ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಗೆ ಅಕ್ರಮವಾಗಿ ಹತ್ತಿದ ವ್ಯಕ್ತಿಯೊಬ್ಬ, ವಾಗ್ವಾದದ ಬಳಿಕ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರನ್ನು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ತಳ್ಳಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ ಆಸ್ಪತ್ರೆಗೆ ದಾಖಲಾಗಿದೆ.

ಮುಂಬೈ ಲೋಕಲ್ ರೈಲೊಂದರ ಲೇಡಿಸ್ ಕೋಚ್‌ನಲ್ಲಿ ಪಯಣಿಸುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಳನ್ನು ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ತಳ್ಳಿದ್ದರಿಂದ ಯುವತಿ ಗಾಯಗೊಂಡಂತಹ ಘಟನೆ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 50 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶೇಖ್ ಅಖ್ತರ್ ನವಾಜ್ ಎಂದು ಗುರುತಿಸಲಾಗಿದೆ.

ಈತ ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಗೆ ಹತ್ತಿದ್ದಾನೆ. ಈ ವೇಳೆ ಅಲ್ಲಿ ದೊಡ್ಡ ಗಲಾಟೆಯಾಗಿದ್ದು, ಅಲ್ಲಿದ್ದ ಮಹಿಳೆಯರೆಲ್ಲರೂ ಆತನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆತ ಆ ಕೋಚ್‌ನಲ್ಲಿ ವಿದ್ಯಾರ್ಥಿನಿಯನ್ನು ರೈಲಿನಿಂದ ಕೆಳಗೆ ತಳ್ಳಿದ್ದು, ಆಕೆಗೆ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದೆ ಜಿಆರ್‌ಪಿ ಪೊಲೀಸರು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಗಾಯಾಳು ಹದಿಹರೆಯದ ಯುವತಿಯನ್ನು ನ್ಯೂ ಪನ್ವೇಲ್‌ನ ಉಸರ್ಲಿ ಗ್ರಾಮದ ನಿವಾಸಿ ಶ್ವೇತಾ ಮಹಾದಿಕ್ ಎಂದು ಪನ್ವೇಲ್ ಜಿಆರ್‌ಪಿಯ ಹಿರಿಯ ಇನ್ಸ್‌ಪೆಕ್ಟರ್ ವಿಜಯ್ ತಯಾಡೆ ತಿಳಿಸಿದ್ದಾರೆ. ಗುರುವಾರ, ಶ್ವೇತಾ ಮಹಾದಿಕ್ ಮತ್ತು ಆಕೆಯ ಮಹಿಳಾ ಸ್ನೇಹಿತೆ ಖಾರ್ಘರ್‌ನಲ್ಲಿರುವ ತಮ್ಮ ಕಾಲೇಜಿಗೆ ಹೋಗುವುದಕ್ಕಾಗಿ ಪನ್ವೇಲ್ ನಿಲ್ದಾಣದಲ್ಲಿ ಬೆಳಗ್ಗೆ 7:59 ಕ್ಕೆ ಪನ್ವೇಲ್-ಸಿಎಸ್‌ಎಂಟಿ ರೈಲಿನ ಮಹಿಳಾ ಕೋಚ್‌ಗೆ ಹತ್ತಿದ್ದಾರೆ ಆಗ ಆರೋಪಿ ನವಾಜ್ ಕೂಡ ಮಹಿಳಾ ಕೋಚ್ ಹತ್ತಿದ್ದಾನೆ. ಮಹಿಳಾ ಪ್ರಯಾಣಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಳಗೆ ಇಳಿಯುವಂತೆ ಆತನಿಗೆ ಹೇಳಿದ್ದಾರೆ.

ಶೇಖ್ ಇಳಿಯಲು ಹಿಂಜರಿಯುತ್ತಿದ್ದಂತೆ ರೈಲು ಹೊರಡಲು ಶುರುವಾಗಿದೆ. ಈ ವೇಳೆ ಮಹಿಳಾ ಪ್ರಯಾಣಿಕರು ಮತ್ತು ಶೇಖ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಶೇಖ್ ತಿರುಗಿ ನಿಂತು ಕೋಚ್‌ನ ಫುಟ್‌ಬೋರ್ಡ್ ಕಂಬದ ಬಳಿ ನಿಂತಿದ್ದ ಶ್ವೇತಾ ಮಹಾದಿಕ್ ಅವರನ್ನು ಕೆಳಗೆ ತಳ್ಳಿದ್ದು, ಆಕೆ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ ಕೂಡಲೇ ಮಹಿಳಾ ಪ್ರಯಾಣಿಕರು ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಕಾರ್ಯಾಚರಣೆಗೆ ಇಳಿದ ಪೊಲೀಸರು, ಶೇಖ್ ಅವರನ್ನು ಖಂಡೇಶ್ವರ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್

ಪನ್ವೇಲ್ ರೈಲ್ವೆ ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿ ಯುವತಿ ಶ್ವೇತಾ ಮಹಾದಿಕ್ ಹಳಿಗೆ ಬಿದ್ದಿದ್ದು, ಜಿಆರ್‌ಪಿ ತಂಡವು ಸ್ಥಳವನ್ನು ತಲುಪಲು ಹಳಿಗಳ ಉದ್ದಕ್ಕೂ ನಡೆದುಕೊಂಡು ಹೋಗಿದ್ದರು., ಆದರೆ ಮಹಾದಿಕ್ ಅಲ್ಲಿ ಪತ್ತೆಯಾಗಲಿಲ್ಲ ನಂತರ ಅಲ್ಲಿದ್ದವರನ್ನು ವಿಚಾರಿಸಿದಾಗ, ಕೆಲವು ನಿವಾಸಿಗಳು ಶ್ವೇತಾ ಮಹಾದಿಕ್ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಜಿಆರ್‌ಪಿ ಪೊಲೀಸರು ಆಸ್ಪತ್ರೆಗೆ ಹೋಗಿ ಅವರು ಅಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆಕೆಗೆ ವೈದ್ಯರು ದೇಹದ ಒಳಭಾಗದಲ್ಲಿ ಗಾಯಗಳಾಗಿದೆಯೇ ಎಂದು ತಿಳಿಯಲು ಸಿಟಿ ಸ್ಕ್ಯಾನ್ ಎಕ್ಸ್‌ರೇ ಮಾಡಿಸಿದ್ದಾರೆ ನಂತರ ಆಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ತಾಯಿಯ ಹಿಂದೆ ನಡೆದು ಹೋಗುತ್ತಿದ್ದ 5 ವರ್ಷದ ಬಾಲಕನ ಬೇಟೆಯಾಡಿ ಕೊಂದ ಚಿರತೆ

ಕೊಲೆ ಯತ್ನಕ್ಕಾಗಿ ಬಿಎನ್‌ಎಸ್ ಸೆಕ್ಷನ್ ಅಡಿಯಲ್ಲಿ ಮತ್ತು ಭಾರತೀಯ ರೈಲ್ವೆ ಕಾಯ್ದೆಯಡಿಯಲ್ಲಿ ಆರೋಪಿ ಶೇಖ್ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದೆ. ನಂತರ ಆತನನ್ನು ಬಂಧಿಸಲಾಗಿದೆ.

Scroll to load tweet…