Asianet Suvarna News Asianet Suvarna News

4 ವರ್ಷ ಒಟ್ಟಿಗಿದ್ದ ಶ್ರುತಿ ಹಾಸನ್​-ಶಂತನು ದೂರವಾಗಿದ್ದೇಕೆ? 2ನೇ ಬಾಯ್​ಫ್ರೆಂಡ್​ ಜೊತೆ ನಟಿಗೆ ಏನಾಯ್ತು?

ನಟಿ ಶ್ರುತಿ ಹಾಸನ್ ಅವರು ತಮ್ಮ  ಎರಡನೇ ಗೆಳೆಯ ಶಂತನು ಹಜಾರಿಕಾ ಜೊತೆಗೂ ಬ್ರೇಕಪ್​ ಮಾಡಿಕೊಂಡದ್ದೇಕೆ? ಕಾರಣವೀಗ ಬಹಿರಂಗಗೊಂಡಿದೆ.
 

Santanu Hazarika Responds To Speculations Surrounding BreakUp With Shruti Haasan suc
Author
First Published Apr 30, 2024, 4:50 PM IST

ಬಾಲಿವುಡ್​ ನಟಿ ಶ್ರುತಿ ಹಾಸನ್​ ಮತ್ತು ಶಂತನು ಹಜಾರಿಕಾ ಅವರ ಸಂಬಂಧ, ಲಿವ್​ ಇನ್​ ರಿಲೇಷನ್​ ಮುರಿದು ಬಿದ್ದಿರುವುದು ಕನ್​ಫರ್ಮ್​ ಆಗಿದೆ. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಈ ಮೂಲಕ ಎರಡನೆಯ ಬಾಯ್​ಫ್ರೆಂಡ್​ಗೂ ಶ್ರುತಿ ಗುಡ್​ ಬೈ ಹೇಳಿದ್ದಾರೆ. ಅಂದಹಾಗೆ ಶಂತನು ಅವರು ಶ್ರುತಿ ಹಾಸನ್​ ಅವರ ಎರಡನೆಯ ಬಾಯ್​ಫ್ರೆಂಡ್​. ಇದೀಗ ಇವರ ಜೊತೆಯೂ ಬ್ರೇಕಪ್​ ಆಗಿದೆ ಎನ್ನಲಾಗಿದೆ. ಶ್ರುತಿ  ಅವರು​ ಶಂತನು ಹಜಾರಿಕಾ ಅವರನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದಾಗ,  ಶಂತನು ಕೂಡ ಶ್ರುತಿ ಅವರನ್ನು ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಯಾದಾಗಲೇ ಇವರಿಬ್ಬರೂ ಬ್ರೇಕಪ್​ ಆಗಿರೋ ಸುದ್ದಿ ಹೊರಗಡೆ ಬಂದಿದೆ. ಕೆಲ ತಿಂಗಳ ಹಿಂದೆಯೇ ಇವರಿಬ್ಬರೂ ಪ್ರತ್ಯೇಕ ಆಗಿದ್ದಾರೆ ಎನ್ನಲಾಗಿತ್ತು. ಇದೀಗ ಬ್ರೇಕಪ್​ ಸುದ್ದಿಯನ್ನು ಜೋಡಿಯೇ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ, ಇದರ ಕಾರಣವನ್ನು ಅಭಿಮಾನಿಗಳು ಹುಡುಕುತ್ತಿದ್ದಾರೆ.
 
