Asianet Suvarna News Asianet Suvarna News

ನೌಕಾಪಡೆ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ತ್ರಿಪಾಠಿ: ಅಮ್ಮನ ಪಾದಕ್ಕೆರಗಿ ಆಶೀರ್ವಾದ ಪಡೆದ ಅಡ್ಮಿರಲ್

ಭಾರತದ ನೌಕಾಪಡೆ ನೂತನ ಮುಖ್ಯಸ್ಥರಾಗಿ ಇಂದು  ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಅಧಿಕಾರ ಸ್ವೀಕರಿಸಿದ್ದರು. ಈ ಅಪರೂಪದ ಕ್ಷಣಕ್ಕೂ ಮೊದಲು ಅವರು ತಮ್ಮ ತಾಯಿಯ ಕಾಲಿಗೆರಗಿ ಆಶೀರ್ವಾದ ಪಡೆದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Dinesh Tripathi takes oath as Indias new Navy chief takes mother blessing by touching feet akb
Author
First Published Apr 30, 2024, 2:53 PM IST

ನವದೆಹಲಿ: ಭಾರತದ ನೌಕಾಪಡೆ ನೂತನ ಮುಖ್ಯಸ್ಥರಾಗಿ ಇಂದು  ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಅಧಿಕಾರ ಸ್ವೀಕರಿಸಿದ್ದರು. ಈ ಅಪರೂಪದ ಕ್ಷಣಕ್ಕೂ ಮೊದಲು ಅವರು ತಮ್ಮ ತಾಯಿಯ ಕಾಲಿಗೆರಗಿ ಆಶೀರ್ವಾದ ಪಡೆದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದಕ್ಕೂ ಮೊದಲು ನೌಕಾಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರನ್ನು ಇಂದು  ನೌಕಾಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಮೊದಲು  ನೌಕಾಪಡೆ ಮುಖ್ಯಸ್ಥರಾಗಿದ್ದ  ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಇಂದು ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್ ತ್ರಿಪಾಠಿ ಅವರನ್ನು ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಯ್ತು. ಆದರೆ ತಾವು ಹೊಸ ಜವಾಬ್ದಾರಿಯ ಹೊರುವುದಕ್ಕೂ ಮೊದಲು ದಿನೇಶ್ ಕುಮಾರ್ ತ್ರಿಪಾಠಿ ತಾಯಿ ಕಾಲಿಗೆರಗಿ ನಮಸ್ಕರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಂದ ಶುಭಾಶಯಗಳನ್ನು ಸ್ವೀಕರಿಸಿದ ದಿನೇಶ್ ಬಳಿಕ ನೇರವಾಗಿ ತಮ್ಮ ತಾಯಿಯ ಬಳಿ ತೆರಳಿ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದರು. ಇದೇ ವೇಳೆ ಮಗನನ್ನು ತಬ್ಬಿಕೊಂಡು ತಾಯಿ ಆತನ ಯಶಸ್ಸಿಗೆ ಆಶೀರ್ವದಿಸಿದ್ದಾರೆ. ಮೇ 15  1964ರಲ್ಲಿ ಜನಿಸಿದ ದಿನೇಶ್ ತ್ರಿಪಾಠಿ 1985ರ ಜುಲೈ 1 ರಂದು ಭಾರತೀಯ ನೌಕಾಪಡೆಯನ್ನು ಸೇರಿದ್ದರು. 39 ವರ್ಷಗಳ ವೃತ್ತಿ ಜೀವನ್ನು ಈಗಾಗಲೇ ಪೂರೈಸಿರುವ ಅವರು ವೃತ್ತಿಜೀವನದುದ್ದಕ್ಕೂ ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್‌ನಲ್ಲಿ ಪರಿಣತಿ ಪಡೆದಿದ್ದಾರೆ. ನೌಕಾ ಸೇನೆಯ ಮುಖ್ಯಸ್ಥನ ಹುದ್ದೆಗೇರುವ ಮೊದಲು ಅವರು ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು.

2ನೇ ಅತ್ಯಾಧುನಿಕ VLF ರೇಡಾರ್ ಕೇಂದ್ರದಿಂದ ಪ್ರಾಣಿ-ಸಸ್ಯ ಸಂಕುಲಕ್ಕೆ ಸಮಸ್ಯೆ ಇಲ್ಲ, ನೌಕಾಪಡೆ ಸ್ಪಷ್ಟನೆ!

ಐಎನ್‌ಎಸ್ ವಿನಾಶ್, ಐಎನ್‌ಎಸ್ ಕಿರ್ಚ್, ಐಎನ್‌ಎಸ್ ತ್ರಿಶೂಲ್ ಮುಂತಾದ ಕಮಾಂಡಿಂಗ್ ಹಡಗುಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಇದರ ಜೊತೆಗೆ ವೆಸ್ಟರ್ನ್ ಫ್ಲೀಟ್‌ನ ಫ್ಲೀಟ್ ಆಪರೇಷನ್ ಆಫೀಸರ್ ಮತ್ತು ನೌಕಾ ಕಾರ್ಯಾಚರಣೆಗಳ ನಿರ್ದೇಶಕರಂತಹ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 

ಇದರ ಜೊತೆಗೆ ಹೆಚ್ಚುವರಿಯಾಗಿ, ಅವರು ವೆಸ್ಟರ್ನ್ ಫ್ಲೀಟ್‌ನ ಫ್ಲೀಟ್ ಆಪರೇಷನ್ ಆಫೀಸರ್, ನೌಕಾ ಕಾರ್ಯಾಚರಣೆಗಳ ನಿರ್ದೇಶಕ, ಪ್ರಧಾನ ನಿರ್ದೇಶಕ ನೆಟ್‌ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳು ಮತ್ತು ಪ್ರಧಾನ ನಿರ್ದೇಶಕ ನೌಕಾ ಯೋಜನೆಗಳಿಗೆ ನೇಮಕಾತಿಯನ್ನು ನಡೆಸಿದ್ದಾರೆ. ರಿಯರ್ ಅಡ್ಮಿರಲ್ ಆಗಿ, ಅವರು ಈಸ್ಟರ್ನ್ ಫ್ಲೀಟ್ ಕಮಾಂಡಿಂಗ್ ಫ್ಲಾಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ಅವರು ಪ್ರತಿಷ್ಠಿತ ಭಾರತೀಯ ನೌಕಾ ಅಕಾಡೆಮಿಯ ಕಮಾಂಡೆಂಟ್, ಎಝಿಮಲಾ ಮತ್ತು ನ್ಯಾಷನಲ್ ಹೆಡ್ ಕ್ವಾರ್ಟ್ರಸ್‌ಗಳಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ಕಡಲ್ಗಳ್ಳರಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನ ಸಿಬ್ಬಂದಿಗಳಿಂದ ಭಾರತ ಜಿಂದಾಬಾದ್ ಘೋಷಣೆ!

ರೇವಾದ ಸೈನಿಕ ಶಾಲೆಯಲ್ಲಿ ಓದಿ ಬಳಿಕ  ಖಡಕ್‌ವಾಸ್ಲಾದಲ್ಲಿ ಎನ್‌ಡಿಎ ಪೂರ್ತಿಗೊಳಿಸಿದ ಅವರು ಅಮೆರಿಕಾದಲ್ಲೂ ಡಿಎಸ್‌ಎಸ್‌ಸಿ ವೆಲ್ಲಿಂಗ್‌ಟನ್ ಮತ್ತು ನೇವಲ್ ವಾರ್ ಕಾಲೇಜ್‌ನಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.

 

Latest Videos
Follow Us:
Download App:
  • android
  • ios