ಟಾಯ್ಲೆಟ್ ಕಮೋಡ್‌ನಲ್ಲಿ ಮೂರು ನಾಗರಹಾವುಗಳು ಕಾಣಿಸಿವೆ. ಉರಗ ರಕ್ಷಕರು ಬಂದು ಎರಡು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದು ಹಾವು ಮಿಸ್ ಆಗಿದ್ದರಿಂದ ಕುಟುಂಬಸ್ಥರು ಶೌಚಾಲಯಕ್ಕೆ ಹೋಗಲು ಹೆದರುವಂತಾಗಿದೆ.

ಇಂದೋರ್: ಮನೆಯೊಂದರ ಟಾಯ್ಲೆಟ್ ಕಮೋಡ್‌ನಲ್ಲಿ ಮೂರು ನಾಗರಹಾವುಗಳು ಪತ್ತೆಯಾಗಿವೆ. ಮೂರು ಹಾವುಗಳಲ್ಲಿ ಒಂದು ಮಿಸ್ ಆಗಿದ್ದರಿಂದ ಮನೆಯಲ್ಲಿರುವ ಜನರು ಟಾಯ್ಲೆಟ್‌ಗೆ ಹೋಗಲು ಹೆದರುವಂತಾಗಿದೆ. ಮಧ್ಯಪ್ರದೇಶದ ಇಂದೋರನ ಗಾಂಧಿನಗರದ ಮನೆಯಲ್ಲಿಯ ಟಾಯ್ಲೆಟ್‌ನಿಂದ ಹಾವುಗಳನ್ನು ತೆಗೆದು ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೂರು ಹಾವುಗಳಲ್ಲಿ ಎರಡನ್ನು ರಕ್ಷಣೆ ಮಾಡಲಾಗಿದ್ದು, ಒಂದು ಮಿಸ್ ಆಗಿದೆ. ಮಿಸ್ ಆಗಿರುವ ಹಾವು ಟಾಯ್ಲೆಟ್ ಕಮೋಡ್‌ನಲ್ಲಿಯೇ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. 

ಗಾಂಧಿನಗರದ ಅರಿಹಂತ್ ಎಕ್ಸೆಟೆನ್ಸನ್ ನಲ್ಲಿ ವಾಸವಾಗಿರುವ ಮಹೇಶ್ ಕ್ಷತ್ರಿಯ ಎಂಬವರ ಮನೆಯ ಶೌಚಾಲಯದಲ್ಲಿ ಹಾವುಗಳು ಕಂಡು ಬಂದಿವೆ. ಮನೆಯಲ್ಲಿ ಮಹೇಶ್, ಪತ್ನಿ ಕುಸುಮ್ ಮತ್ತು ಎಂಟು ತಿಂಗಳ ಮಗು ವಾಸವಾಗಿದ್ದಾರೆ. ಮಹೇಶ್ ಪತ್ನಿ ಕುಸುಮ್ ಅವರು ಟಾಯ್ಲೆಟ್‌ನಲ್ಲಿ ಹಾವು ಇರೋದನ್ನು ಕಂಡಿದ್ದಾರೆ. ಆಗಸ್ಟ್ 12ರಂದು ರಾತ್ರಿ ಸುಮಾರು 10.30ರ ವೇಳೆಗೆ ಕುಸುಮ್ ಶೌಚಾಲಯಕ್ಕೆ ಹೋಗಿದ್ದಾರೆ. ಟಾಯ್ಲೆಟ್‌ ಸುತ್ತ ಹಾವು ಸುತ್ತಿಕೊಂಡಿರೋದನ್ನು ನೋಡಿ ಭಯದಿಂದ ಹೊರಗೆ ಬಂದಿದ್ದಾರೆ. ಶೌಚಾಲಯದಿಂದ ಹಾವು ಹೊರಗೆ ಬರದಂತೆ ಬಾಗಿಲು ಸಹ ಹಾಕಿದ್ದಾರೆ. ಕೂಡಲೇ ಪತಿ ಮಹೇಶ್‌ಗೆ ಹಾವು ಬಂದಿರೋ ವಿಷಯ ತಿಳಿಸಿದ್ದಾರೆ. ಸ್ಥಳೀಯ ಉರಗತಜ್ಞರಿಗೆ ಕರೆ ಮಾಡಿರುವ ಮಹೇಶ್, ಮನೆಯೊಳಗೆ ಹಾವು ಬಂದಿದೆ ಎಂದು ಹೇಳಿದ್ದಾರೆ. ಅದೇ ರಾತ್ರಿ ಸುಮಾರು 5 ಅಡಿ ಉದ್ದದ ಹಾವನ್ನು ರಕ್ಷಣೆ ಮಾಡಲಾಗಿತ್ತು. ಮರುದಿನ ಬೆಳಗ್ಗೆ ಅಂದ್ರೆ ಆಗಸ್ಟ್ 15ರಂದು ಮತ್ತೆರಡು ಹಾವುಗಳು ಶೌಚಾಲಯದಲ್ಲಿ ಕಂಡು ಬಂದಿವೆ. 

