Asianet Suvarna News Asianet Suvarna News

ಕೇರಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಸಚಿವರ ಮೇಲಿನ ಗೌರವ ನಷ್ಟ, ಸಂಪುಟದಿಂದ ಕಿತ್ತೆಸೆಯುವಂತೆ ರಾಜ್ಯಪಾಲ ಪತ್ರ!

ಕೇರಳದಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಗುದ್ದಾಟ ತೀವ್ರ ಸ್ವರೂಪಕ್ಕೆ ತಲುಪಿದೆ. ಇದೀಗ ರಾಜ್ಯಪಾಲರ ಪತ್ರ ಕೇರಳ ರಾಜಕೀಯದಲ್ಲಿ ಭಾರಿ ಸಂಚಲನದೊಂದಿದೆ ಅತೀ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿದೆ.  ಸಚಿವರ ಹೇಳಿಕೆಯಿಂದ ಕೆರಳಿರುವ ರಾಜ್ಯಪಾಲರು, ಸಂಪುಟದಿಂದ ಅಮಾನತುಗೊಳಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಉಲ್ಲೇಖಿಸಿರುವ ಕೆಲ ಅಂಶಗಳು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

Kerala Political Crisis Governor expresses displeasure in Finance Minister wants him to be removed from Cabinet  ckm
Author
First Published Oct 26, 2022, 1:47 PM IST

ತಿರುವನಂತಪುರಂ(ಅ.26):  ಕೇರಳದಲ್ಲಿ ಇತ್ತೀಚೆಗೆ ರಾಜ್ಯಪಾಲರ ನಡೆ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ರಾಜ್ಯಪಾಲರು ಹಾಗೂ ಸರ್ಕಾರದ ಜಗಳ ತಾರಕಕ್ಕೇರಿದೆ. ಕೇರಳ ವಿಶ್ವವಿದ್ಯಾಲಯಗಳ 9 ಉಪಕುಲಪತಿಗಳು ತಕ್ಷಣವೇ ರಾಜೀನಾಮೆ ನೀಡಬೇಕು ಅನ್ನೋ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಇದರ ಬೆನ್ನಲ್ಲೇ ಕೇರಳ ಸರ್ಕಾರದ ಇಬ್ಬರು ಸಚಿವರು ನೀಡಿರುವ ಹೇಳಿಕೆಗೆ ರಾಜ್ಯಪಾಲರು ಕೆರಳಿ ಕೆಂಡವಾಗಿದ್ದಾರೆ. ಇವರ ಹೇಳಿಕೆಯಿಂದ ರಾಜ್ಯಪಾಲರ ಹುದ್ದೆ, ರಾಜಭವನಕ್ಕೆ ಧಕ್ಕೆಯಾಗಿದೆ. ಇಷ್ಟೇ ಅಲ್ಲ ಈ ಸಚಿವರ ಮೇಲಿನ ಗೌರವ ನಷ್ಟವಾಗಿದೆ. ಹೀಗಾಗಿ ಈ ಸಚಿವರನ್ನು ಸಂಪುಟದಿಂದ ಅಮಾನತು ಮಾಡಬೇಕು ಎಂದು ಆರಿಫ್ ಮೊಹಮ್ಮದ್ ಖಾನ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರ ಬಹಿರಂಗವಾಗಿದ್ದು, ಕೇರಳದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಪಿಣರಾಯಿ ವಿಜಯನ್ ಸರ್ಕಾರದ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಹೇಳಿಕೆ ಈ ಎಲ್ಲಾ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಿಂದ  ಬಂದವರಿಗೆ ಕೇರಳದ ಶಿಕ್ಷಣ ವ್ಯವಸ್ಥೆ ಅರ್ಥವಾಗುವುದಿಲ್ಲ ಎಂದು ನೇರವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಕೇರಳ ಉಪಕುಲಪತಿಗಳನ್ನು ತಕ್ಷಣವೇ ರಾಜೀನಾಮೆ ನೀಡಲು ಆದೇಶದ ಕುರಿತು ಬಾಲಗೋಪಾಲ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವೇಳೆ ಕೇರಳ ರಾಜ್ಯಪಾಲರಿಗೆ ಕಾನೂನು ಚೌಕಟ್ಟು ತಿಳಿದಿಲ್ಲ. ಇಷ್ಟೇ ಅಲ್ಲ ಉತ್ತರ ಪ್ರದೇಶದಲ್ಲಿ ಹಲವಾರು ಭದ್ರತಾ ಸಿಬ್ಬಂದಿಗಳ ನಡುವೆ ಇರುವ ವ್ಯಕ್ತಿಗಳಿಗೆ ಕೇರಳದ ಶಿಕ್ಷಣದ ಕುರಿತು ಎಳ್ಳಷ್ಟು ತಿಳಿದಿಲ್ಲ ಎಂದಿದ್ದಾರೆ. ಈ ಮಾತು ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೆರಳಿಸಿದೆ.

ಸೆಕ್ಸ್‌ಗಾಗಿ ಮೂವರು ಸಚಿವರ ಒತ್ತಾಯ, ಸ್ಪಪ್ನಾ ಸುರೇಶ್ ಬಿಚ್ಚಿಟ್ಟ ರಹಸ್ಯಕ್ಕೆ ಪಿಣರಾಯಿ ಸರ್ಕಾರ ಗಡಗಡ!

