Asianet Suvarna News Asianet Suvarna News

ರಸ್ತೆಯಲ್ಲಿ ಬಿದ್ದಿದ್ದ ಸಾವಿರಾರು ರೂ. ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ Srilanka ತಮಿಳು ನಿರಾಶ್ರಿತೆ

ಸತ್ಯಮಂಗಲದ ಅಂಗಡಿಯ ವ್ಯಾಪಾರಿ ಗುಣಸಿಂಗಂ ಪೊಲೀಸರನ್ನು ಸಂಪರ್ಕಿಸಿ, ಆ ಹಣ ಅದೇ ಪ್ರದೇಶದಲ್ಲಿ ಮಿಠಾಯಿ ಅಂಗಡಿ ನಡೆಸುತ್ತಿರುವ ತನ್ನ ಸ್ನೇಹಿತ ಜೋಶ್ವಾ ಅವರಿಗೆ ಸೇರಿದ್ದು ಎಂದು ಹೇಳಿಕೊಂಡರು. ಅಲ್ಲದೆ, ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮಗುವಿಗೆ ಜನ್ಮ ನೀಡಿದ ಮಗಳ ಚಿಕಿತ್ಸಾ ವೆಚ್ಚಕ್ಕಾಗಿ ತಾನು ಅವರಿಂದ ಹಣ ಸಾಲ ಪಡೆದುಕೊಂಡಿದ್ದೆ ಎಂದೂ ಹೇಳಿದ್ದಾರೆ.

sri lankan tamil refugee returns Rs 40 000 she found on road in coimbatore ash
Author
First Published Oct 31, 2022, 1:32 PM IST

ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಪುನರ್ವಸತಿ ಶಿಬಿರದಲ್ಲಿ ನೆಲೆಸಿರುವ ಶ್ರೀಲಂಕಾ (Sri Lanka) ತಮಿಳು ನಿರಾಶ್ರಿತ (Tamil Refugee) ಮಹಿಳೆಯೊಬ್ಬರು ಶುಕ್ರವಾರ ಈರೋಡ್‌ನ (Erode) ಸತ್ಯಮಂಗಲಂ ಬಸ್ ನಿಲ್ದಾಣದ (Sathyamangalam Bus Stand) ಬಳಿಯ ರಸ್ತೆಯಲ್ಲಿ ಸಿಕ್ಕ 40,000 ರೂ. ಅನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ರಸ್ತೆಯಲ್ಲಿ ದೊರೆತ 40,000 ರೂ.ಗಳನ್ನು ಸಮೀಪದ ಪೊಲೀಸ್ ಠಾಣೆಗೆ ಶ್ರೀಲಂಕಾ ನಿರಾಶ್ರಿತ ಮಹಿಳೆ ಗುರುವಾರ ಹಿಂದಿರುಗಿಸಿದರು ಮತ್ತು ಪೊಲೀಸರು ಶುಕ್ರವಾರ ಆ ಹಣವನ್ನು ಅದರ ನಿಜವಾದ ಮಾಲೀಕರಿಗೆ ಹಿಂದಿರುಗಿಸಿದರು ಎಂದು ತಿಳಿದುಬಂದಿದೆ.

ತಮಿಳುನಾಡಿನ ಈರೋಡ್‌ನ ಭವಾನಿಸಾಗರದಲ್ಲಿರುವ ಶ್ರೀಲಂಕಾ ತಮಿಳು ಪುನರ್ವಸತಿ ಶಿಬಿರದಲ್ಲಿ ತಂಗಿರುವ ರಾಜೇಶ್ವರಿ (55) ಬಸ್‌ನಲ್ಲಿ ಸತ್ಯಮಂಗಲಕ್ಕೆ ತೆರಳಿದ್ದರು. ಆಕೆ ಸತ್ಯಮಂಗಲ ತಲುಪಿ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಪಾರ್ಸೆಲ್‌ವೊಂದನ್ನು ನೋಡಿದರು.  ಪಾರ್ಸೆಲ್ ತೆರೆದು ನೋಡಿದಾಗ ಅದರಲ್ಲಿ 500 ರೂಪಾಯಿ ನೋಟುಗಳ 40,000 ರೂಪಾಯಿ ಇತ್ತು ಎಂದು ಆಕೆಯ ಅರಿವಿಗೆ ಬಂತು.

