MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಚೆನ್ನಮ್ಮನ 11 ದಿನದ ತಿಥಿಕಾರ್ಯ ಮುಗಿದರೂ, ಮಾಜಿ ಪ್ರಧಾನಿ ದೇವೇಗೌಡರ ಸಂಗಾತಿ ದೂರವಾದ ನೋವು ಮುಗಿಯುತ್ತಿಲ್ಲ!

ಚೆನ್ನಮ್ಮನ 11 ದಿನದ ತಿಥಿಕಾರ್ಯ ಮುಗಿದರೂ, ಮಾಜಿ ಪ್ರಧಾನಿ ದೇವೇಗೌಡರ ಸಂಗಾತಿ ದೂರವಾದ ನೋವು ಮುಗಿಯುತ್ತಿಲ್ಲ!

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ತಿಥಿ ಕಾರ್ಯ ಹಾಸನದಲ್ಲಿ ನೆರವೇರಿತು. ಪತ್ನಿಯ ಅಗಲಿಕೆಯಿಂದ ತೀವ್ರ ದುಃಖಿತರಾದ ದೇವೇಗೌಡರು ಭಾವುಕರಾದರು. ಚೆನ್ನಮ್ಮ ಅವರ ಸ್ಮರಣಾರ್ಥ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

2 Min read
Author : Sathish Kumar KH
Published : Jul 30 2026, 08:14 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Asianet News

ಮಾಜಿ ಪ್ರಧಾನಮಂತ್ರಿ (Former Prime Minister) ಹೆಚ್.ಡಿ. ದೇವೇಗೌಡ (H.D. Deve Gowda) ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma Deve Gowda) ಅವರು ನಿಧನರಾಗಿ 11 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಹಾಸನದಲ್ಲಿ ಒಕ್ಕಲಿಗ ಸಂಪ್ರದಾಯದಂತೆ (Vokkaliga Tradition) ಉತ್ತರಕ್ರಿಯೆ ಹಾಗೂ 11ನೇ ದಿನದ ತಿಥಿ (11th Day Ritual) ಕಾರ್ಯಗಳು ಭಕ್ತಿಭಾವದಿಂದ ನೆರವೇರಿದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : Asianet News

ಸಾವಿರಾರು ಜನರು, ರಾಜಕೀಯ ನಾಯಕರು, ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿ ಚೆನ್ನಮ್ಮ ಅವರಿಗೆ ನಮನ ಸಲ್ಲಿಸಿದರು. ಆದರೆ, 70 ವರ್ಷಗಳ ಕಾಲ ಒಡನಾಟವಿದ್ದ ಸಂಗಾತಿಯನ್ನು ಕಳೆದುಕೊಂಡ ಮಾಜಿ ಪ್ರಧಾನಿ ದೇವೇಗೌಡರ ನೋವು ಮಾತ್ರ ಇನ್ನೂ ಮುಗಿಯುತ್ತಿಲ್ಲ. ಅವರ ನೋವನ್ನು ನೋಡಿದ ಕುಟುಂಬ ಸದಸ್ಯರು ಮತ್ತು ಅಲ್ಲಿ ನೆರೆದಿದ್ದ ಜನರೂ ಕೂಡ ಒಂದು ಕ್ಷಣ ಭಾವುಕರಾದರು.

Related Articles

Related image1
ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!
Related image2
ತನ್ನಿಚ್ಚೆಯಂತೆಯೇ ರಂಗನಾಥನ ತಪ್ಪಲಲ್ಲಿ ಮಣ್ಣಾದ ಚೆನ್ನಮ್ಮ, ಆಕೆ ಅನ್ನಪೂರ್ಣೆ ನಗುತ್ತಲೇ ವಿದಾಯ ಹೇಳಿದ್ದಾಳೆ: ದೇವೇಗೌಡ
38
Image Credit : Asianet News

ಚೆನ್ನಮ್ಮನವರ ತಿಥಿ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಅತ್ಯಂತ ಭಾವುಕರಾಗಿದ್ದರು. ಸುಮಾರು 72 ವರ್ಷಗಳ ಕಾಲ ಜೀವನ ಸಂಗಾತಿಯಾಗಿದ್ದ ಚೆನ್ನಮ್ಮ ಅವರನ್ನು ಕಳೆದುಕೊಂಡ ನೋವು, ಸಂಕಟ ಹಾಗೂ ಒಂಟಿತನ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. 

ಪತ್ನಿಯ ಸಮಾಧಿಗೆ ಮೈಸೂರು ಮಲ್ಲಿಗೆ (Mysore Mallige) ಅರ್ಪಿಸಿ, ಪತ್ನಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು ಕೆಲಕಾಲ ಮೌನವಾಗಿ ಕುಳಿತು ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರ ಮನಸ್ಸನ್ನು ಕಲಕಿತು. 'ನನ್ನನ್ನೇಕೆ ಏಕಾಂಗಿಯಾಗಿ (Lonely) ಬಿಟ್ಟುಹೋದೆ?' ಎಂಬ ಭಾವನೆ ಅವರ ಮೌನದಲ್ಲೇ ವ್ಯಕ್ತವಾಗುತ್ತಿತ್ತು.

48
Image Credit : Asianet News

ಚೆನ್ನಮ್ಮ ಅವರಿಗೆ ಅತ್ಯಂತ ಇಷ್ಟವಾಗಿದ್ದ ಮೈಸೂರು ಮಲ್ಲಿಗೆ, ಚಕ್ಕುಲಿ (Chakkuli) ಹಾಗೂ ಕಜ್ಜಾಯ (Kajjaya) ಸೇರಿದಂತೆ ಅವರ ನೆಚ್ಚಿನ ತಿನಿಸುಗಳನ್ನು ಅರ್ಪಿಸಲಾಯಿತು. ಭವಾನಿ ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದರು. ಬಳಿಕ ಹೆಚ್.ಡಿ. ರೇವಣ್ಣ ನಿವಾಸದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಉತ್ತರಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಚೆನ್ನಮ್ಮ ಅವರ ಬಟ್ಟೆ, ಒಡವೆಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಯಿತು.

