ಓಡೋಗಿ ಟಾಯ್ಲೆಟ್‌ನಲ್ಲಿ ಕೂರೋ ಮುನ್ನ ಒಮ್ಮೆ ಗಮನಿಸಿ: ಟಾಯ್ಲೆಟ್‌ನಲ್ಲಿತ್ತು ಆರಕ್ಕೂ ಹೆಚ್ಚು ಹಾವುಗಳು
ಸರ್ಕಾರಿ ಕಾಲೇಜೊಂದರ ಲೇಡಿಸ್ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಾವುಗಳು ಹೋರಳಾಡುತ್ತಿರುವ ಭಯಾನಕ ವೀಡಿಯೋವೊಂದು ವೈರಲ್ ಆಗಿದೆ. ತಮಿಳುನಾಡಿನ ಚೆಯ್ಯರ್ ಅಣ್ಣ ಸರ್ಕಾರಿ ಕಾಲೇಜಿನಲ್ಲಿ ಈ ದೃಶ್ಯ ಕಂಡು ಬಂದಿದೆ
ತಮಿಳುನಾಡು: ಸರ್ಕಾರಿ ಕಾಲೇಜೊಂದರ ಲೇಡಿಸ್ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಾವುಗಳು ಹೋರಳಾಡುತ್ತಿರುವ ಭಯಾನಕ ವೀಡಿಯೋವೊಂದು ವೈರಲ್ ಆಗಿದೆ. ತಮಿಳುನಾಡಿನ ಚೆಯ್ಯರ್ ಅಣ್ಣ ಸರ್ಕಾರಿ ಕಾಲೇಜಿನಲ್ಲಿ ಈ ದೃಶ್ಯ ಕಂಡು ಬಂದಿದೆ. ಟಾಯ್ಲೆಟ್‌ನಲ್ಲಿ ಈ ರೀತಿ ಹಲವು ಹಾವುಗಳು ಹೊರಳಾಡುತ್ತಿರುವ ದೃಶ್ಯ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಟಾಯ್ಲೆಟ್‌ಗೆ ಹೋಗುವುದಕ್ಕೆ ಭಯಪಡುವಂತಾಗಿದೆ. ಈ ಗಟನೆಗೆ ಸಂಬಂಧಿಸಿದಂತೆ ಸಂಗೀತಾ ಸಂಯೋಜಕ ಪ್ರಕಾಶ್ ಕುಮಾರ್ ಕೂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸರ್ಕಾರಿ ಕಾಲೇಜಿನ ಟಾಯ್ಲೆಟ್ನಲ್ಲಿ ಸ್ಚಚ್ಛತೆ ಕಾಪಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದಿರುವ ಚೆಯ್ಯರ್ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳು ಶಾಲೆಯಲ್ಲಿ ಶೌಚಾಲಯ ಸೌಲಭ್ಯ ಸರಿ ಇಲ್ಲ. ಅದನ್ನು ಸ್ವಚ್ಛಗೊಳಿಸುವುದಿಲ್ಲ ಅಲ್ಲದೇ ಟಾಯ್ಲೆಟ್ ಇರುವ ಸ್ಥಳವೂ ಪೊದೆಗಳಿಂದ ಕೂಡಿದ್ದು, ಹೀಗಾಗಿ ಇದನ್ನು ಹಾವುಗಳು ಆಶ್ರಯತಾಣ ಮಾಡಿಕೊಂಡಿವೆ ಎಂದು ದೂರಿದ್ದಾರೆ. ಈಗ ವೈರಲ್ ಆಗಿರುವ ಭಯಾನಕ ವೀಡಿಯೋದಲ್ಲಿ ಒಂದಲ್ಲ ಎರಡಲ್ಲ 6ಕ್ಕೂ ಹೆಚ್ಚು ಹಾವುಗಳು ಹೊರಳಾಡುವುದನ್ನು ಕಾಣಬಹುದಾಗಿದೆ. ಇಂತಹ ಕೆಟ್ಟ ಸ್ಥಿತಿಯಲ್ಲಿರುವ ಶೌಚಾಲಯವನ್ನೇ ಮಕ್ಕಳು ಬಳಸಬೇಕಿದೆ. ಈ ಬಗ್ಗೆ ಶಾಲಾಡಳಿತ ಮಂಡಳಿ ಕ್ರಮ ಕೈಗೊಂಡು ಆ ಶೌಚಾಲಯದ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ಪೊದೆಗಳನ್ನು ತೆಗೆದು ಅಲ್ಲಿ ಸ್ವಚ್ಛ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟಾಯ್ಲೆಟ್ ಕಮೋಡ್‌ನಲ್ಲಿ ಹಾವು, ಕಾಣಿಸಿದ್ದು ಮೂರು, ಸಿಕ್ಕಿದ್ದು ಎರಡು... ಶೌಚಾಲಯದೊಳಗೆ ಹೋಗಲು ಫುಲ್ ಭಯ!
