ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ: ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್
ಛತ್ತೀಸ್‌ಗಢ: ಟ್ರಾಫಿಕ್ ಪೊಲೀಸರೆಂದರೆ ಹಣಕ್ಕಾಗಿ ಬಾಯ್ಬಿಡ್ತಾರೆ. ಸುಮ್ಮ ಸುಮ್ಮನೇ ದಂಡ ವಸೂಲಿ ಮಾಡ್ತಾರೆ ಅಂತ ವಾಹನ ಸವಾರರು ಆಗಾಗ ಆರೋಪ ಮಾಡ್ತಿರ್ತಾರೆ. ಆದರೆ ಛತ್ತೀಸ್‌ಗಡದ ರಾಯ್‌ಪುರದಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಛತ್ತೀಸ್‌ಗಢ: ಟ್ರಾಫಿಕ್ ಪೊಲೀಸರೆಂದರೆ ಹಣಕ್ಕಾಗಿ ಬಾಯ್ಬಿಡ್ತಾರೆ. ಸುಮ್ಮ ಸುಮ್ಮನೇ ದಂಡ ವಸೂಲಿ ಮಾಡ್ತಾರೆ ಅಂತ ವಾಹನ ಸವಾರರು ಆಗಾಗ ಆರೋಪ ಮಾಡ್ತಿರ್ತಾರೆ. ಆದರೆ ಛತ್ತೀಸ್‌ಗಡದ ರಾಯ್‌ಪುರದಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ರಸ್ತೆಯಲ್ಲಿ ಸಿಕ್ಕಾ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಅವರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ರಾಯ್‌ಪುರದಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನೀಲಾಂಬರ್ ಸಿನ್ಹಾ ಅವರೇ ಹೀಗೆ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್. ರಾಯ್‌ಪುರದಲ್ಲಿ ಕರ್ತವ್ಯದಲ್ಲಿ ಇದ್ದ ವೇಳೆ ಇವರಿಗೆ ರಸ್ತೆಯಲ್ಲಿ ಬರೋಬರಿ ವರಸುದಾರರಿಲ್ಲದ ಬ್ಯಾಗೊಂದು ಸಿಕ್ಕಿದ್ದು, ಅದರಲ್ಲಿ ಬರೋಬರಿ 45 ಲಕ್ಷ ರೂಪಾಯಿ ಸಿಕ್ಕಿದೆ. ಅದರಲ್ಲಿ 2000 ಹಾಗೂ 500 ರೂಪಾಯಿಯ ನೋಟುಗಳ ಬಂಡಲ್‌ಗಳಿದ್ದವು. ಇದನ್ನು ಅವರು ಕೂಡಲೇ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ.
ಈ ರೀತಿ ಪ್ರಾಮಾಣಿಕತೆ ಮೆರೆದ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದು, ಇಂತಹ ಪೊಲೀಸರು ಸಮಾಜಕ್ಕೆ ಮಾದರಿ ಎಂದು ಬರೆದಿದ್ದಾರೆ. ಮಾಹಿತಿ ಪ್ರಕಾರ ನೀಲಾಂಬರ್ ಸಿನ್ಹಾ ಅವರು ಶನಿವಾರ ತಮಗೆ ವಹಿಸಿದ ಏರ್‌ಪೋರ್ಟ್ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರೈ ಪಬ್ಲಿಕ್ ಶಾಲೆ ಬಳಿ ಬಿಳಿ ಬಣ್ಣದ ಬ್ಯಾಗೊಂದು ಸಿಕ್ಕಿದೆ. ಈ ಬ್ಯಾಗ್ ಪೂರ್ತಿ ನೋಟುಗಳ ಬಂಡಲ್‌ಗಳಿದ್ದವು. ಈ ಬಗ್ಗೆ ನೀಲಾಂಬರ್ ಅವರು ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿ ಹಣವನ್ನು ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ.
ಲಕ್ಷಾಂತರ ರು. ಮೌಲ್ಯದ ಚೆಕ್ ಮರಳಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ
ಈ ವಿಚಾರ ತಿಳಿದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಇಂದಿನ ದಿನಗಳಲ್ಲಿ ಟ್ರಾಫಿಕ್ ಕಾನ್ಸ್‌ಟೇಬಲ್ ನೀಲಾಂಬರ್ ಸಿನ್ಹಾ ಅವರಂತಹ ಪ್ರಾಮಾಣಿಕ ವ್ಯಕ್ತಿಗಳು ಪ್ರಾಮಾಣಿಕತೆಗೆ ಮತ್ತೊಂದು ಹೆಸರು. ನೀಲಾಂಬರ್ ಅವರಿಗೆ ವಾರಿಸುದಾರರಿಲ್ಲದ ಸ್ಥಿತಿಯಲ್ಲಿ 45 ಲಕ್ಷ ರೂಗಳಿದ್ದ ಬ್ಯಾಗ್ ಸಿಕ್ಕಿತ್ತು. ಅದನ್ನು ಅವರು ರಾಯ್‌ಪುರ ಪೊಲೀಸ್ ಠಾಣೆಗೆ ಮರಳಿಸಿದ್ದಾರೆ. ನಾವೆಲ್ಲರೂ ಅವರ ಪ್ರಮಾಣಿಕತೆಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸಿಎಂ ಬರೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ರಿಕ್ಷಾದಲ್ಲಿ ಬಿಟ್ಟೋಗಿದ್ದ 1.6 ಲಕ್ಷದ ನೆಕ್ಲೇಸ್ ಹಿಂದಿರುಗಿಸಿದ ಆಟೋ ಚಾಲಕ