ರಾಜಸ್ಥಾನದ ಖ್ಯಾತ ಇನ್‌ಫ್ಲುಯೆನ್ಸರ್‌ ಅನಿತಾ ಬಿಷ್ಣೋಯಿ, ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಟ್ರೋಲಿಂಗ್ ಮತ್ತು ವೈಯಕ್ತಿಕ ಒತ್ತಡದಿಂದ ಬೇಸತ್ತು, ಇನ್‌ಸ್ಟಾಗ್ರಾಂ ಲೈವ್‌ನಲ್ಲೇ ವಿಷ ಸೇವಿಸಿ ಆತ್ಮ*ಹ*ತ್ಯೆಗೆ ಯತ್ನಿಸಿದ್ದಾರೆ.

ನಿರಂತರ ಆನ್‌ಲೈನ್ ಟ್ರೋಲಿಂಗ್‌ನಿಂದ ಬೇಸತ್ತು ರಾಜಸ್ಥಾನದ ಇನ್‌ಫ್ಲುಯೆನ್ಸರ್‌ ಅನಿತಾ ಬಿಷ್ಣೋಯಿ ಇನ್‌ಸ್ಟಾಗ್ರಾಂ ಲೈವ್‌ನಲ್ಲೇ ವಿಷ ಸೇವಿಸಿ ಆತ್ಮ*ಹ*ತ್ಯೆಗೆ ಯತ್ನಿಸಿದ್ದಾರೆ. ಮತ್ತೊಬ್ಬ ಇನ್‌ಫ್ಲುಯೆನ್ಸರ್‌ ನೇತೃತ್ವದಲ್ಲಿ ಸಂಘಟಿತ ದಾಳಿ ನಡೆದಿದೆ ಎಂದು ಪತಿ ಆರೋಪಿಸಿದ್ದಾರೆ. ಅನಿತಾ ಸದ್ಯ ಜೋಧ್‌ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಸ್ಥಾನದ ಖ್ಯಾತ ಇನ್‌ಫ್ಲುಯೆನ್ಸರ್‌ ಅನಿತಾ ಬಿಷ್ಣೋಯಿ, ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಟ್ರೋಲಿಂಗ್ ಮತ್ತು ವೈಯಕ್ತಿಕ ಒತ್ತಡದಿಂದ ಬೇಸತ್ತು, ಇನ್‌ಸ್ಟಾಗ್ರಾಂ ಲೈವ್‌ನಲ್ಲೇ ವಿಷ ಸೇವಿಸಿ ಆತ್ಮ*ಹ*ತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಜೋಧ್‌ಪುರದ ಎಂಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ರಾಜಸ್ಥಾನದ ಮತ್ತೊಬ್ಬ ಇನ್‌ಫ್ಲುಯೆನ್ಸರ್‌ನಿಂದ ಅನಿತಾಗೆ ನಿರಂತರ ಕಿರುಕುಳ ಮತ್ತು ಬೆದರಿಕೆಗಳು ಬರುತ್ತಿದ್ದವು ಎಂದು ಅವರ ಪತಿ ಆರೋಪಿಸಿದ್ದಾರೆ.

'ಇನ್ಮುಂದೆ ನೀವು ನನ್ನನ್ನು ನೋಡಲ್ಲ'

ಕಳೆದ ಬುಧವಾರ ಬೆಳಗ್ಗೆ ಇನ್‌ಸ್ಟಾಗ್ರಾಂ ಲೈವ್ ಬಂದ ನಂತರ ಅನಿತಾ ವಿಷ ಸೇವಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಲೈವ್‌ನಲ್ಲಿ ಮಾತನಾಡಿದ್ದ ಅನಿತಾ, "ಕೆಲವರು ನನ್ನ ವಿರುದ್ಧ ಪಿತೂರಿ ನಡೆಸಿ, ನನ್ನ ಹೆಸರು ಕೆಡಿಸುತ್ತಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಒಂದ್ ಮಾತು ಹೇಳ್ತೀನಿ, ಸಾಯೋದು ಸುಲಭವಲ್ಲ, ಆದ್ರೆ ನನ್ನ ಹೆಸರು ಹಾಳು ಮಾಡಿ ನಿಮಗೇನೂ ಸಿಗಲ್ಲ. ಮಾತಾಡೋದಿದ್ರೆ ನೇರವಾಗಿ ಬಂದು ನನ್ನ ಜೊತೆ ಮಾತಾಡಿ. ಇಲ್ಲದಿದ್ರೆ, ಪೊಲೀಸರು ನೋಡಿಕೊಳ್ತಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ನಂತರ, 'ನಿಮ್ಮ ಅಕ್ಕ ಇನ್ಮುಂದೆ ನಿಮಗೆ ಕಾಣಿಸಲ್ಲ' ಎಂಬಂತಹ ಸಂದೇಶವನ್ನು ಅವರು ಹಂಚಿಕೊಂಡಿದ್ದರು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

