ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್‌ಗೆ 10 ಕೋಟಿ ನೀಡಿದ್ದೆ: ಸುಖೇಶ್‌ ಚಂದ್ರಶೇಖರ್‌

ಜೈಲಿನಲ್ಲಿ ಸುರಕ್ಷಿತವಾಗಿರಲು ‘ಪ್ರೊಟೆಕ್ಷನ್‌ ಮನಿ’ಯ ಕಾರಣಕ್ಕೆ ಎಎಪಿಯ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ಗೆ (Satyendar Jain) 10 ಕೋಟಿ ರೂ ನೀಡಿದ್ದೆ ಎಂದೂ ವಂಚಕ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾನೆ. 

severely harassed and threatened aap govt should be exposed sukesh chandrasekhar in letter to delhi lg ash

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ (Jacqueline Fernandez) ಎಕ್ಸ್‌ ಬಾಯ್‌ಫ್ರೆಂಡ್‌ ಹಾಗೂ ವಂಚಕ ಸುಖೇಶ್‌ ಚಂದ್ರಶೇಖರ್‌ (Sukesh Chandrasekhar) ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾಗೆ (Delhi Lieutenant Governor V.K. Saxena) ಸ್ಫೋಟಕ ಪತ್ರ ಬರೆದಿದ್ದಾರೆ. ದೆಹಲಿಯ ತಿಹಾರ್‌ ಜೈಲಿನಲ್ಲಿ (Tihar Jail) ತನಗೆ ತೀವ್ರ ಹಿಂಸೆ ಹಾಗೂ ಬೆದರಿಕೆ ನೀಡಲಾಗುತ್ತಿತ್ತು ಎಂದೂ ಆರೋಪಿಸಿದ್ದಾರೆ. ಅಲ್ಲದೆ, ಎಎಪಿ ಸರ್ಕಾರದ (AAP Government) ಬಣ್ಣ ಬಯಲು ಮಾಡಬೇಕಾಗಿದೆ. ಏಕೆಂದರೆ, ಜೈಲಿನೊಳಗೂ ಅವರು ಉನ್ನತ ಮಟ್ಟದ ಭ್ರಷ್ಟಾಚಾರ ಮಾಡುತ್ತಿದ್ದರು ಎಂದು ಜೈಲಿನಲ್ಲಿರುವ ವಂಚಕ ಸುಖೇಶ್‌ ಚಂದ್ರಶೇಖರ್‌ ಪತ್ರದಲ್ಲಿ ಬರೆದಿದ್ದಾನೆ. 

ಹೈ ಪ್ರೊಫೈಲ್‌ ಜನರಿಂದ ಹಾಗೂ ಸೆಲೆಬ್ರಿಟಿಗಳಿಂದ ಹಣವನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಸುಖೇಶ್‌ ಚಂದ್ರಶೇಖರ್‌ ದೆಹಲಿಯ ಮಾಂಡೋಲಿ ಜೈಲಿನಲ್ಲಿದ್ದಾನೆ. ಈ ಹಿಂದೆ ಅವನನ್ನು ತಿಹಾರ್‌ ಜೈಲಿನಲ್ಲಿಡಲಾಗಿತ್ತಾದರೂ, ಪದೇ ಪದೇ ಮನವಿ ಮಾಡಿದ ಬಳಿಕ ಶಿಫ್ಟ್‌ ಮಾಡಲಾಗಿದೆ. ದೆಹಲಿಯ ತಿಹಾರ್‌ ಜೈಲಿನಲ್ಲಿ ತನಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದೂ ಸುಖೇಶ್‌ ಹೇಳಿಕೊಂಡಿದ್ದ.  

