Asianet Suvarna News Asianet Suvarna News

Tamil Nadu Politics: ರಾಜ್ಯಪಾಲರನ್ನು ವಜಾ ಮಾಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದ ಡಿಎಂಕೆ

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ಜನರ ಸೇವೆ ಮಾಡಲು ರಾಜ್ಯಪಾಲರು ತಡೆ ಹಿಡಿಯುತ್ತಿದ್ದಾರೆ. ಅಲ್ಲದೆ, ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದ್ದು, ರವಿ ಅವರನ್ನು ವಜಾ ಮಾಡಬೇಕೆಂದು ಮನವಿ ಮಾಡಿದೆ. 

sack governor rn ravi immediately unfit to hold office tamil nadus ruling dmk to president droupadi murmu ash
Author
First Published Nov 9, 2022, 1:09 PM IST

ಕರ್ನಾಟಕ ಹೊರತುಪಡಿಸಿ ಉಳಿದ ಬಹುತೇಕ ದಕ್ಷಿಣ ಭಾರತದ ರಾಜ್ಯಗಳಲ್ಲಿ (South Indian States) ರಾಜ್ಯಪಾಲರ (Governor) ವಿರುದ್ಧ ರಾಜ್ಯ ಸರ್ಕಾರಗಳು (State Government) ಅಥವಾ ಆಡಳಿತಾರೂಢ ಪಕ್ಷಗಳು (Rulig Party) ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇವೆ. ಈಗ ಮತ್ತೆ ತಮಿಳುನಾಡು (Tamil Nadu) , ಕೇರಳ (Kerala) ರಾಜ್ಯಪಾಲರ ವಿರುದ್ಧ ಆಕ್ರೋಶದ ಕಿಡಿ ಎದ್ದಿದೆ. ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ (R.N. Ravi) ಅವರನ್ನು ಶಾಂತಿಗೆ ಬೆದರಿಕೆ ಎಂದು ತಮಿಳುನಾಡು ಆಡಳಿತಾರೂಢ ಪಕ್ಷ ಡಿಎಂಕೆ ಕಿಡಿ ಕಾರಿದೆ. ಅಲ್ಲದೆ, ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಈ ಸಂಬಂಧ ಮನವಿ ಮಾಡಿರುವ ಡಿಎಂಕೆ ರಾಜ್ಯಪಾಲರನ್ನು ವಜಾ ಮಾಡಬೇಕೆಂದು ಕೇಳಿಕೊಂಡಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ಜನರ ಸೇವೆ ಮಾಡಲು ತಡೆ ಹಿಡಿಯುತ್ತಿದ್ದಾರೆ. ಅಲ್ಲದೆ, ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ  ಎಂದು ಡಿಎಂಕೆ ಆರೋಪಿಸಿದ್ದು, ರವಿ ಅವರನ್ನು ವಜಾ ಮಾಡಬೇಕೆಂದು ಮನವಿ ಮಾಡಿದೆ. 

ರಾಜ್ಯಪಾಲ ರವಿ ಅವರು ಸಂವಿಧಾನ ಹಾಗೂ ಕಾನೂನನ್ನು ರಕ್ಷಿಸುವ ಹಾಗೂ ಸಂರಕ್ಷಣೆ ಮಾಡುವ ಪ್ರಮಾಣ ಮಾಡಿದ್ದನ್ನು ಉಲ್ಲಂಘಿಸಿದ್ದಾರೆ ಎಂದು ಸಹ ರಾಷ್ಟ್ರಪರಿ ದ್ರೌಪದಿ ಮುರ್ಮು ಅವರಿಗೆ ಡಿಎಂಕೆ ಮೆಮೋರಾಂಡಮ್‌ ಸಲ್ಲಿಸಿದೆ.  ಹಾಗೂ, ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಬಿಲ್‌ಗಳಿಗೆ ಸಹಿ ಹಾಕುವುದನ್ನು ಅನಗತ್ಯವಾಗಿ ವಿಳಂಬಗೊಳಿಸುತ್ತಿದ್ದಾರೆ ಎಂದೂ ಡಿಎಂಕೆ ಆರೋಪಿಸಿದೆ. 

ಇದನ್ನು ಓದಿ: ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್‌ಗೆ 10 ಕೋಟಿ ನೀಡಿದ್ದೆ: ಸುಖೇಶ್‌ ಚಂದ್ರಶೇಖರ್‌

ಜತೆಗೆ, ಅವರ ಹೇಳಿಕೆಗಳನ್ನು ದೇಶದ್ರೋಹ ಎಂದೂ ಕೆಲವರು ಪರಿಗಣಿಸಬಹುದು. ಏಕೆಂದರೆ, ಅವರ ಹೇಳಿಕೆಗಳು ಸರ್ಕಾರದ ಬಗ್ಗೆ ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸುತ್ತವೆ ಎಂದೂ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ನೇತೃತ್ವದ ಪಕ್ಷ ಆರೋಪಿಸಿದೆ. ಈ ಹಿನ್ನೆಲೆ ಅವರು ಸಾಂವಿಧಾನಿಕ ಹುದ್ದೆಗೆ ಅನರ್ಹರು. ಅವರನ್ನು ವಜಾ ಮಾಡುವುದೇ ಸೂಕ್ತ ಎಂದೂ ಪತ್ರದಲ್ಲಿ ಬರೆಯಲಾಗಿದೆ.

