ಪಂಜಾಬ್‌ನ ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್(Inspector General of Police)ಅಮರ್ ಸಿಂಗ್ ಚಹಾಲ್ ಅವರು ತಮ್ಮ ಭದ್ರತಾ ಸಿಬ್ಬಂದಿಯ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.

ಪಂಜಾಬ್‌ನ ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್(Inspector General of Police)ಅಮರ್ ಸಿಂಗ್ ಚಹಾಲ್ ಅವರು ತಮ್ಮ ಭದ್ರತಾ ಸಿಬ್ಬಂದಿಯ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.. 8 ಕೋಟಿಗೂ ಅಧಿಕ ಮೌಲ್ಯದ ಆನ್‌ಲೈನ್ ಮೋಸದ ಬಗ್ಗೆ 12 ಪುಟಗಳ ಪತ್ರ ಬರೆದಿಟ್ಟು ಅವರು ಜೀವಕೊನೆಗೊಳಿಸಲು ಯತ್ನಿಸಿದ್ದಾರೆ. ಪಂಜಾಬ್‌ನ ಪಟಿಯಾಲಾದಲ್ಲಿ ಈ ಘಟನೆ ನಡೆದಿದ್ದು, ಅವರಿಗೆ ಘಟನೆಯಲ್ಲಿ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ನಗರದ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮದೇ ಭದ್ರತಾ ಸಿಬ್ಬಂದಿಯ ಗನ್‌ನಿಂದ ಗುಂಡು ಹಾರಿಸಿಕೊಳ್ಳುವ ಮೊದಲು ಅಮರ್ ಸಿಂಗ್ ಚಹಾಲ್ ಅವರು, 12 ಪುಟಗಳ ಡೆತ್‌ನೋಟ್ ಬರೆದಿದ್ದಾರೆ. ಪಂಜಾಬ್ ಪೊಲೀಸ್ ಡಿಜಿಪಿ ಗೌರವ್ ಯಾದವ್ ಅವರನ್ನು ಉದ್ದೇಶಿಸಿ ಈ ಪತ್ರ ಬರೆದಿದ್ದು, ಆ ಪತ್ರದಲ್ಲಿ 8.10 ಕೋಟಿ ರೂ.ಗಳ ಆನ್‌ಲೈನ್ ವಂಚನೆ ಪ್ರಕರಣದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚಾಹಲ್ ಅವರು ಪಂಜಾಬ್ ಐಜಿ ಹುದ್ದೆಯಿಂದ ನಿವೃತ್ತರಾದಾಗಿನಿಂದ ಪಟಿಯಾಲದಲ್ಲಿ ವಾಸಿಸುತ್ತಿದ್ದರು.

ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡಗಳು ಚಾಹಲ್ ಅವರ ನಿವಾಸಕ್ಕೆ ನೆರವು ನೀಡಲು ಧಾವಿಸಿದವು ಎಂದು ಪಟಿಯಾಲ ಎಸ್‌ಎಸ್‌ಪಿ ವರುಣ್ ಶರ್ಮಾ ಹೇಳಿದ್ದಾರೆ. ನಿವೃತ್ತ ಐಜಿ ಅಮರ್ ಸಿಂಗ್ ಚಾಹಲ್ 2015 ರಲ್ಲಿ ಫರೀದ್‌ಕೋಟ್‌ನಲ್ಲಿ ನಡೆದ ಬೆಹ್ಬಲ್ ಕಲಾನ್ ಮತ್ತು ಕೊಟ್ಕಾಪುರ ಗುಂಡಿನ ದಾಳಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಈ ಘಟನೆಯಲ್ಲಿ ಇಬರು ನಾಗರಿಕರು ಸಾವಿಗೀಡಾಗಿದ್ದರು.

ಇದನ್ನೂ ಓದಿ: ಬೆಡ್ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ: ವೀಡಿಯೋ ವೈರಲ್: ಆಸ್ಪತ್ರೆ ಮುಂದೆ ಪ್ರತಿಭಟನೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 24, 2023 ರಂದು, ಪಂಜಾಬ್ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಫರೀದ್‌ಕೋಟ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತು. ಈ ವಿಶೇಷ ತನಿಖಾ ತಂಡದ ನೇತೃತ್ವವನ್ನು ಆಗಿನ ಎಡಿಜಿಪಿ ಎಲ್.ಕೆ. ಯಾದವ್ ವಹಿಸಿದ್ದರು. ಈ ಆರೋಪ ಪಟ್ಟಿಯಲ್ಲಿ ಹಲವಾರು ಪ್ರಮುಖ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳು ಸೇರಿವೆ ಎಂದು ವರದಿಯಾಗಿದೆ. ಆರೋಪ ಪಟ್ಟಿಯಲ್ಲಿ ಹೆಸರಿಸಲಾದವರಲ್ಲಿ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅವರ ಮಗ ಮತ್ತು ಮಾಜಿ ಗೃಹ ಸಚಿವ ಸುಖ್‌ಬೀರ್ ಸಿಂಗ್ ಬಾದಲ್, ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ, ಐಜಿ ಪರಮರಾಜ್ ಸಿಂಗ್ ಉಮ್ರಾನಂಗಲ್, ಮಾಜಿ ಡಿಐಜಿ ಅಮರ್ ಸಿಂಗ್ ಚಾಹಲ್, ಮಾಜಿ ಎಸ್‌ಎಸ್‌ಪಿ ಸುಖ್‌ಮಿಂದರ್ ಸಿಂಗ್ ಮಾನ್ ಮತ್ತು ಎಸ್‌ಎಸ್‌ಪಿ ಚರಣ್‌ಜಿತ್ ಸಿಂಗ್ ಶರ್ಮಾ ಸೇರಿದ್ದಾರೆ.

ಇದನ್ನೂ ಓದಿ: ಲೇಡಿಸ್ ಕೋಚ್‌ಗೆ ಹತ್ತಿ ಚಲಿಸುವ ರೈಲಿನಿಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಕೆಳಗೆ ತಳ್ಳಿದ್ದ ದುಷ್ಕರ್ಮಿಯ ಬಂಧನ

ಇತ್ತ ಮಾಜಿ ಐಜಿ ಅವರು ಬರೆದ ಡೆತ್‌ನೋಟ್‌ನಲ್ಲಿ ಇರುವ ವಿವರಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.