ಇದನ್ನು ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ: ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

ರಾಜೇಶ್ವರಿ ಎಂಬ 55 ವರ್ಷದ ನಿರಾಶ್ರಿತ ಮಹಿಳೆಗೆ ರಸ್ತೆಯಲ್ಲಿ ಪಾರ್ಸೆಲ್ ಹಾಗೂ ಹಣ ಸಿಕ್ಕಿದೆ. ಆಕೆ ಗೋಕುಲ್ ಎಂಬ 21 ವರ್ಷದ ಯುವಕನಿಂದ ಸಹಾಯ ಪಡೆದು ಸತ್ಯಮಂಗಲಂ ಪೊಲೀಸ್ ಠಾಣೆಗೆ ಹಣವನ್ನು ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ, ಪೊಲೀಸರು ಹಣವನ್ನು ಕಳೆದುಕೊಂಡ ವ್ಯಕ್ತಿಗಳು, ತಮ್ಮ ಹಕ್ಕು ಮತ್ತು ಮಾನ್ಯ ಪುರಾವೆಗಳೊಂದಿಗೆ ಠಾಣೆಗೆ ಬರುವಂತೆ ವಾಟ್ಸಾಪ್‌ನಲ್ಲಿ ಸಂದೇಶ ಹಂಚಿಕೊಂಡಿದ್ದರು. 

ನಂತರ, ಸತ್ಯಮಂಗಲದ ಅಂಗಡಿಯ ವ್ಯಾಪಾರಿ ಗುಣಸಿಂಗಂ ಪೊಲೀಸರನ್ನು ಸಂಪರ್ಕಿಸಿ, ಆ ಹಣ ಅದೇ ಪ್ರದೇಶದಲ್ಲಿ ಮಿಠಾಯಿ ಅಂಗಡಿ ನಡೆಸುತ್ತಿರುವ ತನ್ನ ಸ್ನೇಹಿತ ಜೋಶ್ವಾ (61) ಅವರಿಗೆ ಸೇರಿದ್ದು ಎಂದು ಹೇಳಿಕೊಂಡರು. ಅಲ್ಲದೆ, ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮಗುವಿಗೆ ಜನ್ಮ ನೀಡಿದ ಮಗಳ ಚಿಕಿತ್ಸಾ ವೆಚ್ಚಕ್ಕಾಗಿ ತಾನು ಅವರಿಂದ ಹಣ ಸಾಲ ಪಡೆದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಮೂರು ವರ್ಷದ ಹಿಂದೆ ಏರ್‌ಪೋರ್ಟ್‌ನಲ್ಲಿ ಕಳೆದುಕೊಂಡ ಬ್ಯಾಗ್ ಮರಳಿ ಸಿಕ್ಕಿದ್ದೆ ವಿಚಿತ್ರ!

ತನಿಖೆಯ ನಂತರ, ಶುಕ್ರವಾರ ಠಾಣೆಯಲ್ಲಿ ಅವರಿಗೆ ಹಣವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ರಾಜೇಶ್ವರಿ ಮತ್ತು ಗೋಕುಲ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿ ತಮಿಳುನಾಡು ಪೊಲೀಸರು ಗೌರವಿಸಿದ್ದಾರೆ. 

ಇದನ್ನೂ ಓದಿ: ರಿಕ್ಷಾದಲ್ಲಿ ಬಿಟ್ಟೋಗಿದ್ದ 1.6 ಲಕ್ಷದ ನೆಕ್ಲೇಸ್ ಹಿಂದಿರುಗಿಸಿದ ಆಟೋ ಚಾಲಕ

Follow Us:
Download App:
  • android
  • ios