Asianet Suvarna News Asianet Suvarna News

ಗರ್ಭಿಣಿಯಾಗೋದು, ಆಗದೇ ಇರೋದು ಮಹಿಳೆಯ ಹಕ್ಕು, ಗಂಡ ಒತ್ತಾಯ ಮಾಡುವಂತಿಲ್ಲ!

ಬಾಂಬೆ ಹೈಕೋರ್ಟ್‌ ನೀಡಿದ ಮಹತ್ವದ ಆದೇಶದಲ್ಲಿ, ಗರ್ಭಿಣಿಯಾಗೋದು ಅಥವಾ ಆಗದೇ ಇರೋದು ಮಹಿಳೆಯ ಹಕ್ಕು. ಗಂಡನಾಗಿರುವ ಮಾತ್ರಕ್ಕೆ ಇದನ್ನು ಆಕೆಗೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ತನ್ನ ಒಪ್ಪಿಗೆಯಿಲ್ಲದೆ ಹೆಂಡತಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಹಾಗಾಗಿ ಆಕೆಯಿಂದ ನನಗೆ ವಿಚ್ಛೇದನ ಕೊಡಿಸಿ ಎಂದು ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

Reproductive Choice Insegregable To Woman's Personal Liberty Husband Cant Force says  Bombay High Court san
Author
First Published Oct 8, 2022, 3:15 PM IST

ಮುಂಬೈ (ಅ.8): ಪತಿ ಆಗಿರುವ ಮಾತ್ರಕ್ಕೆ ಮಗುವನ್ನು ಹೆರುವಂತೆ ಪತ್ನಿಗೆ ಒತ್ತಾಯ ಮಾಡುವಂತಿಲ್ಲ. ಗರ್ಭಿಣಿಯಾಗೋದು ಅಥವಾ ಆಗದೇ ಇರೋದು ಮಹಿಳೆಯ ಹಕ್ಕು. ಯಾವ ಕಾರಣಕ್ಕೂ ಗಂಡ ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಬಲವಂತ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಸಂತಾನೋತ್ಪತ್ತಿ ಮಾಡುವುದು ಆಕೆಯ ಹಕ್ಕು, ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಆರ್ಟಿಕಲ್‌ 21ರ ಅವಿಭಾಜ್ಯ ಅಂಗ ಇದು ಎಂದು ಹೇಳಿದೆ. ವಿಚ್ಛೇದನ ಕೋರಿ ಸಲ್ಲಿಸಿದ ಮನವಿಯಲ್ಲಿ, ಪತಿಯೊಬ್ಬ ತನ್ನ ಒಪ್ಪಿಗೆಯಿಲ್ಲದೆ ತನ್ನ ಹೆಂಡತಿ ಗರ್ಭಪಾತವನ್ನು ಮಾಡಿಸಿಕೊಂಡಿದ್ದಾಳೆ. ಆದರೆ ಇದು ಕ್ರೌರ್ಯಕ್ಕೆ ಸಮ ಎಂದು ಹೇಳಿದ್ದರು. ಆದರೆ, ಪೀಠದ ನ್ಯಾಯಮೂರ್ತಿಗಳಾಗಿದ್ದ ಅತುಲ್‌ ಚಂದೂರ್ಕರ್‌ ಮತ್ತು ಊರ್ಮಿಳಾ ಜೋಶಿ ಫಾಲ್ಕೆ ಅವರ ವಿಭಾಗೀಯ ಪೀಠವು, ಆಕೆಯ ನಡವಳಿಕೆಯು ಆಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಪ್ರದರ್ಶನ ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಗರ್ಭವನ್ನು ಉಳಿಸಿಕೊಳ್ಳುವುದಾಗಲಿ, ತೆಗೆಸಿಕೊಳ್ಳುವುದಾಗಲಿ ಅದು ಅಕೆಗೆ ಬಿಟ್ಟ ನಿರ್ಧಾರ ಇದರಲ್ಲಿ ಗಂಡನ ಪಾತ್ರ ಏನೂ ಇರುವುದಿಲ್ಲ ಎಂದು ಕೋರ್ಟ್‌ ಗಮನಿಸಿದೆ.

"ಭಾರತದ ಸಂವಿಧಾನದ 21 ನೇ (Article 21 of the Constitution of India) ಪರಿಚ್ಛೇದದ ಅಡಿಯಲ್ಲಿ ಮಹಿಳೆಯೊಬ್ಬರು ಸಂತಾನೋತ್ಪತ್ತಿ ಆಯ್ಕೆಯನ್ನು ಹೊಂದುವ ಹಕ್ಕು ತನ್ನ ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಭಾಗವಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನು ನೀವು ಒಪ್ಪಿಕೊಳ್ಳಬೇಕು. ಆಕೆಗೆ ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸಲಾಗುವುದಿಲ್ಲ," ನ್ಯಾಯಾಲಯ ತಿಳಿಸಿದೆ.ಇನ್ನು ಮದುವೆಯ ನಂತರ ಕೆಲಸ ಮಾಡಲು ಬಯಸುವ ಮಹಿಳೆಯ ಇಂಗಿತ ಕ್ರೌರ್ಯ ಎನಿಸಿಕೊಳ್ಳುವುದಿಲ್ಲ ಎಂದು ಪರಿಗಣಿಸಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.