ಕಳೆದ ತಿಂಗಳು ಮಧ್ಯಪ್ರದೇಶದ ಇಂದೋರ್‌ನ ಮನೆಯೊಂದರ ಟಾಯ್ಲೆಟ್ ಕಮೋಡ್‌ನಲ್ಲಿ 3ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡು ಮನೆ ಮಂದಿಯನ್ನು ಭಯಬೀಳಿಸಿದ್ದವು. ಅದರಲ್ಲಿದ್ದ ಮೂರು ಹಾವುಗಳಲ್ಲಿ ಎರಡು ಹಾವುಗಳನ್ನು ರಕ್ಷಿಸಲಾಗಿತ್ತು. ಆದರೆ ಮತ್ತೊಂದು ಹಾವು ಹಿಡಿಯುವವರ ಕೈಗೆ ಸಿಗದ ಕಾರಣ ಮನೆ ಮಂದಿ ಭಯಗೊಂಡಿದ್ದರು. ಇಂದೋರ್‌ನ ಗಾಂಧಿನಗರದಲ್ಲಿ ಈ ಘಟನೆ ನಡೆದಿತ್ತು ಅರಿಹಂತ್ ಎಕ್ಸೆಟೆನ್ಸನ್ ನಲ್ಲಿ ವಾಸವಾಗಿದ್ದ ಮಹೇಶ್ ಕ್ಷತ್ರಿಯ ಎಂಬವರ ಮನೆಯ ಶೌಚಾಲಯದಲ್ಲಿ ಹಾವುಗಳು ಕಂಡು ಬಂದಿದ್ದವು. ಮಳೆಗಾಲದ ಸಮಯದಲ್ಲಿ ಹಾವುಗಳು ಆಶ್ರಯ ಅರಸಿ ಮನೆಯೊಳಗೆ ಕತ್ತಲಿನಿಂದ ಕೂಡಿದ ನಿಗೂಢವಾದ ಜಾಗಗಳಲ್ಲಿ ಬಂದು ಆಶ್ರಯ ಪಡೆಯುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಬಿಚ್ಚಿಟ್ಟ ಶೂಗಳ ಒಳಗೆ, ಬೈಕ್‌ನ ಒಳಗೆ, ಕಾರಿನೊಳಗೆ ಹೂಕುಂಡಗಳಲ್ಲಿ ಹಾವುಗಳು ಸುರುಳಿ ಸುತ್ತಿಕೊಂಡು ಮಲಗಿದ್ದಂತಹ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಹೀಗಾಗಿ ಬಿಚ್ಚಿಟ್ಟ ಶೂ ಕಾಲಿಗೆ ಹಾಕುವ ಮೊದಲು ಪರೀಕ್ಷಿಸಿ ಧರಿಸಬೇಕು.
Trending Video : ಇನ್ನೇನೂ ಕಮೋಡ್ ಮೇಲೆ ಕುಳಿತುಕೊಳ್ಬೇಕು… ಅಬ್ಬಾ ಬುಸ್ ಬುಸ್ ಹಾವು!