ಅಷ್ಟಕ್ಕೂ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಂತನು ತಮಗೆ ಇದರ ಬಗ್ಗೆ ಹೇಳಲು ಇಷ್ಟವಿಲ್ಲ ಎಂದಿದ್ದಾರೆ. ಅಸಲಿಗೆ ಇಬ್ಬರಲ್ಲಿ ಒಬ್ಬರಿಗೆ ಈ ಸಂಬಂಧ ಹೀಗೆಯೇ ಮುಂದುವರೆಯಬೇಕು, ಮದುವೆಯೆಂಬ ಬಂಧನದಲ್ಲಿ ಒಳಗಾಗಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಜಗಳವಾಗಿ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಇವರಿಬ್ಬರಲ್ಲಿ ಯಾರು ಮದುವೆಗೆ ಒಪ್ಪಲಿಲ್ಲ ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ. ಆದರೆ ಇದು ಪಕ್ಕಾ ಎಂದೇ ಹೇಳಲಾಗುತ್ತಿದೆ.  ಕೆಲ ತಿಂಗಳ ಹಿಂದೆ ಶ್ರುತಿ ಹಾಸನ್​ ಮದುವೆ ಕುರಿತು ಹೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ,   ಮದುವೆ ಎಂಬ ಪದ ನನಗೆ ತುಂಬಾ ಭಯ ಹುಟ್ಟಿಸುತ್ತದೆ. ನಾನು ನಿಜಕ್ಕೂ ಅದರ ಕುರಿತು ಯೋಚಿಸಲು ಹೋಗುವುದಿಲ್ಲ. ನಾನು ಆತನೊಂದಿಗೆ ಖುಷಿಯಾಗಿದ್ದೇನೆ. ಆತನ ಜತೆ ಕೆಲಸ ಮಾಡುವುದು, ಆತನ ಜತೆ ಸಮಯ ಕಳೆಯುವುದು ನನಗೆ ಖುಷಿ ನೀಡುತ್ತದೆ. ಇತರೆ ಬಹುತೇಕ ಮದುವೆಗಿಂತ ಇದು ಉತ್ತಮವಲ್ಲವೇ ಎಂದಿದ್ದರು. ಮದುವೆಯಾಗುವುದಕ್ಕಿಂತ ಬಾಯ್‌ಫ್ರೆಂಡ್‌ ಜೊತೆ ಸಂಬಂಧದಲ್ಲಿರುವುದೇ ಬೆಸ್ಟ್‌ ಎಂಬ ಅರ್ಥದಲ್ಲಿ ನಟಿ ಹೇಳಿದ್ದರು.   ಹಾಗಿದ್ದರೆ ನಟಿಯೇ ಮದುವೆಗೆ ಒಪ್ಪಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ನಟಿ ಅಮೃತಾ ಆತ್ಮಹತ್ಯೆಗೆ ಭಾರಿ ಟ್ವಿಸ್ಟ್​! ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಸಾವಿನ ರಹಸ್ಯ ಬಯಲು?

ಅದೇನೇ ಇದ್ದರೂ,  ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಸದ್ಯ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ.   'ವಾಲ್ಟೇರ್ ವೆರಯ್ಯ' ಚಿತ್ರದಲ್ಲಿ ಕಾಣಿಸಿಕೊಂಡಿರೋ ನಟಿ ಇದೀಗ 'ಸಲಾರ್'ನ ಭರ್ಜರಿ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಇವರ ಕೈಯಲ್ಲಿ  ಇನ್ನೂ ಅನೇಕ ಯೋಜನೆಗಳು ಇವೆ.  ಇದಲ್ಲದೆ, ಶ್ರುತಿ (Shruti Haasan) ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.  ಇದಕ್ಕೂ ಮುನ್ನ ಇನ್ನೊಬ್ಬರ ಜೊತೆ ಸಂಬಂಧದಲ್ಲಿದ್ದರು ನಟಿ. ಅದು ಕೂಡ ಬ್ರೇಕಪ್​ ಆಗಿತ್ತು. 

 ಮೀ ಟೂ ಅಭಿಯಾನ ಹುಟ್ಟುಹಾಕಿರುವ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​, ಕೆಲ ದಿನಗಳ ಹಿಂದೆ ತಮ್ಮ ಕರಾಳ ಜೀವನದ ಕುರಿತು ಹೇಳಿಕೊಂಡಿದ್ದಾರೆ.  ಅಪ್ಪ ಕಮಲ ಹಾಸನ್​ ಮತ್ತು ಅಮ್ಮ ನಟಿ ಸಾರಿಕಾ ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್​ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ  ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ  ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.

ನಾನೊಬ್ಳು ಭಾರತೀಯ ನಾರಿ... ಕ್ಯಾಮೆರಾ ಎಲ್ಲೆಲ್ಲೋ ಝೂಮ್​ ಮಾಡ್ಬೇಡಿ... ರಾಖಿ ಗರಂ

Latest Videos
Follow Us:
Download App:
  • android
  • ios