ರಷ್ಯಾ ವಿದೇಶಾಂಗ ಸಟಿವ ಲಾವ್ರೋ ಹಾಗೂ ಜೈಶಂಕರ್ ಮಾತುಕತೆ ಯುದ್ಧದ ಸಂದರ್ಭದಲ್ಲಿ ಭಾರತದ ನಿಲುವಿಗೆ ಶ್ಲಾಘನೆ ಪುಟಿನ್ ಸಂದೇಶವನ್ನು ಮೋದಿಗೆ ತಲುಪಿಸಿದ ಲಾವ್ರೋ  

ನವದೆಹಲಿ(ಏ.01): ಭಾರತಕ್ಕೆ ಆಗಮಿಸಿರುವ ರಷ್ಯಾ ವಿದೇಶಾಂಕ ಸಚಿವ ಸರ್ಗೇಯ್ ಲಾವ್ರೋವ್ ಮಹತ್ವದ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಗೆ ರವಾನಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೈಯುಕ್ತಿಕವಾಗಿ ತಮ್ಮಲ್ಲಿ ಹೇಳಿರುವ ಹಾಗೂ ಇದನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲು ಹೇಳಿರುವ ಸಂದೇಶವನ್ನು ಲಾವ್ರೋವ್ ರವಾನಿಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಮಾತುಕತೆ ಆರಂಭಗೊಂಡಿದೆ.

ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ದ್ವಿಪಕ್ಷೀಯ ಒಪ್ಪಂದ, ಸಹಕಾರ ಕುರಿತು ಮಾತುಕತೆ ಆರಂಭಿಸಿದ ಸರ್ಗೇಯ್ ಲಾವ್ರೋವ್, ಪುಟಿನ್ ಶುಭಾಶಯ ಮೋದಿಗೆ ತಳಿಸಲು ಸೂಚಿಸಿದ್ದಾರೆ. ವೈಯುಕ್ತಿಕವಾಗಿ ಈ ಸಂದೇಶವನ್ನು ಮೋದಿಯವರಿಗೆ ತಲುಪಿಸಲು ಹೇಳಿದ್ದಾರೆ ಎಂದು ಮಾತು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಪುಟಿನ್ ಸಂಪರ್ಕದಲ್ಲಿದ್ದಾರೆ. ಇಂದಿನ ಮಾತುಕತೆ ಕುರಿತು ರಷ್ಯಾ ಅಧ್ಯಕ್ಷರಿಗೆ ವರದಿ ನೀಡುತ್ತೇನೆ ಎಂದು ಲಾವ್ರೋವ್ ಹೇಳಿದ್ದಾರೆ.

Daleep Singh visit ರಷ್ಯಾ ನಿರ್ಬಂಧಕ್ಕೆ ಸಲಹೆ ನೀಡಿದ್ದ ಬೈಡೆನ್‌ ಆಪ್ತ ದಲೀಪ್‌ ಸಿಂಗ್‌ ಇಂದು ಭಾರತಕ್ಕೆ!

ಯುದ್ಧದ ವೇಳೆ ಭಾರತದ ನಿಲುವಿಗೆ ಲಾವ್ರೋವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆ ಬಗೆ ಹರಿಸಲು ಸಲಹೆ ನೀಡಿದೆ. ಇದೇ ವೇಳೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ರಷ್ಯಾವನ್ನು ಖಂಡಿಸುವ ಎಲ್ಲಾ ನಿರ್ಣಯಗಳಿಂದ ಭಾರತ ದೂರ ಉಳಿದಿತ್ತು. ಭಾರತದ ನಡೆಯನ್ನು ರಷ್ಯಾ ಅಧ್ಯಕ್ಷರೂ ಸ್ವಾಗತಿಸಿದ್ದರು. ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಲಾವ್ರೋವ್ ಹೇಳಿದ್ದಾರೆ.

