ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್‌ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು.

ಫ್ರಾನ್ಸ್‌ನ ಐಫೆಲ್ ಟವರ್ ಮುಂದೆ ಸೀರೆಯುಟ್ಟು ಭಾರತೀಯ ಮಹಿಳೆಯರ ಗುಂಪೊಂದು ಮಾಡಿದ 'ಕ್ಯಾಟ್‌ವಾಕ್' ರೀಲ್ ಸಖತ್ ವೈರಲ್ ಆಗಿದೆ. ಬೇರೆ ಪ್ರವಾಸಿಗರ ರೀಲ್‌ಗಳಂತೆ ಇಲ್ಲದೆ, ಇವರ ಮುಗ್ಧ ಪರ್ಫಾರ್ಮೆನ್ಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಭಾರತೀಯ ಸಂಸ್ಕೃತಿ ಮತ್ತು ಉಡುಗೆಯ ಬಗ್ಗೆ ಒಳ್ಳೆಯ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್‌ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು. ಯಾಕಂದ್ರೆ, ಪ್ರತಿದಿನ ಸಾವಿರಾರು ರೀಲ್ಸ್ ಅಪ್ಲೋಡ್ ಆಗುತ್ತಿದ್ದು, ಎಲ್ಲವೂ ಒಂದೇ ರೀತಿ ಇರುತ್ತವೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಾರೆ. ಇಂತಹ ಸನ್ನಿವೇಶದ ನಡುವೆಯೇ, ಫ್ರಾನ್ಸ್‌ಗೆ ಪ್ರವಾಸಕ್ಕೆ ಹೋಗಿದ್ದ ಭಾರತೀಯ ಮಹಿಳೆಯರ ಗುಂಪೊಂದು ಐಫೆಲ್ ಟವರ್ ಮುಂದೆ ಮಾಡಿದ ಒಂದು ರೀಲ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಸೀರೆಯುಟ್ಟು ಕ್ಯಾಟ್‌ವಾಕ್

ಸೀರೆ ಉಟ್ಟುಕೊಂಡು ಐಫೆಲ್ ಟವರ್ ಮುಂದೆ ಭಾರತೀಯ ಮಹಿಳೆಯರು ಮಾಡಿದ ಕ್ಯಾಟ್‌ವಾಕ್ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ಅನೇಕರು 'ಶುದ್ಧ ಮುಗ್ಧತೆ' (Pure Innocence) ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿರುವ ಎಲ್ಲರೂ ಮಧ್ಯವಯಸ್ಕ ಮಹಿಳೆಯರು. ವಿಶ್ವದ ಅತ್ಯಂತ ಪ್ರಸಿದ್ಧ ಸ್ಥಳವೊಂದರ ಮುಂದೆ ಒಬ್ಬೊಬ್ಬರಾಗಿ ಸರದಿಯಂತೆ ಕ್ಯಾಮರಾ ಮುಂದೆ ಕ್ಯಾಟ್‌ವಾಕ್ ಮಾಡುವುದನ್ನು ನೋಡಬಹುದು.

ಬೆಂಗಳೂರು ಮೂಲದ ಸೀರೆ ಬೊಟಿಕ್ 'ಧಾನ್ವಿ ಸಿಲ್ಕ್ಸ್' ಈ ಕ್ಲಿಪ್ ಅನ್ನು ಮೊದಲು ಹಂಚಿಕೊಂಡಿದೆ. ಈ ವಿಡಿಯೋ ಇನ್‌ಸ್ಟಾಗ್ರಾಂನಿಂದ ಎಕ್ಸ್‌ (ಹಿಂದಿನ ಟ್ವಿಟರ್) ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಿಗೆ ವೇಗವಾಗಿ ಹರಡಿತು. ವಿದೇಶದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದು ಮತ್ತು ಪ್ರವಾಸಿಗರ ನಡವಳಿಕೆಯ ಬಗ್ಗೆ ಈ ವಿಡಿಯೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

View post on Instagram

ಸೀರೆಯೇ ಇಲ್ಲಿ ಸ್ಟಾರ್

ವಿದೇಶ ಪ್ರವಾಸದಲ್ಲಿ ಭಾರತೀಯ ಪ್ರವಾಸಿಗರು ಗಲಾಟೆ ಮಾಡ್ತಾರೆ, ಬೇರೆಯವರಿಗೆ ತೊಂದರೆ ಕೊಡ್ತಾರೆ ಅನ್ನೋ ಒಂದು ಮಾತು ಸೋಶಿಯಲ್ ಮೀಡಿಯಾದಲ್ಲಿ ಇದೆ. ಇತ್ತೀಚೆಗೆ ಇಂತಹ ಹಲವು ವಿಡಿಯೋಗಳು ವೈರಲ್ ಆಗಿದ್ದವು. ಉದಾಹರಣೆಗೆ, ವಿಯೆಟ್ನಾಂ ಏರ್‌ಪೋರ್ಟ್‌ನಲ್ಲಿ ಕೆಲವರು 'ಗರ್ಬಾ' ನೃತ್ಯ ಮಾಡಿದ್ದ ವಿಡಿಯೋಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ, ಈ ಹೊಸ ವಿಡಿಯೋ ಎಲ್ಲರ ಮನಗೆದ್ದಿದೆ.

ಯಾರೊಬ್ಬರಿಗೂ ತೊಂದರೆ ಕೊಡದೆ, ತಮ್ಮ ಖುಷಿಯನ್ನು ವ್ಯಕ್ತಪಡಿಸಿದ ಈ 'ಇಂಡಿಯನ್ ಅಮ್ಮಂದಿರು' ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಹಲವರು ಭಾರತೀಯ ಸಂಸ್ಕೃತಿ ಮತ್ತು ಉಡುಗೆಯನ್ನು ಹೊಗಳಿ ಬರೆದಿದ್ದಾರೆ. ಅದರಲ್ಲೂ, ಬಣ್ಣಬಣ್ಣದ ಸೀರೆಗಳು ನೋಡುಗರನ್ನು ಹೆಚ್ಚು ಆಕರ್ಷಿಸಿವೆ ಎಂಬುದು ಕಾಮೆಂಟ್‌ಗಳಿಂದ ಸ್ಪಷ್ಟವಾಗಿದೆ.