ಮಸೀದಿಯೊಂದರ ಗೋಡೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಧಾರ್ಮಿಕ ಘೋಷಣೆಗಳನ್ನು ಬರೆದಿದ್ದು ಕೋಮು ಗಲಭೆಗೆ ಕಾರಣವಾದ ಘಟನೆ ನಡೆದಿದೆ.

ಮುಂಬೈ (ಮಾ.26): ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪ್ರಮುಖ ಮಸೀದಿಯೊಂದರ ಗೋಡೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಧಾರ್ಮಿಕ ಘೋಷಣೆಗಳನ್ನು ಬರೆದಿದ್ದು ಕೋಮು ಗಲಭೆಗೆ ಕಾರಣವಾದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೋಜಶಾಲಾ ಮಸೀದಿ ಮೂಲತಃ ಸರಸ್ವತಿ ದೇಗುಲ: ಖ್ಯಾತ ಇತಿಹಾಸ ತಜ್ಞ ಮೊಹಮ್ಮದ್‌

ಮಜಲ್‌ಗಾಂವ್‌ನ ಮರ್ಕಝಿ ಮಸೀದಿಯ ಗೋಡೆಯ ಮೇಲೆ ಸಂಜೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಶ್ರೀರಾಮ ಎಂದು ಬರೆದಿದ್ದಾನೆ. ಇದನ್ನು ವಿರೋಧಿಸಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂಮರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣವಿದ್ದು, ಪೊಲೀಸರು ನಾಕಾಬಂಧಿ ಹಾಕಿದ್ದಾರೆ.

ಭಾರೀ ಬಿಗಿ ಭದ್ರತೆಯಲ್ಲಿ ವಿವಾದಿತ ಕಮಲ್‌ ಮೌಲಾ ಮಸೀದಿ-ಭೋಜ್‌ಶಾಲಾ ದೇಗುಲ ಸಮೀಕ್ಷೆ ಆರಂಭ

ಸಂಜೆ 5 ಗಂಟೆ ಸುಮಾರಿಗೆ ಕೆಲ ವಿರೋಧಿಗಳು ಧಾರ್ಮಿಕತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಸೀದಿಯ ಗೋಡೆಯ ಮೇಲೆ ಶ್ರೀರಾಮ ಎಂದು ಬರೆದಿದ್ದಾರೆ. ನಾವು ಸೆಕ್ಷನ್ 295 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ನಾವು ದುಷ್ಕರ್ಮಿಯನ್ನು ಪತ್ತೆ ಹಚ್ಚುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಮಜಲಗಾಂವ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಧೀರಜ್ ಕುಮಾರ್ ತಿಳಿಸಿದ್ದಾರೆ.