ಈ ಹೇಳಿಕೆಗಳನ್ನು ಉಲ್ಲೇಖಿಸಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಕೆಎನ್ ಬಾಲಗೋಪಾಲ್ ಜೊತೆಗೆ ಮತ್ತೋರ್ವ ಸಚಿವ ಪಿ ರಾಜೀವ್ ಕೂಡ ರಾಜ್ಯಪಾಲರ ಹುದ್ದೆಯನ್ನು ನಿಂದಿಸಿದ್ದಾರೆ. ಇವರಿಬ್ಬರನ್ನೂ ಅಮಾನತು ಮಾಡುವಂತೆ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ. ಇಬ್ಬರು ಸಚಿವರ ಮೇಲಿನ ಗೌರವ ನಷ್ಟವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಹೈಕೋರ್ಟ್ ನ್ಯಾಯಮೂರ್ತಿಗಳ ಕುರಿತು ಅಥವಾ ವಿರುದ್ಧ ಹೇಳಿಕೆ ನೀಡುವಾಗಿ ಎಚ್ಚರಿಕೆ ವಹಿಸಬೇಕು. ಅಸ್ಸಾಂ ಅಥವಾ ಮಹಾರಾಷ್ಟ್ರದ ನ್ಯಾಯಮೂರ್ತಿಗೆ ಕೇರಳದ ಶಿಕ್ಷಣ ವ್ಯವಸ್ಥೆ ಅರ್ಥವಾಗುವುದಿಲ್ಲ ಅನ್ನೋ ಹೇಳಿಕೆ ನೀಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಪಿಣರಾಯಿ ವಿಜಯನ್ ಸರ್ಕಾರದ ಸಚಿವರು ರಾಜ್ಯಪಾಲ, ರಾಜಭವನಕ್ಕೆ ಅಗೌರವ ತಂದಿದ್ದಾರೆ. ಕಾಶ್ಮೀರ ಪಾಕಿಸ್ತಾನ ಭಾಗ, ಭಾರತ ಅತಿಕ್ರಮಿಸಿದೆ ಎಂದ ಸಚಿವರ ವಿರುದ್ಧ ನಾಯಕರು ಒಂದು ಮಾತು ಆಡಿಲ್ಲ. ಇಂಥ ಸಚಿವರಿಂದ ಪಾಠ ಕಲಿಬೇಕಿಲ್ಲ ಎಂದು ಆರಿಫ್ ಮೊಹಮ್ಮದ್ ಕಾನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ಗೆ ತಮ್ಮ ಅಧಿಕಾರ, ಕಾನೂನು ಚೌಕಟ್ಟಿನ ಅರಿವಿಲ್ಲ ಎಂದು ಸಿಪಿಐಎಂ ಹೇಳಿದೆ. ಒರ್ವ ಸಚಿವನ ಮೇಲಿನ ವಿಶ್ವಾಸ ಕಳೆದುಕೊಳ್ಳುವುದು, ಸಚಿವರನ್ನು ವಜಾಗೊಳಿಸುವ ಅಧಿಕಾರ ಇರುವುದು ಮುಖ್ಯಮಂತ್ರಿಗೆ ಮಾತ್ರ. ಮುಖ್ಯಮಂತ್ರಿ ಯಾವುದೇ ಮಂತ್ರಿಯನ್ನು ಅಮಾನತುಗೊಳಿಸಲು ಸಾಧ್ಯವಿದೆ. ಬಳಿಕ ಈ ಆದೇಶವನ್ನು ರಾಜ್ಯಪಾಲರಿಗೆ ಕಳುಹಿಸುತ್ತಾರೆ. ರಾಜ್ಯಪಾಲರು ಅಂಕಿತ ಬಿದ್ದ ಬಳಿಕ ಸಚಿವರು ಅಮಾನತುಗೊಳ್ಳಲಿದ್ದಾರೆ. ಅಥವಾ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ರಾಜ್ಯಪಾಲರು ಎಡೆಮಾಡಿಕೊಟ್ಟಿದ್ದಾರೆ. ಇಲ್ಲಿ ರಾಜ್ಯಾಪಾಲರು ಮುಖ್ಯಂತ್ರಿಗೆ ಪತ್ರ ಬರೆದಿದ್ದಾರೆ. ಈ ರೀತಿಗೆ ನಿಯಮದಲ್ಲಿ ಅವಕಾಶವಿಲ್ಲ ಎಂದು ಸಿಪಿಐಎಂ ಹೇಳಿದೆ.

ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್‌ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಪ್ರಶ್ನೆ!

ರಾಜ್ಯಪಾಲರ ಪತ್ರಕ್ಕೆ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಹಣಕಾಸು ಸಚಿವರ ಉತ್ತರ ಪ್ರದೇಶ ಹೇಳಿಕೆ ರಾಜ್ಯಪಾಲರ ಕುರಿತಲ್ಲ. ಇಷ್ಟೇ ಅಲ್ಲ ಈ ಹೇಳಿಕೆಯಿಂದ ರಾಜ್ಯಪಾಲರಿಗಾಗಲೇ, ರಾಜಭವನಕ್ಕಾಗಲಿ ಧಕ್ಕೆಯಾಗಿಲ್ಲ. ಹೀಗಾಗಿ ಮಂತ್ರಿಯ ಮೇಲಿನ ಗೌರವ ನಷ್ಟವಾಗಿದೆ. ಅವರನ್ನು ವಜಾಗೊಳಿಸುವಂತೆ ಕೋರಿರುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪಿಣರಾಯಿ ವಿಜಯನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 

Follow Us:
Download App:
  • android
  • ios