Ukraine Crisis 3 ದಿನಕ್ಕೆ ಮುಗಿಸಲು ಬಂದ್ರು, 36 ದಿನವಾದರೂ ಗಟ್ಟಿಯಾಗಿ ನಿಂತಿದ್ದೇವೆ, ರಷ್ಯಾಗೆ ಝೆಲೆನ್ಸ್ಕಿ ತಿರುಗೇಟು!
- 36ನೇ ದಿನವೂ ಮುಂದುವರಿದ ರಷ್ಯಾ ಉಕ್ರೇನ್ ಯುದ್ಧ
- ರಷ್ಯಾ ದಾಳಿಗೆ ದಿಟ್ಟ ತಿರುಗೇಟು ನೀಡಿದೆ ಉಕ್ರೇನ್
- ರಾಷ್ಟ್ರವನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭಾಷಣ
ಉಕ್ರೇನ್(ಏ.01): ರಷ್ಯಾ ಹಾಗೂ ಉಕ್ರೇನ್ ನಡುವಿನ ಭೀಕರ ಯುದ್ಧ 36 ದಿನವಾದರೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಉಕ್ರೇನ್ ಬಹುತೇಕ ನಗರ, ಪಟ್ಟಣಗಳು ಧ್ವಂಸವಾಗಿದೆ. ಅಮಾಯಕ ನಾಗರೀಕರು ಬಲಿಯಾಗಿದ್ದಾರೆ. ಬಹುತೇಕರು ಪಲಾಯನ ಮಾಡಿದ್ದಾರೆ. ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದ್ದಾರೆ. 3 ದಿನಕ್ಕೆ ಉಕ್ರೇನ್ ಮುಗಿಸಲು ಬಂದವರಿಗೆ 36 ದಿನವಾದರೂ ಮುಗಿಸಲು ಸಾಧ್ಯವಾಗಿಲ್ಲ. ಎದೆಗುಂದದೆ ನಿಂತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಯುದ್ಧ ಆರಂಭವಾಗಿ 36 ದಿನ ಕಳೆದಿದೆ. ಈ ಸಂದರ್ಭದಲ್ಲಿ ದೇಶವನ್ನುದ್ದೇಶಿ ಭಾಷಣ ಮಾಡಿದ ಝೆಲೆನ್ಸ್ಕಿ, ಧೈರ್ಯವಾಗಿ ನಿಂತ ದೇಶದ ಸೇನಾ ಪಡೆ, ನಾಗರೀಕರಿಗೆ ಧನ್ಯವಾದ ಹೇಳಿದ್ದಾರೆ. ರಷ್ಯಾ 3 ಅಥವಾ 5 ದಿನದಲ್ಲಿ ಉಕ್ರೇನ್ ಮುಗಿಸಿ ಬಿಡುತ್ತೇವೆ ಎಂದು ದಾಳಿ ಮಾಡಿದರು. ಆದರೆ 36 ದಿನದ ಬಳಿಕವೂ ಉಕ್ರೇನ್ ಅಷ್ಟೇ ಗಟ್ಟಿಯಾಗಿ ನಿಂತು ಹೋರಾಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
Russia Ukraine war ಉಕ್ರೇನ್ ನಲ್ಲಿ ನಾಯಿಗಳನ್ನು ತಿಂದು ಬದುಕುತ್ತಿರುವ ರಷ್ಯಾ ಸೈನಿಕರು!