Scroll to load tweet…

ಸಂಘಟಿತ ದಾಳಿ

"ಮಲರಾಮ್ ಎಂಬ ಮತ್ತೊಬ್ಬ ಕಂಟೆಂಟ್ ಕ್ರಿಯೇಟರ್ ಬಹಳ ದಿನಗಳಿಂದ ಅನಿತಾಳನ್ನು ಟಾರ್ಗೆಟ್ ಮಾಡಿದ್ದ," ಎಂದು ಅನಿತಾ ಪತಿ ದಿನೇಶ್ ಬಿಷ್ಣೋಯಿ ಆರೋಪಿಸಿದ್ದಾರೆ. "ಅನಿತಾ ವಿರುದ್ಧ ಮಾತನಾಡಲು ಆತ ಬೇರೆಯವರಿಗೂ ಪ್ರಚೋದನೆ ನೀಡಿದ್ದ. ಇದೊಂದು ಸಂಘಟಿತ ದಾಳಿಯಾಗಿ ಬದಲಾಗಿತ್ತು," ಎಂದು ದಿನೇಶ್ ಹೇಳಿದ್ದಾರೆ. ನಮ್ಮ ಮಗ ಫೋನ್ ಮಾಡಿ ಹೇಳಿದಾಗಲೇ ನನಗೆ ಈ ವಿಷಯ ತಿಳಿಯಿತು ಎಂದೂ ಅವರು ತಿಳಿಸಿದ್ದಾರೆ. ಅನಿತಾ ಸದ್ಯ ಐಸಿಯುನಲ್ಲಿದ್ದು, ವೈದ್ಯರ ನಿಗಾದಲ್ಲಿದ್ದಾರೆ.

ಸಂಸ್ಕೃತಿ, ಮೌಲ್ಯಗಳು ಮತ್ತು ಸಾಮಾಜಿಕ ಬದಲಾವಣೆಯ ಬಗ್ಗೆ ಸಂದೇಶವಿದ್ದ ವಿಡಿಯೋವೊಂದನ್ನು ಹಂಚಿಕೊಂಡ ನಂತರ ಅನಿತಾ ವಿರುದ್ಧ ಟ್ರೋಲಿಂಗ್ ಶುರುವಾಗಿತ್ತು ಎಂದು ಕುಟುಂಬಸ್ಥರು ನಂಬಿದ್ದಾರೆ. ಅನಿತಾ ಬಿಷ್ಣೋಯಿ ಅವರು ರಾಜಸ್ಥಾನದ ಸಂಪ್ರದಾಯ, ಜಾನಪದ ಸಂಸ್ಕೃತಿ, ಸಾಮಾಜಿಕ ಜಾಗೃತಿ ಮತ್ತು ಸಮುದಾಯದ ಸಮಸ್ಯೆಗಳ ಬಗ್ಗೆ ಕಂಟೆಂಟ್ ಮಾಡುತ್ತಿದ್ದರು. ಇದರಿಂದಾಗಿ ಆನ್‌ಲೈನ್‌ನಲ್ಲಿ ಅವರಿಗೆ ದೊಡ್ಡ ಹೆಸರು ಬಂದಿತ್ತು. ಫೇಸ್‌ಬುಕ್‌ನಲ್ಲಿ ಸುಮಾರು 13 ಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸುಮಾರು 6.5 ಲಕ್ಷ ಫಾಲೋವರ್ಸ್‌ಗಳನ್ನು ಅವರು ಹೊಂದಿದ್ದಾರೆ.