58
Image Credit : Asianet News

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ (Union Minister) ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy), ಮಾಜಿ ಸಚಿವ ಹೆಚ್.ಡಿ. ರೇವಣ್ಣ (H.D. Revanna) ಸೇರಿದಂತೆ ದೇವೇಗೌಡರ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಅಲ್ಲದೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V. Somanna), ಮಾಜಿ ಸಚಿವ ಸಿ.ಎಂ. ಇಬ್ರಾಹಿಂ (C.M. Ibrahim), ಹಲವು ಶಾಸಕರು, ಮಾಜಿ ಸಚಿವರು, ಜೆಡಿಎಸ್ (JDS) ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.

68
Image Credit : Asianet News

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, 'ನಮ್ಮ ತಾಯಿ ಅಗಲಿಕೆಯ ನಂತರ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಜನತೆ, ವಿವಿಧ ಪಕ್ಷಗಳ ನಾಯಕರು ಹಾಗೂ ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ತಾಯಿ ಎಂದಿಗೂ ರಾಜಕೀಯದಲ್ಲಿ (Politics) ನೇರವಾಗಿ ತೊಡಗಿಸಿಕೊಳ್ಳಲಿಲ್ಲ. ಹಳ್ಳಿಯ ಸರಳ ಬದುಕನ್ನು (Simple Life) ಇಷ್ಟಪಟ್ಟ ಅವರು, ತಂದೆ ಪ್ರಧಾನಿಯಾಗಿದ್ದರೂ ಯಾವುದೇ ಆಡಂಬರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ' ಎಂದು ಸ್ಮರಿಸಿದರು.

78
Image Credit : Asianet News

ಮುಂದುವರಿದು ಮಾತನಾಡಿದ ಕುಮಾರಸ್ವಾಮಿ ಅವರು, ಚೆನ್ನಮ್ಮ ಅವರ ಸ್ಮರಣಾರ್ಥ ಈ ಸ್ಥಳವನ್ನು ಸಮಾಜಮುಖಿ (Social Service) ಕಾರ್ಯಗಳಿಗೆ ಮೀಸಲಿಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಇಲ್ಲಿ ಆರಂಭಿಸುವ ಉದ್ದೇಶವಿದ್ದು, ಈ ನೆಲವು ಮುಂದಿನ ಪೀಳಿಗೆಗೂ ಸೇವೆಯ ಸಂಕೇತವಾಗಬೇಕು ಎಂಬುದು ಕುಟುಂಬದ ಆಶಯ ಎಂದು ಹೇಳಿದರು.

88
Image Credit : Asianet News

ಚೆನ್ನಮ್ಮ ದೇವೇಗೌಡ ಅವರ ಅಂತಿಮ ವಿಧಿವಿಧಾನಗಳಂತೆ 11ನೇ ದಿನದ ತಿಥಿ ಕಾರ್ಯವೂ ಅತ್ಯಂತ ಶಿಸ್ತಿನಿಂದ ನಡೆಯಿತು. ಬೆಳಗ್ಗೆಯಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ಬಂದು ಸಮಾಧಿ ದರ್ಶನ ಮಾಡಿ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕುಟುಂಬದ ದುಃಖದ ಜೊತೆಗೆ ಜನರ ಅಪಾರ ಅಭಿಮಾನವೂ ಸ್ಪಷ್ಟವಾಗಿ ಗೋಚರಿಸಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಎಚ್‌.ಡಿ. ದೇವೇಗೌಡ
ಹಾಸನ
ಹೆಚ್.ಡಿ. ಕುಮಾರಸ್ವಾಮಿ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಭಾರತದಲ್ಲಿ ಅಗ್ಗದ ದರಕ್ಕೆ ಚಿನ್ನ ಖರೀದಿಸಬೇಕೇ? ಇಲ್ಲಿವೆ ನೋಡಿ ಟಾಪ್ 10 ಬಂಗಾರದ ಮಾರುಕಟ್ಟೆಗಳು!
Recommended image2
650 ರಿಂದ 500, ಕೊನೆಗೆ 135: ಒಂದೇ ದಿನದಲ್ಲಿ ಮೂರು ಬಾರಿ ಬದಲಾದ NEET ಸ್ಕೋರ್‌, ಕೋರ್ಟ್‌ ಮೆಟ್ಟಿಲೇರಿದ ಅಭ್ಯರ್ಥಿ!
Recommended image3
ಸೈಟ್ ಖರೀದಿಸಿದರೆ ಜೀವಮಾನವಿಡೀ ತಿರುಪತಿ ವಿಐಪಿ ದರ್ಶನ? ನಕಲಿ ಜಾಹೀರಾತು ವಿರುದ್ಧ ಟಿಟಿಡಿ ದೂರು
Related Stories
Recommended image1
ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!
Recommended image2
ತನ್ನಿಚ್ಚೆಯಂತೆಯೇ ರಂಗನಾಥನ ತಪ್ಪಲಲ್ಲಿ ಮಣ್ಣಾದ ಚೆನ್ನಮ್ಮ, ಆಕೆ ಅನ್ನಪೂರ್ಣೆ ನಗುತ್ತಲೇ ವಿದಾಯ ಹೇಳಿದ್ದಾಳೆ: ದೇವೇಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved