ಅತ್ಯಧಿಕ ಬೆಲೆಗೆ ರಷ್ಯಾದಿಂದ ಎಣ್ಣೆ ಖರೀದಿಸಿದ ಭಾರತ ಎಪ್ರಿಲ್‌ನಲ್ಲಿ ಬರಲಿದೆ  45,000 ಟನ್‌ ಎಣ್ಣೆ ಪ್ರತಿ ಟನ್‌ಗೆ  $2,150 ಡಾಲರ್‌  ವೆಚ್ಚ

ನವದೆಹಲಿ(ಮಾ.30): ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಬಳಿಕ ಸೂರ್ಯಕಾಂತಿ ಎಣ್ಣೆಯನ್ನು ಉಕ್ರೇನ್‌ ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ ಹಿನ್ನೆಲೆ ಭಾರತ ಈಗ ದಾಖಲೆಯ ಭಾರಿ ಬೆಲೆ ನೀಡಿ ರಷ್ಯಾದಿಂದ ಸೂರ್ಯಕಾಂತಿ ಎಣ್ಣೆ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧದ ಕಾರಣದಿಂದ ಉಕ್ರೇನ್‌ ಸರಬರಾಜು ಸ್ಥಗಿತಗೊಳಿಸಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಏರಿದ್ದರಿಂದ ಭಾರತವು ಏಪ್ರಿಲ್‌ನಲ್ಲಿ ದಾಖಲೆಯ ಹೆಚ್ಚಿನ ಬೆಲೆಗೆ 45,000 ಟನ್‌ಗಳಷ್ಟು ರಷ್ಯಾದ ಸೂರ್ಯಕಾಂತಿ ಎಣ್ಣೆಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಈ ಉದ್ಯಮದ ಅಧಿಕಾರಿಗಳು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ತಾಳೆ ಎಣ್ಣೆಯ (palm oil) ಪೂರೈಕೆಯನ್ನು ಸ್ಥಗಿತಗೊಳಿಸಿರುವ ಇಂಡೋನೇಷ್ಯಾದ (Indonesia) ನಿರ್ಧಾರ ಹಾಗೂ ದಕ್ಷಿಣ ಅಮೆರಿಕಾದಲ್ಲಿ (South America) ಸೋಯಾಬೀನ್ ಬೆಳೆಯಲ್ಲಿ ಉಂಟಾದ ಕುಸಿತದಿಂದ ವಿಶ್ವದ ಅತಿದೊಡ್ಡ ಖಾದ್ಯ ತೈಲ ಆಮದುದಾರ ದೇಶವಾಗಿರುವ ಭಾರತಕ್ಕೆ ಹೊಡೆತ ಉಂಟಾಗಿದ್ದು, ಹೀಗಾಗಿ ಈಗ ರಷ್ಯಾದ ಸೂರ್ಯಕಾಂತಿ ಎಣ್ಣೆ ಭಾರತದ ಈ ಕೊರತೆಯನ್ನು ಪೂರೈಸಲಿದೆ.

Russia Ukraine Crisis:ಭಾರತದ ಅಡುಗೆಮನೆ ಮೇಲೂ ಪರಿಣಾಮ ಬೀರಲಿದೆ ಈ ಸಂಘರ್ಷ! ಯಾವೆಲ್ಲ ಕ್ಷೇತ್ರಕ್ಕಿದೆ ಈ ರಾಷ್ಟ್ರಗಳ ನಂಟು?

ಉಕ್ರೇನ್‌ನಲ್ಲಿ ಹಡಗು ಲೋಡ್ ಮಾಡಲು ಸಾಧ್ಯವಾಗದ ಕಾರಣ, ಖರೀದಿದಾರರು ರಷ್ಯಾದಿಂದ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಜೆಮಿನಿ ಎಡಿಬಲ್ಸ್ (Gemini Edibles) ಮತ್ತು ಫ್ಯಾಟ್ಸ್ ಇಂಡಿಯಾ ಪ್ರೈವೇಟ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಚೌಧರಿ (Pradeep Chowdhry) ಹೇಳಿದ್ದಾರೆ. ಏಪ್ರಿಲ್‌ನಲ್ಲಿ 12,000 ಟನ್‌ಗಳಷ್ಟು ರಷ್ಯಾದ ಸೂರ್ಯಕಾಂತಿ ಎಣ್ಣೆಯನ್ನು (sunflower oil) ಆಮದು ಮಾಡಿಕೊಳ್ಳಲು ಇದು ಒಪ್ಪಂದ ಮಾಡಿಕೊಂಡಿದೆ.

Russia- Ukraine War: 200 ರ ಗಡಿಯತ್ತ ಅಡುಗೆ ಎಣ್ಣೆ, ಖರೀದಿಗೆ ಮಿತಿ ನಿಗದಿ

ಸಂಸ್ಕರಣಾಗಾರರು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಪ್ರತಿ ಟನ್‌ಗೆ $2,150 ಡಾಲರ್‌ ದಾಖಲೆ ಬೆಲೆಗೆ ಖರೀದಿಸಿದ್ದಾರೆ. ಇದರಲ್ಲಿ ವೆಚ್ಚ, ವಿಮೆ ಮತ್ತು ಸರಕು ಸಾಗಣೆ ವೆಚ್ಚವೂ ಸೇರಿದೆ.(CIF), ಯುದ್ಧ ಆರಂಭವಾಗುವುದಕ್ಕೂ ಮೊದಲು ಇಷ್ಟೇ ಮೊತ್ತದ ಎಣ್ಣೆ ಸಾಗಣೆಗೆ ಉಂಟಾಗುತ್ತಿದ್ದ ವೆಚ್ಚ $1,630 ಡಾಲರ್ ಎಂದು ವಿತರಕರು ಹೇಳಿದ್ದಾರೆ.

ರಷ್ಯಾ (Russia)-ಉಕ್ರೇನ್(Ukraine) ಸಂಘರ್ಷ ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ರಷ್ಯಾದೊಂದಿಗೆ ಮಾತ್ರವಲ್ಲ ಉಕ್ರೇನ್ ಜೊತೆಗೂ ವ್ಯಾಪಾರ (Trade) ಸಂಬಂಧ ಹೊಂದಿರೋ ಕಾರಣ ಭಾರತದ (India) ಆರ್ಥಿಕತೆ (Economy) ಮೇಲೆ ಕೂಡ ಈ ಯುದ್ಧ ಪರಿಣಾಮ ಬೀರಿದೆ. ಅದ್ರಲ್ಲೂ ಭಾರತದ ಅಡುಗೆಮನೆ (Kitchen) ಮೇಲೆ ಈ ಯುದ್ಧ ನೇರ ಪರಿಣಾಮ ಬೀರಿದೆ. ಇದರ ಜೊತೆಗೆ ಔಷಧ ವಲಯ (pharma sector), ಕಚ್ಚಾ ತೈಲ ಬೆಲೆ (Crudeoil price) ಹಾಗೂ ಎಲ್ ಎನ್ ಜಿ (LNG) ಕೈಗಾರಿಕೆಗಳ ಮೇಲೂ ಈ ಯುದ್ಧ ಪರಿಣಾಮ ಬೀರಿದೆ.

ಭಾರತದಲ್ಲಿ ಅಡುಗೆಗೆ ಬಳಸೋ ತೈಲಗಳಲ್ಲಿ ಸೂರ್ಯಕಾಂತಿ ಎಣ್ಣೆ ಪ್ರಮುಖ ಸ್ಥಾನ ಗಳಿಸಿದೆ. ಈಗಾಗಲೇ ಅಡುಗೆ ಎಣ್ಣೆ ಬೆಲೆಯೇರಿಕೆಯಿಂದ ತತ್ತರಿಸಿರೋ ಗೃಹಿಣಿಯರಿಗೆ ಈಗ ಮತ್ತೊಮ್ಮೆ ಶಾಕ್ ಎದುರಾಗಿದೆ. ತಾಳೆ ಎಣ್ಣೆ ಬಳಿಕ ಭಾರತ ಆಮದು ಮಾಡಿಕೊಳ್ಳೋ ಎರಡನೇ ಅತೀದೊಡ್ಡ ಪ್ರಮಾಣದ ಅಡುಗೆ ಎಣ್ಣೆ ಸೂರ್ಯಕಾಂತಿ ಎಣ್ಣೆ. 2021ರಲ್ಲಿ ಭಾರತ 1.89 ಮಿಲಿಯನ್ ಟನ್ಸ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಇದ್ರಲ್ಲಿ ಶೇ.70ರಷ್ಟನ್ನು ಉಕ್ರೇನ್ ನಿಂದಲೇ ಆಮದು ಮಾಡಿಕೊಳ್ಳಲಾಗಿದೆ. ಶೇ.20ರಷ್ಟನ್ನು ರಷ್ಯಾ ಹಾಗೂ ಉಳಿದ ಶೇ.10ರಷ್ಟನ್ನು ಅರ್ಜೆಂಟೈನಾದಿಂದ ಭಾರತ ಆಮದು ಮಾಡಿಕೊಂಡಿದೆ.