ್ಯ, ಸಾಂಬಾರ್ ಕೊಟ್ಟರೆ, ಇನ್ನೂ ಕೆಲವು ಶಾಲೆಗಳಲ್ಲಿ ಹಾಲು ಮತ್ತು ಮೊಟ್ಟೆ ಕೂಡ ನೀಡಲಾಗುತ್ತದೆ. ಆದರೆ ಶೀಘ್ರದಲ್ಲೇ ಈ ರಾಜ್ಯದ ಲಕ್ಷಾಂತರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಚಿಕನ್ ಬಿರಿಯಾನಿ ಸಿಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ.

ಯಾವ ರಾಜ್ಯ ಸರ್ಕಾರ ಮಕ್ಕಳಿಗೆ ನೀಡಲಿದೆ ಈ ಭರ್ಜರಿ ಉಡುಗೊರೆ?

ವರದಿಯ ಪ್ರಕಾರ, ತಮಿಳುನಾಡು ಸರ್ಕಾರ ಮಧ್ಯಾಹ್ನದ ಬಿಸಿ ಊಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ಬಡಿಸುವ ಬಗ್ಗೆ ಚಿಂತನೆ ನಡೆಸಿದೆ. ಈ ವಿಷಯವು ಪ್ರಸ್ತುತ ಪ್ರಸ್ತಾವನೆ ಮತ್ತು ಚರ್ಚೆಯ ಹಂತದಲ್ಲಿದೆ. ವರದಿಯ ಪ್ರಕಾರ, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಮಂಡಿಸಿದ್ದಾರೆ. ತಮಿಳುನಾಡು ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ರಾಜ್ಯದ ಪ್ರತಿಯೊಂದು ಪ್ರಮುಖ ರಾಜಕೀಯ ಯುಗವು ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮವನ್ನು ತನ್ನದೇ ಆದ ರೀತಿಯಲ್ಲಿ ಬಲಪಡಿಸಿದೆ ಎಂದು ಹೇಳಿದ್ದಾರೆ. ಅದೇ ರೀತಿ, ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ಪರಿಚಯಿಸುವುದು ನನ್ನ ಆಶಯ ಎಂದಿದ್ದಾರೆ.

ಮಧ್ಯಾಹ್ನದ ಊಟ ಹೇಗೆ ಸುಧಾರಿಸಿದೆ?

1956ರಲ್ಲಿ ಅಂದಿನ ಮುಖ್ಯಮಂತ್ರಿ ಕಾಮರಾಜ್ ಅವರು ಮಧ್ಯಾಹ್ನದ ಊಟದ ಯೋಜನೆಗೆ ಚಾಲನೆ ನೀಡಿದರು. ಅದಕ್ಕೆ ಕರುಣಾನಿಧಿ ಮೊಟ್ಟೆ ಸೇರಿಸಿದರೆ, ಎಂಜಿಆರ್ ಅದನ್ನು ಪೌಷ್ಟಿಕ ಆಹಾರ ಕಾರ್ಯಕ್ರಮ ಎಂದು ಬದಲಾಯಿಸಿದರು. ಜಯಲಲಿತಾ ಅವರು ವಾರವಿಡೀ ಮೊಟ್ಟೆ ವಿತರಿಸುವ ವ್ಯವಸ್ಥೆ ಮಾಡಿದರು.

ಸಿಎಂ ವಿಜಯ್ ಹಸಿರು ನಿಶಾನೆ ತೋರಿಸುತ್ತಾರೆಯೇ?

ಮುಖ್ಯಮಂತ್ರಿ ವಿಜಯ್ ಪ್ರಸ್ತುತ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ಬಡಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಸ್ಕೂಲ್ ನ್ಯೂಟ್ರೀಶಿಯನ್ ಪ್ರೋಗ್ರಾಮ್ ನಲ್ಲಿ ತಮಿಳುನಾಡು ಬಹಳ ವರ್ಷಗಳಿಂದ ಮುಂಚೂಣಿಯಲ್ಲಿದೆ. ಇನ್ನು ತಮಿಳುನಾಡಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಯೋಜನೆಯೂ ಕೆಲವು ವರ್ಷಗಳಿಂದ ಜಾರಿಯಲ್ಲಿದೆ.