ಭಾರತ ಮೂಲದ ಅಮೆರಿಕ ಸಲಹೆಗಾರ ದಲೀಪ್ ಸಿಂಗ್ ರಷ್ಯಾ ನಡೆಸಿರುವ ಅನ್ಯಾಯದ ದಾಳಿಯ ಕುರಿತು ಚರ್ಚೆ ಇಂಡೋ-ಪೆಸಿಫಿಕ್ ವಲಯದಲ್ಲಿ ಸಹಕಾರ ಕುರಿತು ಚರ್ಚೆ
ವಾಷಿಂಗ್ಟನ್(ಮಾ.31): ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮೂಲದ ಅಮೆರಿಕ ಸಲಹೆಗಾರ ದಲೀಪ್ ಸಿಂಗ್ ಮಾ.31ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸಿರುವ ಅನ್ಯಾಯದ ದಾಳಿಯ ಪರಿಣಾಮಗಳ ಕುರಿತಾಗಿ ಅವರು ಭಾರತದೊಂದಿಗೆ ಚರ್ಚಿಸಲಿದ್ದಾರೆ ಎಂದು ಶ್ವೇತಭವನ ಬುಧವಾರ ಹೇಳಿದೆ.
ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್ ಅವರ ಭೇಟಿಯ ದಿನವೇ ಇವರೂ ಸಹ ಭಾರಕ್ಕೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್ ಮೇಲಿನ ದಾಳಿ ಜಾಗತಿಕ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮ ಮತ್ತು ಅದನ್ನು ತಗ್ಗಿಸುವ ಕುರಿತಾಗಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಇದರೊಂದಿಗೆ ಇಂಡೋ-ಪೆಸಿಫಿಕ್ ವಲಯದಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಕುರಿತಾಗಿ ಭಾರತೀಯ ಅಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ ಎಂದು ಅಮೆರಿಕ ತಿಳಿಸಿದೆ.
Ukraine Crisis ಉಕ್ರೇನ್ ಮೇಲೆ ಜೈವಿಕ ಅಸ್ತ್ರ ಬಳಕೆಗೆ ಪುಟಿನ್ ಸಂಚು, ಬೈಡೆನ್ ಮುನ್ನೆಚ್ಚರಿಕೆ!
ಕೀವ್‌ನಿಂದ ರಷ್ಯಾ ಪಡೆ ನಿರ್ಗಮನ ಶುರು: ಅಮೆರಿಕ
ಉಕ್ರೇನ್ ಮತ್ತು ರಷ್ಯಾ ನಡುವಿನ ‘ಸೇನಾ ನಿರ್ಗಮನ ಒಪ್ಪಂದ’ದಂತೆ ರಷ್ಯಾ ಪಡೆಗಳು ರಾಜಧಾನಿಯಿಂದ ಉತ್ತರಕ್ಕೆ ಅಥವಾ ಬೆಲಾರಸ್‌ನತ್ತ ಚಲಿಸುತ್ತಿವೆ ಎಂದು ಅಮೆರಿಕ ಸರ್ಕಾರ ಬುಧವಾರ ಹೇಳಿದೆ. ಆದರೆ ರಷ್ಯಾ ಸೇನಾಪಡೆಗಳು ಹಿಂದೆಸರಿಯುತ್ತಿರುವುದರ ಹಿಂದಿನ ಸರಿಯಾದ ಉದ್ದೇಶ ತಿಳಿಯುತ್ತಿಲ್ಲ. ಇದು ಸೇನೆಯನ್ನು ಹಿಂಪಡೆಯುತ್ತಿರುವಂತೆ ಕಾಣುತ್ತಿಲ್ಲ. ರಷ್ಯಾ ತನ್ನ ದಾಳಿಯನ್ನು ಮರುಹೊಂದಿಸಲು ಅಥವಾ ಮರುಸ್ಥಾಪಿಸಲು ಈ ನಡೆ ಅನುಸರಿಸುತ್ತಿರಬಹುದು ಎಂದು ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಹೋಗಬೇಡಿ: ಅಮೆರಿಕನ್ನರಿಗೆ ಬೈಡೆನ್ ಸರ್ಕಾರ ಸೂಚನೆ
ಅಮೆರಿಕ ಮಂಗಳವಾರ ನೂತನ ಪ್ರಯಾಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎಂದು ತನ್ನ ನಾಗರಿಕರಿಗೆ ಸೂಚಿಸಿದೆ. ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಭಾರತ-ಪಾಕಿಸ್ತಾನ ಗಡಿಯ 10 ಕಿ.ಮೀ ಒಳಗೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡದಂತೆ ತಿಳಿಸಿದೆ. ಭಾರತದಲ್ಲಿ ಕೊರೋನಾ ಸೋಂಕು ತಗ್ಗಿದ ಹಿನ್ನೆಲೆಯಲ್ಲಿ ಅಮೆರಿಕ ಇತ್ತೀಚೆಗೆ ನೂತನ ಪ್ರಯಾಣ ಮಾರ್ಗದರ್ಶಿ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ಕಾಶ್ಮೀರಕ್ಕೆ ತೆರಳದಂತೆ ಸೂಚಿಸಿ ಮತ್ತೊಂದು ಮಾರ್ಗಸೂಚಿ ಹೊರಡಿಸಿದೆ.
ಅಮೆರಿಕ ಜೊತೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳುವುದಾಗಿ ರಷ್ಯಾ ಎಚ್ಚರಿಕೆ!
ಉಕ್ರೇನ್ ಜೊತೆ ನಾವಿದ್ದೇವೆ: ಬೈಡೆನ್
ರಷ್ಯಾ ತನ್ನ ನಿರಂತರ ದಾಳಿ ಮುಂದುವರೆÜಸಿರುವುದರಿಂದ ರಷ್ಯಾ ವಿರುದ್ಧ ದೀರ್ಘ ಹೋರಾಟಕ್ಕೆ ಉಕ್ರೇನ್ ಸಿದ್ಧವಾಗಬೇಕು. ಇದಕ್ಕಾಗಿ ಉಕ್ರೇನ್ ಜೊತೆ ಅಮೆರಿಕ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಪೋಲೆಂಡ್‌ಗೆ ಭೇಟಿ ವೇಳೆ ಬೈಡೆನ್, ‘ರಷ್ಯಾ ಮತ್ತು ಉಕ್ರೇನ್ ಯುದ್ಧ ದಿನಗಳು ಅಥವಾ ತಿಂಗಳುಗಳಲ್ಲಿ ಮುಗಿಯುವುದಿಲ್ಲ. ಹಾಗಾಗಿ ಮುಂಬರುವ ದೀರ್ಘ ಹೋರಾಟಕ್ಕೆ ನಾವು ಅಣಿಯಾಗಬೇಕು. ಉಕ್ರೇನ್ ಜನರು ತಮ್ಮ ದೇಶವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಶೀತಲ ಸಮರದೊಂದಿಗೆ ಪ್ರಜಾಪ್ರಭುತ್ವದ ಯುದ್ಧ ಕೊನೆಗೊಂಡಿಲ್ಲ. ನಿರಂಕುಶ ಶಕ್ತಿಗಳು ಕಳೆದ ದಶಕಗಳಲ್ಲಿ ಪುನರುಜ್ಜೀವನಗೊಂಡಿವೆ. ರಷ್ಯಾ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ’ ಎಂದು ಅವರು ಹೇಳಿದರು.