ರಿಕ್ಷಾದಲ್ಲಿ ಬಿಟ್ಟೋಗಿದ್ದ 1.6 ಲಕ್ಷದ ನೆಕ್ಲೇಸ್ ಹಿಂದಿರುಗಿಸಿದ ಆಟೋ ಚಾಲಕ
- ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
- 1.6 ಲಕ್ಷ ಮೌಲ್ಯದ ನೆಕ್ಲೇಸ್ ಬಿಟ್ಟು ಹೋಗಿದ್ದ ಗ್ರಾಹಕರು
- ಗ್ರಾಹಕರಿಗೆ ನೆಕ್ಲೇಸ್ ಹಿಂದಿರುಗಿಸಿದ ಆಟೋ ಡ್ರೈವರ್
ಬೆಹ್ರಾಂಪುರ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 1.6 ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸ್ ಅನ್ನು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಘಟನೆ ಒಡಿಶಾದಲ್ಲಿ (Odisha) ನಡೆದಿದೆ. ಒಡಿಶಾದ ಗಾಂಜಾಂ (Ganjam district) ಜಿಲ್ಲೆಯ 35 ವರ್ಷದ ಆಟೋ ಚಾಲಕರೊಬ್ಬರು (autorickshaw driver) ಈಗ ತಮ್ಮ ಪ್ರಾಮಾಣಿಕತೆಯಿಂದಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಆಟೋದಲ್ಲಿ ಕೆಲ ದಿನಗಳ ಹಿಂದೆ ಮಹಿಳಾ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಸುಮಾರು ಒಂದೂವರೆ ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸ್ ಅನ್ನು ಬಿಟ್ಟು ಹೋಗಿದ್ದರು.
ಆಟೋ ಚಾಲಕ ಪಂಕಜ್ ಬೆಹ್ರಾ(Pankaj Behera) ಅವರು ಶುಕ್ರವಾರ (ಮೇ.20) ತಮ್ಮ ಆಟೋವನ್ನು ಸ್ವಚ್ಛಗೊಳಿಸುತ್ತಿರುವ ವೇಳೆ 30 ಗ್ರಾಂ ತೂಗುವ ಆಭರಣವೂ ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಹಿಂಭಾಗದಲ್ಲಿ ಇರುವುದು ಕಾಣಿಸಿದೆ. ಇದನ್ನು ಅವರು ಸ್ಥಳೀಯ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಕೆಲವು ಅಧಿಕಾರಿಗಳ ಸಮ್ಮುಖದಲ್ಲಿ ಇಲ್ಲಿನ ಹೊಸ ಬಸ್ ನಿಲ್ದಾಣದ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ವರಸುದಾರರಾಗಿದ್ದ ನರ್ಮದಾ ಬೆಹ್ರಾ ( Narmada Behera) ಅವರಿಗೆ ಹಿಂದಿರುಗಿಸಿದ್ದಾರೆ. ಇದಾದ ಬಳಿಕ ಈ ಪ್ರಾಮಾಣಿಕ ಆಟೋ ಚಾಲಕನಿಗೆ ಮಹಿಳೆ ಹಾಗೂ ಅವರ ಕುಟುಂಬದವರು ಗೋಪಾಲಪುರದ (Gopalpur) ಹೊಸ ಬಸ್ ನಿಲ್ದಾಣದಲ್ಲಿ ಸನ್ಮಾನ ಮಾಡಿದ್ದಾರೆ.
ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತ ಗದಗ-ಬೆಟಗೇರಿ ಜನತೆ..!
ನರ್ಮದಾ ಬೆಹ್ರಾ ಅವರು ಈ ಚಿನ್ನದ ನೆಕ್ಲೇಸ್ ಅನ್ನು ತಮ್ಮ ಪರ್ಸ್‌ನಲ್ಲಿ ಇರಿಸಿಕೊಂಡಿದ್ದರು. ಅದು ಅವರ ಗಮನಕ್ಕೆ ಬಾರದೇ ಕೆಳಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮನೆಗೆ ತಲುಪಿದ ಮೇಲೆ ಆಕೆಗೆ ಪರ್ಸ್‌ನಲ್ಲಿದ್ದ ತನ್ನ ಆಭರಣ ಕಳೆದುಹೋಗಿರುವುದರ ಅರಿವಾಗಿದೆ. ಕೂಡಲೇ ಅವರು ಆಟೋ ಚಾಲಕನಿಗೆ ಕರೆ ಮಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಆಟೋ ಪರಿಶೀಲಿಸಿದ ಆಟೋ ಚಾಲಕನಿಗೆ ನೆಕ್ಲೇಸ್ ಕಾಣಿಸಿಲ್ಲ.
ಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ ನಾಯಿ, ಪ್ರಾಮಾಣಿಕತೆಗಿಲ್ಲ ಸರಿಸಾಟಿ!
ಇದಾಗಿ ಕೆಲ ದಿನಗಳ ನಂತರ ಆತ ತನ್ನ ಆಟೋವನ್ನು ಸ್ವಚ್ಛಗೊಳಿಸಲು ಹೊರಟಿದ್ದು, ಈ ವೇಳೆ ನೆಕ್ಲೇಸ್ ಸಿಕ್ಕಿದೆ. ಈ ವೇಳೆ ಆತ ನೆಕ್ಲೇಸ್ ಸಿಕ್ಕಿರುವ ಬಗ್ಗೆ ಮಹಿಳೆಯ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸ್ ಔಟ್‌ಪೋಸ್ಟ್‌ನ ಕಚೇರಿ ಮೇಲುಸ್ತುವಾರಿ ನಾರಾಯಣ್ ಸ್ವೈನ್ (Narayan Swain) ಅವರು ಚಾಲಕನನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಕಳೆದುಕೊಂಡ ಆಭರಣ ಸಿಕ್ಕ ಬಳಿಕ ಮಹಿಳೆಯೂ ನಿರಾಳರಾಗಿದ್ದಾರೆ. ನಾನು ಬೆಲೆಬಾಳುವ ನೆಕ್ಲೇಸ್ ಕಳೆದು ಹೋದ ಬಳಿಕ ನಿದ್ದೆ ಇಲ್ಲದ ಹಲವು ರಾತ್ರಿಗಳನ್ನು ಕಳೆದೆ. ಆಭರಣ ಸಿಕ್ಕಿರುವುದಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. ಆಭರಣ ಹಿಂದಿರುಗಿಸಿದ ಆಟೋ ಚಾಲಕನಿಗೆ ಧನ್ಯವಾದ ಎಂದು ಮಹಿಳೆ ನರ್ಮದಾ ಹೇಳಿದ್ದಾರೆ.
ಇದಕ್ಕೂ ಮೊದಲು ಗದಗದಲ್ಲಿಯೂ ಇದೇ ರೀತಿಯ ಪ್ರಕರಣ ನಡೆದಿತ್ತು. ಗದಗ ಆಟೋ ಚಾಲಕರೊಬ್ಬರು ತಮಗೆ ಸಿಕ್ಕ ಬರೋಬ್ಬರಿ ಎಂಟು ತೊಲೆ ಚಿನ್ನವನ್ನ ವಾರಸುದಾರರಿಗೆ ಮರಳಿಸಿದ್ದರು. ಇವರ ಪ್ರಾಮಾಣಿಕತೆ ನೋಡಿದ ಪೊಲೀಸರು ಸನ್ಮಾನ ಮಾಡಿದ್ದರು. ಈರಣ್ಣ ಯಾವಗಲ್ ಎಂಬುವರೇ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಗದಗ ನಗರದಲ್ಲಿ ಆಟೋ ಓಡಿಸ್ಕೊಂಡು ಈರಣ್ಣ ಜೀವನ ಸಾಗಿಸುತ್ತಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಕರೋರ್ವರು ಮರೆತು ಬಿಟ್ಟು ಹೋಗಿದ್ದ ಲ್ಯಾಪ್‌ಟಾಪ್ ಹಿಂದಿರುಗಿಸಿ KSRTC ಸಿಬ್ಬಂದಿ ಪ್ರಾಮಾಣಿಕತೆ ಮೆರೆದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. 2021 ರ ಜನವರಿ 16 ರಂದು ಸುಬ್ರಮಣ್ಯ ರೈಲ್ವೆ ನಿಲ್ದಾಣದಿಂದ ಧರ್ಮಸ್ಥಳಕ್ಕೆ ಪ್ರಯಾಣ ಮಾಡಿದ್ದ ಪ್ರಯಾಣಿಕರೋರ್ವರು ತಮ್ಮ ಲ್ಯಾಪ್‌ಟಾಪ್ ಮರೆತು ಹೋಗಿದ್ದರು. ನಂತರ 70 ಸಾವಿರ ಬೆಲೆ ಬಾಳುವ ಲ್ಯಾಪ್ ಟಾಪ್ ಇದ್ದ ಬ್ಯಾಗನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಿಂದಿರುಗಿಸಿದ್ದರು.