ನಗರಗಳು, ಪ್ರದೇಶಗಳು ಧ್ವಂಸಗೊಂಡಿದೆ. ಆದರೆ ಉಕ್ರೇನ್ ಜನರ ಧೈರ್ಯ ಕುಂದಿಲ್ಲ. ಹೋರಾಟ ಮಾಡಬಲ್ಲ ಛಲ ಆಕ್ರೋಶ ಈಗಲೂ ಹಾಗೇ ಇದೆ. ನಾವು ಆಪ್ತರನ್ನು ಕಳೆದುಕೊಂಡಿದ್ದೇವೆ. ಆಸ್ತಿ ಪಾಸ್ತಿ ಕಳೆದುಕೊಂಡಿದ್ದೇವೆ. ಅಪಾರ ನಷ್ಟ ಅನುಭವಿಸಿದ್ದೇವೆ. ಆದರೆ ಹೋರಾಟದಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನಾವು ನೆನಪಿಸಲು ಇಷ್ಟಪಡದ ಘಟನೆಗಳೇ ನಡೆದು ಹೋಗಿದೆ. ಆದರೆ ಭವಿಷ್ಯದ ಕುರಿತು ನಾವು ಚಿಂತಿಸಬೇಕಿದೆ. ಯುದ್ಧದ ಬಳಿಕ ನಾವು ಉಕ್ರೇನ್ ಮತ್ತೆ ಕಟ್ಟಿ ಬೆಳೆಸಬೇಕಿದೆ. ನಮ್ಮ ಮುಂದಿನ ಪೀಳಿಗೆ ಭವಿಷ್ಯಕ್ಕಾಗಿ ಚಿಂತಿಸಬೇಕಿದೆ ಎಂದಿದ್ದಾರೆ. ಇದೇ ವೇಳೆ ದೇಶದ್ರೋಹ ಕೃತ್ಯ ಎಸಗಿದ ಕಾರಣ ರಾಷ್ಟ್ರೀಯ ಭದ್ರತಾ ಸೇನೆಯ ಹಿರಿಯ ಇಬ್ಬರು ಸದ್ಯರನ್ನು ವಜಾಗೊಳಿಸಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಯುದ್ಧ ಆರಂಭವಾಗಿ 36 ದಿನಗಳಾದ ನಂತರ ರಷ್ಯಾ ವಿರುದ್ಧ ಉಕ್ರೇನ್ ಹೊಸ ರೀತಿಯ ಸಡ್ಡು ಹೊಡೆದಿದೆ. ಶೀಘ್ರವೇ ರಷ್ಯಾ ವಿರುದ್ಧ ಗೆರಿಲ್ಲಾ ಯುದ್ಧ ತಂತ್ರ ಆರಂಭಿಸುವುದಾಗಿ ಉಕ್ರೇನ್ ಗುಪ್ತಚರ ಮುಖ್ಯಸ್ಥರು ಹೇಳಿದ್ದಾರೆ.
Russia Ukraine War ಚಚ್ಚಿ ಹಾಕ್ತೀನಿ: ಉಕ್ರೇನ್‌ಗೆ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ!
‘ಉಕ್ರೇನ್ ನೆಲದ ಮೇಲೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿದರೇ ರಷ್ಯಾದ ಪ್ರಕಟಣೆಯನ್ನು ನಂಬಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತದೆ. ರಷ್ಯಾದ ಸಂಕೇತಗಳನ್ನು ನಾವು ಧನಾತ್ಮಕ ಎಂದು ಒಪ್ಪಿಕೊಳ್ಳಬಹುದು. ಆದರೆ ಅದು ರಷ್ಯಾ ಬಾಂಬ್ ಸ್ಪೋಟವನ್ನು ಮೌನಗೊಳಿಸುವುದಿಲ್ಲ ಎಂದು ಜೆಲೆನ್‌ಸ್ಕಿ ಹೇಳಿದ್ದಾರೆ.ರಷ್ಯಾದ ಸಮಾಲೋಚಕರೊಂದಿಗೆ ನಡೆಸಿದ ಮಾತುಕತೆಗಳು ಸಕಾರಾತ್ಮಕ ಸಂಕೇತಗಳನ್ನು ನೀಡಿವೆ. ಆದರೆ ರಷ್ಯಾವನ್ನು ನಂಬಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಹೇಳಿದ್ದಾರೆ.
ಇಸ್ತಾನ್‌ಬುಲ್ ನಡೆದ ಮಾತುಕತೆಯ ನಂತರ ಕೀವ್ ಮತ್ತು ಚೆರ್ನಿಹಿವ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಕಡಿತ ಮಾಡುವುದಾಗಿ ರಷ್ಯಾ ಘೋಷಣೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಜೆಲೆನ್‌ಸ್ಕಿ, ‘ಉಕ್ರೇನ್ ಪಡೆಗಳು ತೋರಿದ ಧೈರ್ಯ ಮತ್ತು ಸಾಹಸಗಳ ಪರಿಣಾಮಕಾರಿಯಾದ ಕ್ರಮಗಳಿಂದಾಗಿ ರಷ್ಯಾ ಸೇನೆಯನ್ನು ಕಡಿತ ಮಾಡಲು ಒಪ್ಪಿಕೊಂಡಿದೆ. ಆದರೆ ನಮ್ಮನ್ನು ನಾಶ ಮಾಡಲು ಯತ್ನಿಸುತ್ತಿರುವ ದೇಶದ ಪ್ರತಿನಿಧಿಗಳಿಂದ ಬರುವ ಹೇಳಿಕೆಗಳನ್ನು ನಂಬಲು ಸಾಧ್ಯವಿಲ್ಲ. ಉಕ್ರೇನ್ ಯಾವುದೇ ಕಾರಣಕ್ಕೂ ಸಾರ್ವಭೌಮತೆ ಮತ್ತು ಪ್ರಾದೇಶಿಕತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.