ಮೈತ್ರಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಜೊಸೆಫ್ ವಿಜಯ್‌ಗೆ ಅಗ್ನಿಪರೀಕ್ಷೆ. ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ವಿಶ್ವಾಸ ಮತ ಯಾಚಿಸಿದ್ದಾರೆ. ವಿಜಯ್‌ಗೆ ಕೆಲ ಪಕ್ಷಗಳು ಬೆಂಬಲ ಸೂಚಿಸಿದೆ.

ಚೆನ್ನೈ (ಮೇ.13) ತಮಿಳುನಾಡಿನಲ್ಲಿ ನೂತನವಾಗಿ ಅಸ್ತಿತ್ವಕ್ಕ ಬಂದಿರುವ ಜೊಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಇಂದು ಮೊದಲ ಅಗ್ನಿ ಪರೀಕ್ಷೆ. ಕಾಂಗ್ರೆಸ್, ಸಿಎಂಐ, ವಿಸಿಕೆ ಸೇರಿದಂತೆ ಕೆಲ ಪಕ್ಷಗಳ ಬೆಂಬಲ ಪೆಡೆದು ಜೊಸೆಫ್ ವಿಜಯ್ ಸರ್ಕಾರ ರಚಿಸಿದ್ದಾರೆ. ಇದೀಗ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೊಸೆಫ್ ವಿಜಯ್ ವಿಶ್ವಾಸಮತ ಯಾಚಿಸಿದ್ದಾರೆ. ವಿಜಯ್ ಸರ್ಕಾರಕ್ಕೆ ಕೆಲ ಪಕ್ಷಗಳು ಬೆಂಬಲ ಸೂಚಿಸಿದೆ.

Add Asianetnews Kannada as a Preferred SourcegooglePreferred

ಕಾರಣ ನೀಡಿ ಬೆಂಬಲ ಕೊಟ್ಟ ಕಾಂಗ್ರೆಸ್

ವಿಜಯ್ ಮ್ಯಾಜಿಕ್ ನಂಬರ್ ಕೊರತೆಯಾಗುತ್ತಿದ್ದಂತೆ ಕಾಂಗ್ರೆಸ್ ಬೆಂಬಲ ಘೋಷಿಸಿತ್ತು. ಇದೀಗ ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್ ಶಾಸಕ ರಾಜೇಶ್ ಕುಮಾರ್ ವಿಧಾನಸಭೆಯಲ್ಲಿ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಮೈತ್ರಿಯನ್ನು ಹೊರಗಿಜಡಬೇಕು. ಬಿಜೆಪಿಯಿಂದ ರಾಜ್ಯಕ್ಕೆ ಅಪಾಯ ಹೆಚ್ಚಿದೆ. ಹೀಗಾಗಿ ನಾವು ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ರಾಜೇಶ್ ಕುಮಾರ್ ಹೇಳಿದ್ದಾರೆ.

ಟಿವಿಕೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಪಕ್ಷಗಳು

ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೊಸೆಫ್ ವಿಜಯ್ ಕಾಂಗ್ರೆಸ್ ಬೆಂಬಲದ ಜೊತೆಗೆ ಸಿಪಿಐ, ವಿಸಿಕೆ ಹಾಗೂ ಇಂಡಿಯನ್ ಮುಸ್ಲಿಂ ಲೀಗ್ ಪಕ್ಷಗಳು ಬೆಂಬಲ ಸೂಚಿಸಿದೆ.

ಎಐಎಡಿಂಕೆ ಇಬ್ಬಾಗ

ಈ ಬಾರಿಯ ವಿಧಾನಸಭೆ ಚುನಾವಣೆ ಬಳಿಕ ಎಐಎಡಿಎಂಕೆ ಪಕ್ಷ ಇಬ್ಬಾಗವಾಗಿಗೆ. ಎರಡು ಬಣಗಳು ಕಿತ್ತಾಟ ಶುರುಮಾಡಿದೆ. ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜೀನಾಮೆಗೆ ಒಂದು ಬಣ ಒತ್ತಾಯಿಸುತ್ತಿದೆ. ಇದೀಗ ವಿಜಯ್ ಸರ್ಕಾರಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲೂ ಪಕ್ಷದಲ್ಲಿ ಒಡಕು ಹೆಚ್ಚಾಗಿತೆ. ಒಂದು ಬಣ ವಿಜಯ್‌ಗೆ ಬೆಂಬಲ ಸೂಚಿಸಲು ಸಜ್ಜಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಏನಾಗಲಿದೆ ಸರ್ಕಾರ?

ಜೊಸೆಫ್ ವಿಜಯ್ ಟಿವಿಕೆ ಸರ್ಕಾರ ಮೇಲ್ನೋಟಕ್ಕೆ ಹಲವು ಪಕ್ಷಗಳು ಬೆಂಬಲ ಸೂಚಿಸಿದೆ. ಹೀಗಾಗಿ ವಿಧಾನಸಭೆಯ ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ಸರ್ಕಾರ ಭದ್ರವಾಗುವ ಸಾಧ್ಯತೆ ಹೆಚ್ಚಿದೆ.

ಡಿಎಂಕೆ ಮಿತ್ರಪಕ್ಷಗಳಿಂದ ವಿಜಯ್ ಸರ್ಕಾರಕ್ಕೆ ಬೆಂಬಲ

ಡಿಎಂಕೆ ಆಡಳಿತ ಅಂತ್ಯಗೊಳಿಸಿ ಜನರು ಆಯ್ಕೆ ಮಾಡಿದ ವಿಜಯ್ ಸರ್ಕಾರ ತಮಿಳುನಾಡು ಆಡಳಿತ ಚುಕ್ಕಾಣಿ ಹಿಡಿದಿದೆ. ವಿಜಯ್ ಸರ್ಕಾರ ಅಸ್ತಿತ್ವಕ್ಕೆ ಬರಲು ಭಾರಿ ಹೈಡ್ರಾಮ ನಡೆದಿತ್ತು. ಡಿಎಂಕೆ ಆಡಳಿತ ಅಂತ್ಯಗೊಳಿಸಿ ಅಧಿಕಾರಕ್ಕೇರಿದ ವಿಜಯ್ ಸರ್ಕಾರಕ್ಕೆ ಡಿಎಂಕೆ ಮಿತ್ರ ಪಕ್ಷಗಳೇ ಬೆಂಬಲ ಸೂಚಿಸಿದೆ. ಡಿಎಂಕೆ ಹೊರತುಪಡಿಸಿ, ಡಿಎಂಕೆಯ ಎಲ್ಲಾ ಮಿತ್ರ ಪಕ್ಷಗಳು ವಿಜಯ್ ಸರ್ಕಾರಕ್ಕೆ ಬೆಂಬಲ ಸೂಚಿಸಿದೆ.