Scroll to load tweet…

ಮಾತುಕತೆ ವೇಳೆ ವಿವಿಧ ಸೇನಾ ಹಾರ್ಡ್‌ವೇರ್‌ ಹಾಗೂ ಎಸ್‌-400 ಕ್ಷಿಪಣಿ ವ್ಯವಸ್ಥೆ ಘಟಕಗಳನ್ನು ಸಮಯೋಚಿತವಾಗಿ ದೇಶಕ್ಕೆ ರವಾನೆ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ಇದೇ ವೇಳೆ ಭಾರತ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಲು ಒತ್ತು ನೀಡುತ್ತದೆ. ಭಾರತ ಹಾಗೂ ರಷ್ಯಾ ಮಿಲಿಟರಿ ಒಪ್ಪಂದ, ದ್ವಿಪಕ್ಷೀಯ ಸಹಕಾರ ಸೇರಿದಂತೆ ಹಲವು ವಿಚಾರಗಳಲ್ಲಿ ಪಾಲುದಾರಿಕೆ ಹೊಂದಿದೆ. ಈ ಹಿಂದಿಗಿಂತಲೂ ಮತ್ತಷ್ಟು ಗಟ್ಟಿಯಾಗಿ ಸಂಬಂಧ ಮುಂದುವರಿಯಲಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಉಕ್ರೇನ್‌ನಿಂದ ಪೂರೈಕೆ ಸ್ಥಗಿತ : ಅತ್ಯಧಿಕ ಬೆಲೆಗೆ ರಷ್ಯಾದಿಂದ ಎಣ್ಣೆ ಖರೀದಿಸಿದ ಭಾರತ

ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್‌ ಲಾವ್ರೊವ್‌ ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. ಉಕ್ರೇನಿನ ಮೇಲೆ ಯುದ್ಧ ಸಾರಿದ ನಂತರ ಭಾರತಕ್ಕೆ ರಷ್ಯಾ ಸಚಿವರ ಮೊದಲ ಭೇಟಿ ಇದಾಗಿದೆ.

ದಿನಕ್ಕೆ ಮುಗಿಸಲು ಬಂದ್ರು, 36 ದಿನವಾದರೂ ಗಟ್ಟಿಯಾಗಿ ನಿಂತಿದ್ದೇವೆ, ರಷ್ಯಾಗೆ ಝೆಲೆನ್ಸ್ಕಿ ತಿರುಗೇಟು!

ಭಾರತ, ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲ್ಲ 
2020ರಲ್ಲಿ ನಡೆದ ಗಲ್ವಾನ್ ಘರ್ಷಣೆ ಬಳಿಕ ಸರ್ಗೆಯ್ ಲಾವ್ರೋ ಮಹತ್ವದ ಹೇಳಿಕೆ ನೀಡಿದ್ದರು. ಈ ಮೂಲಕ ರಷ್ಯಾ ಭಾರತದ ನಿಲುವಿಗೆ ಪೂರಕವಾಗಿ ನಿರ್ಧಾರ ಪ್ರಕಟಿಸಿತ್ತು. ಗಲ್ವಾನ್‌ ಕಣಿವೆ ಸಂಘರ್ಷ ಸಂಬಂಧ ಭಾರತ ಮತ್ತು ಚೀನಾ ಮಧ್ಯೆ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸುವ ಸಾಧ್ಯತೆಯನ್ನು ರಷ್ಯಾ ತಳ್ಳಿಹಾಕಿದೆ. ಭಾರತ, ರಷ್ಯಾ ಮತ್ತು ಚೀನಾ ನಡುವೆ ನಡೆದ ತ್ರಿಪಕ್ಷೀಯ ಸಭೆಯ ವೇಳೆ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್‌ ಈ ಹೇಳಿಕೆ ನೀಡಿದ್ದಾರೆ. ‘ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಭಾರತ ಮತ್ತು ಚೀನಾಕ್ಕೆ ಯಾವುದೇ ಸಹಾಯದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಗಲ್ವಾನ್‌ ಘರ್ಷಣೆಯ ಬಳಿಕ ಉಭಯ ದೇಶಗಳು ಮಾತುಕತೆಯಲ್ಲಿ ತೊಡಗಿಕೊಂಡಿವೆ. ಎರಡೂ ಕಡೆಯ ಮಿಲಿಟರಿ ಕಮಾಂಡರ್‌ಗಳು ಮತ್ತು ವಿದೇಶಾಂಗ ಸಚಿವರು ಸಂಪರ್ಕ ಸಾಧಿಸಿದ್ದಾರೆ. ಭಾರತ ಅಥವಾ ಚೀನಾ ಮಧ್ಯಸ್ಥಿಕೆಯ ಅಗತ್ಯದ ಕುರಿತು ಹೇಳಿಕೆಗಳನ್ನು ನೀಡಿಲ್ಲ. ಹೀಗಾಗಿ ರಷ್ಯಾದ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂಬುದಾಗಿ ನಾನು ಭಾವಿಸುತ್ತೇನೆ’ ಎಂದು ಲಾವ್ರೊವ್‌್ಸ ಹೇಳಿದ್ದಾರೆ.