Asianet Suvarna News Asianet Suvarna News

ರಾಜಭವನದೊಳಗೆ ರಕ್ಷಣೆ ಇಲ್ಲ: ಆವರಣದಲ್ಲಿದ್ದ ಶ್ರೀಗಂಧದ ಮರ ಹೊತ್ತೊಯ್ದ ಕಳ್ಳರು

ಗಂಧಕ್ಕೆ ದೇಶ ವಿದೇಶಗಳಲ್ಲಿ ಭಾರಿ ಮೌಲ್ಯವಿದ್ದು, ಶ್ರೀಗಂಧ ಮರ ದೊಡ್ಡದಾಗಿ ಬೆಳೆಯುವ ಮೊದಲೇ ಅದನ್ನು ಕಡಿದು ಕಳ್ಳಸಾಗಣೆ ಮಾಡಲಾಗುತ್ತಿದೆ. ಈಗ ಆಘಾತಕಾರಿ ವಿಚಾರವೇನೆಂದರೆ ರಾಜಭವನದ ಆವರಣದೊಳಗೆ ಇದ್ದ ಶ್ರೀಗಂಧದ ಮರವನ್ನೇ ಕಳ್ಳರು ಹೊತ್ತೊಯ್ದಿದ್ದಾರೆ.

Odisha sandalwood tree stolen from the premises of Raj Bhawan, the Governor House in Bhubaneswar akb
Author
First Published Nov 3, 2022, 10:21 PM IST

ಭುವನೇಶ್ವರ: ಶ್ರೀಗಂಧಕ್ಕೆ ದೇಶ ವಿದೇಶಗಳಲ್ಲಿ ಭಾರಿ ಮೌಲ್ಯವಿದ್ದು, ಶ್ರೀಗಂಧ ಮರ ದೊಡ್ಡದಾಗಿ ಬೆಳೆಯುವ ಮೊದಲೇ ಅದನ್ನು ಕಡಿದು ಕಳ್ಳಸಾಗಣೆ ಮಾಡಲಾಗುತ್ತಿದೆ. ಈಗ ಆಘಾತಕಾರಿ ವಿಚಾರವೇನೆಂದರೆ ರಾಜಭವನದ ಆವರಣದೊಳಗೆ ಇದ್ದ ಶ್ರೀಗಂಧದ ಮರವನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಒಡಿಶಾದ ರಾಜಭವನದ ಆವರಣದಲ್ಲಿ ಈ ಘಟನೆ ನಡೆದಿದೆ.  ಒಡಿಶಾದ ರಾಜ್ಯಪಾಲರು (Governor) ತಂಗುವ ರಾಜಭವನದ ಆವರಣದಲ್ಲಿ ಹೀಗಾಗಿದೆ. ಅತ್ಯಂತ ಹೆಚ್ಚು ಭದ್ರತೆ ಇರುವ ಈ ಪ್ರದೇಶದಲ್ಲಿಯೇ ಪರಿಸ್ಥಿತಿ ಹೀಗಾದರೆ ಜನ ಸಾಮಾನ್ಯರು ಶ್ರೀಗಂಧ ಬೆಳೆದರೆ ಕತೆ ಏನಾಗಬಹುದು ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೇ ಇದು ರಾಜ್ಯಪಾಲರು ಹಾಗೂ ರಾಜಭವನದ ಸಿಬ್ಬಂದಿಯ ಭದ್ರತೆಯ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ. 


ಭುವನೇಶ್ವರದ (Bhubaneswar) ಅತ್ಯಂತ ಭದ್ರತೆಯ ರಾಜಭವನ (Raj Bhawan) ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮಂಗಳವಾರ ಮರ ಕಡಿಯಲಾಗಿದ್ದು, ರಾಜಭವನದ ವತಿಯಿಂದ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು (CCTV footages) ಪರಿಶೀಲಿಸುತ್ತಿದ್ದು, ಇದುವರೆಗೆ ಕಳ್ಳರ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

2 ಲಕ್ಷದ ಶ್ರೀಗಂಧ ಮರಕ್ಕೆ ಹೈವೆ ಅಧಿಕಾರಿಗಳು ಕೊಡೋದು 1 ಸಾವಿರ: ಸಂಕಷ್ಟದಲ್ಲಿ ಅನ್ನದಾತ

ಕೆಲವರ ಬಗ್ಗೆ ಅನುಮಾನವಿದ್ದು,  ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜನ ಸಾಮಾನ್ಯರು ಕೂಡ ಶ್ರೀಗಂಧ ಬೆಳೆಯಬಹುದಾಗಿದೆ. ಆದರೆ ಇವುಗಳ ಕೊಯ್ಲು ಮತ್ತು ಸಾಗಣೆಯ ಸಮಯದಲ್ಲಿ ಅರಣ್ಯ ಇಲಾಖೆಯಿಂದ ಅನುಮತಿಯ ಅಗತ್ಯವಿದೆ, ಸಾಮಾನ್ಯವಾಗಿ ಶ್ರೀಗಂಧದ ಎಣ್ಣೆ, ಸುಗಂಧ ದ್ರವ್ಯ, ಶ್ರೀಗಂಧದ ಸೋಪುಗಳ ತಯಾರಿಕೆಗೆ ಬಳಸಲಾಗುತ್ತದೆ. ಪ್ರಸ್ತುತ ಭಾರತ ಶ್ರೀಗಂಧದ ರಫ್ತಿಗೆ ನಿಷೇಧ ಹೇರಿದೆ. ದೇಶದಲ್ಲಿ ಶ್ರೀಗಂಧದ (sandalwood)ತಳಿಗಳನ್ನು  ರಕ್ಷಿಸುವ ಸಲುವಾಗಿ ಈ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 


Chikkamagaluru ಶ್ರೀಗಂಧ ಮರಗಳಿಗೆ ವೈಜ್ಞಾನಿಕ ಪರಿಹಾರಕ್ಕೆ ವಾರದ ಗಡುವು

Follow Us:
Download App:
  • android
  • ios