ಕೋರ್ಟ್‌ನಲ್ಲಿ (Bombay High Court) ಈ ಬಗ್ಗೆ ಹೇಳಿಕೊಂಡಿದ್ದ ಪತಿ, 2001ರಲ್ಲಿ ನಾವಿಬ್ಬರು ಮದುವೆಯಾದ ದಿನದಿಂದ ಆಕೆ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದರು. ಇದಕ್ಕಾಗಿ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದರು ಇದು ಕ್ರೌರ್ಯಕ್ಕೆ ಸಮ ಎಂದು ಹೇಳಿದ್ದರು. 2004ರಲ್ಲಿ ಆಕೆ, ಗಂಡನ ಮನೆಯನ್ನು ತೊರೆದಿದ್ದಾಳೆ. ಅಂದಿನಿಂದ ಗಂಡನನ್ನೂ ತೊರೆದಿದ್ದಾರೆ. ಈ ಕಾರಣದಿಂದಾಗಿ ಕ್ರೌರ್ಯ ಹಾಗೂ ಆಕೆ ಬಿಟ್ಟು ಹೋಗಿರುವ ಕಾರಣಕ್ಕಾಗಿ ವಿಚ್ಛೇದನವನ್ನು ನೀಡಬೇಕು ಎಂದು ಕೋರಿದ್ದರು.

ಮತ್ತೊಂದೆಡೆ, ಮಹಿಳೆ ತನ್ನ ಮೊದಲ ಮಗುವಿನ ಹೆರಿಗೆ ತನ್ನ ಕಡೆಯಿಂದ ಮಾತೃತ್ವದ (divorce)ಸ್ವೀಕಾರದ ಸೂಚನೆಯಾಗಿದೆ ಎಂದು ವಾದ ಮಾಡಿದ್ದಾರೆ. ಹೆಚ್ಚುವರಿಯಾಗಿ, ಅನಾರೋಗ್ಯದ ಕಾರಣದಿಂದ ತನ್ನ ಎರಡನೇ ಗರ್ಭಧಾರಣೆಯನ್ನು(Reproductive Rights) ಕೊನೆಗೊಳಿಸಲಾಯಿತು ಮತ್ತು ಆಕೆಯ ಪರಿಶುದ್ಧತೆಯನ್ನು ಅನುಮಾನಿಸಿದ ಕಾರಣಕ್ಕಾಗಿ ಗಂಡನ ಮನೆಯಿಂದ ಹೊರಬಂದಿದ್ದೇನೆ. ಅದಲ್ಲದೆ, ನನ್ನನ್ನು ಮರಳಿ ಗಂಡನ ಮನೆಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಪತಿ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.

ವಿಶ್ವದ ಗರ್ಭಿಣಿಯರಿಗೆ ಬಂಪರ್‌ ಆಫರ್‌, ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದ ನಿತ್ಯಾನಂದ!

ಗರ್ಭಾವಸ್ಥೆಯ ಮುಕ್ತಾಯದ ಬಗ್ಗೆ ಯಾವುದೇ ಪಕ್ಷಗಳು ತಮ್ಮ ಹಕ್ಕುಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ ಆದರೆ ಮಹಿಳೆ ಈಗಾಗಲೇ ಮಗುವಿಗೆ ಜನ್ಮ ನೀಡಿದ್ದರಿಂದ, ಅವರು ಮಾತೃತ್ವವನ್ನು ಸ್ವೀಕರಿಸಲು ಹಿಂಜರಿಯುತ್ತಾರೆ ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಗಂಡನ ಆರೋಪಗಳನ್ನು ಗಣನೆಗೆ ತೆಗೆದುಕೊಂಡರೂ, ಸಂತಾನೋತ್ಪತ್ತಿ ಆಯ್ಕೆಗಾಗಿ ಮಹಿಳೆಯ ಮೇಲೆ ಕ್ರೌರ್ಯದ ಆರೋಪ ಮಾಡಲಾಗುವುದಿಲ್ಲ ಎಂದು ಹೇಳಿದೆ.

ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅರೆಸ್ಟ್!

ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಪತ್ನಿಯ ಮನವಿಗೆ ಅನುಮತಿ ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಪತಿ ಸಲ್ಲಿಸಿದ ಮೇಲ್ಮನವಿಯನ್ನು ಪೀಠವು ವಜಾಗೊಳಿಸಿತು ಮತ್ತು ವಿಚ್ಛೇದನಕ್ಕಾಗಿ ಪತಿಯ ಅರ್ಜಿಯನ್ನು ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13(1)(IA) ಮತ್ತು 13(1)(ib) ಅನ್ವಯ ವಜಾಗೊಳಿಸಿತು.

Follow Us:
Download App:
  • android
  • ios