ಜರ್ಮನಿ ಭೇಟಿಯಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಭಾರತ ವಿರೋಧಿ ಜಾನ್ ಸೊರೋಸ್ ಅವರ ಆಪ್ತೆ ಪ್ರೊ। ಕೆರೊಲಿನಾ ವೊಲ್ ಅವರನ್ನು ಭೇಟಿಯಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾ
ನವದೆಹಲಿ: ಜರ್ಮನಿ ಭೇಟಿಯಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಭಾರತ ವಿರೋಧಿ ಜಾನ್ ಸೊರೋಸ್ ಅವರ ಆಪ್ತೆ ಪ್ರೊ। ಕೆರೊಲಿನಾ ವೊಲ್ ಅವರನ್ನು ಭೇಟಿಯಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.
ಭಾರತದ ಹೆಸರು ಕೆಡಿಸಲು ಅನೇಕ ಬಾರಿ ಸಂಚು
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬರ್ಲಿನ್‌ನ ಹೆರ್ಟಿ ಶಾಲೆಯ ಅಧ್ಯಕ್ಷೆಯೂ ಆದ ವೊಲ್ ಅವರು, ಭಾರತದ ಹೆಸರು ಕೆಡಿಸಲು ಅನೇಕ ಬಾರಿ ಸಂಚು ನಡೆಸಿದ್ದ ಅಮೆರಿಕದ ಕೋಟ್ಯಧಿಪತಿ ಜಾರ್ಜ್ ಸೊರೋಸ್ ಅವರ ಆಪ್ತೆ.
ಯುರೋಪ್ ವಿವಿಗೆ ಹಣ ಒದಗಿಸುತ್ತದೆ
ಸೊರೋಸ್ ಅವರ ಓಪನ್ ಸೊಸೈಟಿ ಪ್ರತಿಷ್ಠಾನವು ವೊಲ್ ಟ್ರಸ್ಟಿ ಆಗಿರುವ ಕೇಂದ್ರೀಯ ಯುರೋಪ್ ವಿವಿಗೆ ಹಣ ಒದಗಿಸುತ್ತದೆ ಎಂದು ಹೇಳಿದ್ದಾರೆ.


