ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ತುಮಕೂರು ಜಿಲ್ಲೆಯ ತುರುವೇಕೆರೆ ಮೂಲದ ಎನ್‌. ಸುನೀಲ್‌ ಆನಂದ್‌ ಗೆಲುವು ಸಾಧಿಸಿದ್ದಾರೆ. ಮೆಟ್ಟುಪಾಳ್ಯಂ ಕ್ಷೇತ್ರದಿಂದ ಡಿಎಂಕೆ ಹಾಗೂ ಎಐಎಡಿಎಂಕೆ ಅಭ್ಯರ್ಥಿಗಳನ್ನು ಮಣಿಸಿ, ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಚೆನ್ನೈ/ತುರುವೇಕೆರೆ: ತಮಿಳುನಾಡಿನಲ್ಲಿ ನಟ ವಿಜಯ್‌ ಅವರ ಟಿವಿಕೆ ಪಕ್ಷ ಜಯಭೇರಿ ಬಾರಿಸಿದ ಬೆನ್ನಲ್ಲೇ, ಕರ್ನಾಟಕದ ತುಮಕೂರು ಜಿಲ್ಲೆಯ ತುರುವೇಕೆರೆಯ ವ್ಯಕ್ತಿಯೊಬ್ಬರು ಟಿವಿಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂಬ ಅಚ್ಚರಿಯ ವಿಷಯ ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ಎನ್‌. ಸುನೀಲ್‌ ಆನಂದ್‌ ಇಂಥ ಗೆಲುವು ಸಾಧಿಸಿದವರು. 75,664 ಮತ ಪಡೆದ ಇವರು ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಪಕ್ಷದವರನ್ನು ಮಣಿಸಿ, 7778 ಮತಗಳ ಅಂತರದಿಂದ ಮೆಟ್ಟುಪಾಳ್ಯಂನಲ್ಲಿ ವಿಜಯ ಸಾಧಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ:

ಮೂಲತಃ ತುರುವೇಕೆರೆಯವರಾದ ಇವರು, ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನೆಲೆಸಿದ್ದಾರೆ.

ಸುನೀಲ್ ಆನಂದ್ ಅವರ ಅಜ್ಜನ ಊರು ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರು ತಮಿಳುನಾಡಿಗೆ ವಲಸೆ ಹೋಗಿದ್ದರು. ತದ ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು. ನಿಂಗೇಗೌಡರ ಮಗ ಎಚ್.ಎನ್.ನಾಗರಾಜು ಅವರ ಮಗನೇ ಈಗ ಮೆಟ್ಟುಪಾಳ್ಯಂನ ಶಾಸಕರಾಗಿರುವ ಸುನಿಲ್ ಆನಂದ್.

10ನೇ ತರಗತಿಯವರೆಗೆ ಓದು ಪೂರೈಸಿದ್ದು, ತಮಿಳುನಾಡಿನಲ್ಲಿಯೇ ರಿಯಲ್‌ ಎಸ್ಟೇಟ್‌ ಹಾಗೂ ಇತರ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಬಹುದೀರ್ಘಕಾಲದಿಂದಲೂ ವಿಜಯ್‌ರ ಬೆಂಬಲಿಗರಾಗಿದ್ದರು. ಜೊತೆಗೆ, ಟಿವಿಕೆಯ ನಿಷ್ಠಾವಂತ ಕಾರ್ಯಕರ್ತ ಕೂಡಾ ಹೌದು. ಚುನಾವಣೆಗೆ ನಿಲ್ಲುವ ಮೊದಲು ಪಕ್ಷದಲ್ಲಿ ತಮ್ಮ ವರ್ಚಸ್ಸು ಬೆಳೆಸಿಕೊಳ್ಳುತ್ತಾ ಬಂದಿದ್ದರು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ ಮೇಲೆ ಮತ್ತೆ ಚರ್ಚೆ ಅಪ್ರಸ್ತುತ: ಸಚಿವ ಪ್ರಿಯಾಂಕ್

ಇದನ್ನೂ ಓದಿ: ಉಪಚುನಾವಣೆ ಸೋಲಿನ ಕಾರಣ ಬಿಚ್ಚಿಟ್ಟು, ತಪ್ಪು ಸರಿಪಡಿಸಿಕೊಳ್ತೇವೆ ಎಂದ ಸಚಿವ ಸೋಮಣ್ಣ