ಇದನ್ನು ಓದಿ: ಜೈಲಿನಲ್ಲಿ Delhi ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್‌: ಲಕ್ಷುರಿ ಜೀವನ ನಡೆಸುತ್ತಿರುವ ಬಗ್ಗೆ ED ಆರೋಪ
 
ಇನ್ನು, ತಾನು ಜೈಲಿನಲ್ಲಿ ಸುರಕ್ಷಿತವಾಗಿರಲು ‘ಪ್ರೊಟೆಕ್ಷನ್‌ ಮನಿ’ಯ ಕಾರಣಕ್ಕೆ ಎಎಪಿಯ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ಗೆ (Satyendar Jain) 10 ಕೋಟಿ ರೂ ನೀಡಿದ್ದೆ ಎಂದೂ ವಂಚಕ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಆರೋಪಿಸಿದ್ದಾನೆ. ಅಲ್ಲದೆ, ಸತ್ಯೇಂದ್ರ ಜೈನ್‌ ತನಗೆ 2015 ರಿಂದಲೂ ಪರಿಚಯ. ಅಲ್ಲದೆ, ದಕ್ಷಿಣ ಭಾರತದಲ್ಲಿ ಎಎಪಿ ಪಕ್ಷ ತನಗೆ ಪ್ರಮುಖ ಸ್ಥಾನಮಾನ ನೀಡುವ ಭರವಸೆ ನೀಡಿದ್ದ ಹಿನ್ನೆಲೆ ನಾನು ಪಕ್ಷಕ್ಕೆ 50 ಕೋಟಿ ರೂ. ನೀಡಿದ್ದೆ ಎಂದೂ ಪತ್ರದಲ್ಲಿ ಹೇಳಿಕೊಂಡಿದ್ದಾನೆ. 
 
ಕಳೆದ ತಿಂಗಳು ಸಿಬಿಐ ತನಿಖಾ ತಂಡಕ್ಕೆ ನಾನು ಸತ್ಯೇಂದ್ರ ಜೈನ್‌, ಎಎಪಿ ಹಾಗೂ ಡಿಜಿ - ಪ್ರಿಸನ್ಸ್‌ಗೆ ನೀಡಿರುವ ಹಣದ ಬಗ್ಗೆ ಒಪ್ಪಿಕೊಂಡಿದ್ದೆ ಹಾಗೂ ದೆಹಲಿ ಹೈಕೋರ್ಟ್‌ನಲ್ಲಿ ಈ ಬಗ್ಗೆ ಸಿಬಿಐ ತನಿಕೆ ನಡೆಯಲು ಅರ್ಜಿಯನ್ನು ಹಾಕಿಕೊಂಡಿದ್ದೆ ಎಂದೂ ಸುಖೇಶ್‌ ಚಂದ್ರಶೇಖರ್‌ ಹೇಳಿಕೊಂಡಿದ್ದಾನೆ. ಅಲ್ಲದೆ, ಈ ದೂರನ್ನು ಹಿಂಪಡೆಯುವಂತೆ ಸತ್ಯೇಂದ್ರ ಜೈನ್‌ ತನಗೆ ಬೆದರಿಕೆ ಹಾಕುತ್ತಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರು ಎಂದೂ ಆತ ಆರೋಪಿಸಿದ್ದಾನೆ.  
 

ಇದನ್ನೂ ಓದಿ: 'ಕನಸಿನ ರಾಜ' ಅಂದ್ಕೊಂಡು ಆರೋಪಿ ಸುಕೇಶ್ ಜೊತೆ ಮದುವೆಗೆ ಸಜ್ಜಾಗಿದ್ದ ಜಾಕ್ವೆಲಿನ್; ಶಾಕಿಂಗ್ ವಿಚಾರ ಬಹಿರಂಗ


ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಸುಖೇಶ್‌ ಚಂದ್ರಶೇಖರ್‌ ಪತ್ರ ಬರೆದಿದ್ದು, ಈ ಪತ್ರವನ್ನು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಎಎಪಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನೆ ಮಾಡಿದ್ದು, ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆ ಎಂದೂ ತಿಳಿದುಬಂದಿದೆ. ತಿಹಾರ್‌ ಜೈಲು ವ್ಯಾಪ್ತಿಗೆ ಈ ವಿಚಾರ ಬರುವುದರಿಂದ ದೆಹಲಿ ಸರ್ಕಾರದ ಗೃಹ ಇಲಾಖೆ ಈ ಕೇಸ್‌ನಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಿದೆ ಎಂದೂ ಹೇಳಲಾಗಿದೆ. 
 
ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಮೇ ತಿಂಗಳಲ್ಲಿ ಇಡಿ ಬಂಧಿಸಿತ್ತು. 
 

ಇದನ್ನೂ ಓದಿ: ಸುಕೇಶ್‌ ಚಂದ್ರಶೇಖರ್‌ಗೆ ಮಾಡೆಲ್‌ ಮತ್ತು ನಟಿಯರನ್ನು ಸಂಪರ್ಕಿಸುತ್ತಿದ್ದ ಪಿಂಕಿ ಇರಾನಿ


ಸುಖೇಶ್‌ ಥಗ್‌, ಎಎಪಿ ಮಹಾ ಥಗ್‌: ಬಿಜೆಪಿ ನಾಯಕ ಸಂಬಿತ್‌ ಪಾತ್ರ 
ಸುಖೇಶ್‌ ಚಂದ್ರಶೇಖರ್‌ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿ ನಾಯಕ ಸಂಬಿತ್‌ ಪಾತ್ರ ಎಎಪಿ ಹಾಗೂ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ತಿಹಾರ್‌ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ ಸುಖೇಶ್‌ ಚಂದ್ರಶೇಖರ್‌ಗೆ ಒಳ್ಳೆಯ ಸ್ನೇಹಿತ ಎಂದು ಆರೋಪಿಸಿದ್ದಾರೆ.  

2017ರಲ್ಲಿ ಕಾರಾಗೃಹ ಸಚಿವರಾಗಿದ್ದ ಸತ್ಯೇಂದ್ರ ಜೈನ್‌, ಸುಖೇಶ್‌ ಚಂದ್ರಶೇಖರ್‌ರನ್ನು ತಿಹಾರ್‌ ಜೈಲಿನಲ್ಲಿ ನಿಯಮಿತವಾಗಿ ಭೇಟಿ ಮಾಡುತ್ತಿದ್ದರು ಎಂದೂ ಸಂಬಿತ್‌ ಪಾತ್ರ ಹೇಳಿಕೊಂಡಿದ್ದಾರೆ. ಅಲ್ಲದೆ, ಜೈಲಿನೊಳಗೆ ಮೂಲಸೌಕರ್ಯಗಳನ್ನು ಪಡೆಯಲು ಪ್ರತಿ ತಿಂಗಳು 2 ಕೋಟಿ ರೂ, ನೀಡಬೇಕೆಂದು ವಂಚಕನಿಗೆ ಸತ್ಯೇಂದ್ರ ಜೈನ್‌ ಕಾರ್ಯದರ್ಶಿ ಹೇಳಿದ್ದರು ಎಂದೂ ಬಿಜೆಪಿ ನಾಯಕ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ. 

ಇದನ್ನೂ ಓದಿ: Rs 225 Crore Fraud Case: ಸುಕೇಶ್ ಚಂದ್ರಶೇಖರ್ ಪ್ರಕರಣ: ನೋರಾ ಫತೇಹಿಗೆ ಮತ್ತೆ ಸಮನ್ಸ್

ಹಾಗೂ, ಸುಖೇಶ್‌ ಚಂದ್ರಶೇಖರ್‌ ಕ್ರಿಮಿನಲ್‌ ಆಗಿದ್ದರೆ, ಎಎಪಿ ಮಹಾ ಅಥವಾ ದೊಡ್ಡ ಕ್ರಿಮಿನಲ್‌ ಎಂದೂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ವಿರುದ್ಧ ದೆಹಲಿಯಲ್ಲಿ ಬಿಜೆಪಿ ನಾಯಕ ಸಂಬಿತ್‌ ಪಾತ್ರ ಹೇಳಿಕೊಂಡಿದ್ದಾನೆ.  

Latest Videos
Follow Us:
Download App:
  • android
  • ios