ಆದರೆ, ತಮಿಳುನಾಡು ರಾಜ್ಯಪಾಲ ರವಿ ಅವರು ಈವರೆಗೆ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಹಿಂದೆ ಆರ್‌.ಎನ್‌. ರವಿ ಅವರನ್ನು ವಜಾ ಮಾಡುವ ಪ್ರಸ್ತಾವನೆಗೆ ಅಂಗೀಕಾರ ಮಾಡಲು ಸಂಸದರಿಗೂ ಸಹ ಡಿಎಂಕೆ ಪತ್ರ ಬರೆದಿತ್ತು. 

ಇದನ್ನೂ ಓದಿ: ರಾಜಭವನದೊಳಗೆ ರಕ್ಷಣೆ ಇಲ್ಲ: ಆವರಣದಲ್ಲಿದ್ದ ಶ್ರೀಗಂಧದ ಮರ ಹೊತ್ತೊಯ್ದ ಕಳ್ಳರು

ಏನಿದು ವಿವಾದ..?
ತಮಿಳುನಾಡು ವಿಧಾನಸಭೆ ಹಲವು ಪ್ರಮುಖ ಬಿಲ್‌ಗಳನ್ನು ಅಂಗೀಕರಿಸಿದೆ ಹಾಗೂ ರಾಜ್ಯಪಾಲರ ಅಂಕಿತಕ್ಕೆ ಕಳಿಸಲಾಗಿದೆ. ಆದರೆ, ರಾಜ್ಯ ವಿಧಾನಸಭೆ ಒಪ್ಪಿಗೆ ನೀಡಿರುವ ಬಿಲ್‌ಗಳಿಗೆ ಅಂಕಿತ ಹಾಕಲು ರಾಜ್ಯಪಾಲರು ಅನಗತ್ಯ ವಿಳಂಬ ಸೃಷ್ಟಿಸುತ್ತಿದ್ದಾರೆ ಎಂದು ಡಿಎಂಕೆ ಪತ್ರದಲ್ಲಿ ಬರೆದಿದೆ. 
ಒಟ್ಟಾರೆ ತಮಿಳುನಾಡಿನಲ್ಲಿ 20 ಬಿಲ್‌ಗಳಿಗೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ. ಇದು ರಾಜ್ಯದ ಆಡಳಿತದಲ್ಲಿ ಮತ್ತು ಶಾಸಕಾಂಗದ ಹಸ್ತಕ್ಷೇಪವಾಗಿದೆ. ಇದು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಜನರಿಗೆ ಸೇವೆ ಮಾಡುವುದನ್ನು ತಡೆಯುತ್ತದೆ ಮತ್ತು ಅಡ್ಡಿಪಡಿಸುತ್ತದೆ. ಈ ಹಿನ್ನೆಲೆ ಇದು ಅಸಂವಿಧಾನಿಕವಾಗಿದೆ ಎಂದೂ ಡಿಎಂಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ.   

ಕಾನೂನಿನ ಪ್ರಕಾರ ರಾಜ್ಯಪಾಲರನ್ನು ರಾಷ್ಟ್ರಪತಿ ನೇಮಕ ಮಾಡಬಹುದು ಅಥವಾ ವಜಾ ಮಾಡಬಹುದು. ರಾಜ್ಯ ಕ್ಯಾಬಿನೆಟ್‌ ರಾಜ್ಯಪಾಲರಿಗೆ ಬಿಲ್‌ ಅನ್ನು ಕಳಿಸಿದರೆ, ಅವರು ಅದನ್ನು ಒಮ್ಮೆ ವಾಪಸ್‌ ಕಳಿಸಬಹುದು. ಆದರೆ, ಎರಡನೇ ಬಾರಿ ಮತ್ತೆ ರಾಜ್ಯಪಾಲರಿಗೆ ಕಳಿಸಿದರೆ, ಅವರು ಅದನ್ನು ಮತ್ತೆ ವಾಪಸ್‌ ಕಳಿಸುವ ಹಾಗಿಲ್ಲ.

ಇದನ್ನೂ ಓದಿ: ಕೇರಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಸಚಿವರ ಮೇಲಿನ ಗೌರವ ನಷ್ಟ, ಸಂಪುಟದಿಂದ ಕಿತ್ತೆಸೆಯುವಂತೆ ರಾಜ್ಯಪಾಲ ಪತ್ರ!

ಕೇರಳದಲ್ಲೂ ರಾಜ್ಯಪಾಲರ ವಿರುದ್ಧ ಆಕ್ರೋಶ
ಈ ಮಧ್ಯೆ, ಕೇರಳದಲ್ಲೂ ಎಲ್‌ಡಿಎಫ್‌ (LDF) ಸರ್ಕಾರ ಹಾಗೂ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Arif Mohammed Khan) ನಡುವಿನ ತಿಕ್ಕಾಟ ಮುಂದುವರೆದಿದೆ. ಕೇರಳ ರಾಜ್ಯಪಾಲರನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳ ಹಣೆಪಟ್ಟಿಯಿಂದ ತೆಗೆಯಬೇಕೆಂದು ಅಲ್ಲಿನ ರಾಜ್ಯ ಕ್ಯಾಬಿನೆಟ್‌ ಸುಗ್ರೀವಾಜ್ಞೆ ಹೊರಡಿಸಿದೆ. 
 

Follow Us:
Download App:
  • android
  • ios