ಏಕಾಏಕಿ ಹೆಚ್ಚಾಯ್ತು ಪುರುಷರ ಒಳಉಡುಪು ಮಾರಾಟ; ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಚಡ್ಡಿ ಸೇಲ್!

ಕೂಡಲೇ ಬಾಗಿಲು ಮುಚ್ಚಿದ ಮಹೇಶ್, ಉರಗತಜ್ಞರಿಗೆ ವಿಷಯ ತಿಳಿಸಿದ್ದಾರೆ. ಬಾತ್‌ರೂಮ್‌ನಲ್ಲಿ ಮೀನು ಎಸೆಯಿರಿ ಅದನ್ನ ತಿನ್ನಲು ಹಾವು ಕಮೋಡ್‌ನಿಂದ ಹೊರಗೆ ಬಂದಾಗ ಹಿಡಿಯಬಹುದು ಎಂದಿದ್ದಾರೆ. ಉರಗತಜ್ಞರ ಸಲಹೆಯಂತೆ ಬಾತ್‌ರೂಮ್‌ ಒಳಗೆ ಮಹೇಶ್ ಮೀನು ಎಸೆದಿದ್ದಾರೆ. ಮಹೇಶ್ ಹಾವಿನ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಆಗಸ್ಟ್ 16ರಂದು ಮೀನು ತಿನ್ನಲು ಹೊರಬಂದ ಹಾವನ್ನು ಹಿಡಿಯಲಾಗಿದೆ. ಆದರೆ ಮೂರನೇ ಹಾವು ಮಾತ್ರ ಕಮೋಡ್‌ನಿಂದ ಹೊರಗೆ ಬಂದಿಲ್ಲ. ಕಮೋಡ್‌ನೊಳಗೆ ಎಷ್ಟೇ ನೀರು ಹಾಕಿದರೂ ಹಾವು ಹೊರಗಡೆ ಬಂದಿಲ್ಲ. 

ಮನೆಗೆ ಸಂಪರ್ಕವಿರುವ ಓವರ್‌ಫ್ಲೋ ಚೇಂಬರ್ ಮೂಲಕ ಹಾವುಗಳು ಶೌಚಾಲಯದೊಳಗೆ ಬಂದಿರಬಹುದು. ಮನೆಯ ಮಾಲೀಕರು ಮೂರು ಹಾವುಗಳನ್ನು ನೋಡಿರೋದಾಗಿ ಹೇಳಿದ್ದಾರೆ. ಆದ್ರೆ ಎರಡು ಹಾವುಗಳನ್ನು ಮಾತ್ರ ರಕ್ಷಣೆ ಮಾಡಲಾಗಿದೆ. ಮೂರನೇ ಹಾವು ನಾಪತ್ತೆಯಾಗಿದೆ ಎಂದು ಉರಗ ರಕ್ಷಕ ಮಹೇಂದ್ರ ಶ್ರೀವಾಸ್ತವ ಹೇಳಿದ್ದಾರೆ. 

Scroll to load tweet…