ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ : ಮೋದಿ ಯಮ ನಿಯಮ ವ್ರತದ ವಿಶೇಷತೆಯೇನು?
- 11 ದಿನ ಯಮ ನಿಯಮ ವ್ರತದ ಮತ್ತಷ್ಟು ಅಂಶ ಬಯಲು
- ಪ್ರಧಾನಿಯಿಂದ ಅನ್ನದಾನ, ವಸ್ತ್ರದಾನ, ಗೋ ಪೂಜೆ ಸೇರಿ ಅನೇಕ ಆಚರಣೆ
- ಮೋದಿ ಭೇಟಿ ನೀಡಿದ ಎಲ್ಲ ಮಂದಿರಗಳಿಗೂ ಇದೆ ರಾಮನ ನಂಟು
ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಯಜಮಾನತ್ವ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ಕಠಿಣ ಯಮ ನಿಯಮ ವ್ರತಾಚಾರಣೆ ಮಾಡುತ್ತಿರುವ ಮೋದಿ ನಿತ್ಯ ಗೋವಿನ ಪೂಜೆ, ಅನ್ನದಾನ ಸೇರಿ ಅನೇಕ ಆಚರಣೆಗಳನ್ನು ಮಾಡುತ್ತಿದ್ದಾರೆ ಎಂಬ ಮತ್ತಷ್ಟು ಕುತೂಹಲಕರ ಸಂಗತಿ ತಿಳಿದು ಬಂದಿದೆ.
ವ್ರತಾಚರಣೆ ಮಾಡುತ್ತಿರುವ ಮೋದಿ, ನೆಲದ ಮೇಲೆ ಮಲಗುತ್ತಿದ್ದಾರೆ ಹಾಗೂ ಕೇವಲ ಎಳನೀರು ಮಾತ್ರ ಸೇವಿಸುತ್ತ ಕಠಿಣ ಉಪವಾಸ ಮಾಡುತ್ತಿದ್ದಾರೆ ಎಂಬುದು ತಿಳಿದಿತ್ತು. ಆದರೆ ಇದರೊಂದಿಗೆ ಮೋದಿ, ಶಾಸ್ತ್ರಗಳ ಪ್ರಕಾರ ಗೋ ಪೂಜೆ, ಗೋವಿಗೆ ಆಹಾರ ನೀಡುವುದು, ಅನ್ನದಾನ ಮತ್ತು ವಸ್ತ್ರದಾನ ಸೇರಿದಂತೆ ಇತರ ಅನೇಕ ಆಚರಣೆ ಮಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Pejavara Shree: ಅಯೋಧ್ಯೆ ರಾಮ ಮಂದಿರ ಬಗ್ಗೆ ಪೇಜಾವರ ಶ್ರೀಗಳು ಹೇಳಿದ್ದೇನು..?
ರಾಮನ ನಂಟು:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ಅವರು ಹೋಗುತ್ತಿರುವ ಎಲ್ಲ ದೇವಸ್ಥಾನಗಳು ರಾಮಾಯಣ ಅಥವಾ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳೆಂಬ ಇತಿಹಾಸವನ್ನು ಹೊಂದಿರುವ ದೇವಸ್ಥಾನಗಳೇ ಆಗಿವೆ. ಹೀಗೆ ಮೋದಿ ಭೇಟಿ ನೀಡಿದ ದೇವಸ್ಥಾನಗಳೆಂದರೆ, ರಾಮಕುಂಡ, ನಾಸಿಕ್‌ನ ಕಾಳರಾಮ ದೇವಸ್ಥಾನ, ಲೇಪಾಕ್ಷಿಯ ವೀರ ಭದ್ರೇಶ್ವರ ಮಂದಿರ, ಕೇರಳದ ಗುರುವಾಯೂರು ಹಾಗೂ ಶ್ರೀ ರಾಮಸ್ವಾಮಿ ಮಂದಿರ. ಅಲ್ಲದೇ, ರಾಮನ ನಂಟಿನ ತಮಿಳುನಾಡಿನ ದೇವಸ್ಥಾನಗಳಿಗೂ ಮೋದಿ ಇಂದು ಭೇಟಿ ನೀಡಲಿದ್ದಾರೆ.
ಅಯೋಧ್ಯಾ: ಕರುನಾಡ ಕಲಾವಿದ ಅರುಣ್ ಕೆತ್ತಿದ್ದ ರಾಮಲಲ್ಲಾ ಮೂರ್ತಿಯಲ್ಲೇನಿದೆ ವಿಶೇಷತೆ?
ಮಂದಿರ ಉದ್ಘಾಟನೆ ಸಿದ್ಧತೆಗಾಗಿ 4 ದಿನ ಅಯೋಧ್ಯೆ ಬಂದ್
ಅಯೋಧ್ಯೆ: ರಾಮಲಲ್ಲಾ ವಿರಾಜ್‌ಮಾನ್ ಮೂಲ ಪುಟ್ಟ ವಿಗ್ರಹ ಇರಿಸಲಾಗಿರುವ ಅಯೋಧ್ಯೆಯ ತಾತ್ಕಾಲಿಕ ರಾಮಮಂದಿರವನ್ನೂ ಶುಕ್ರವಾರದಿಂದ ಜ.22ರ ಸೋಮವಾರದವರೆಗೆ 4 ದಿನ ಮುಚ್ಚಲಾಗಿದೆ. ಈ ದಿನಗಳಲ್ಲಿ ಭಕ್ತರಿಗೆ ರಾಮನ ದರ್ಶನ ದೊರೆಯುವುದಿಲ್ಲ. ಇಲ್ಲಿರುವ ವಿಗ್ರಹಗಳನ್ನು ಜ.22ರಂದು ನೂತನ ರಾಮಮಂದಿರದ ಗರ್ಭಗುಡಿಯಲ್ಲಿ ನೂತನ ರಾಮಲಲ್ಲಾನನ್ನು ಪ್ರತಿಷ್ಠಾಪಿಸುವ ಪೀಠದಲ್ಲೇ ಇರಿಸಲಾಗುವುದು.
ಮೂಲವಿಗ್ರಹವೂ ಮುಖ್ಯ ಪೀಠದಲ್ಲೇ ಪ್ರತಿಷ್ಠಾಪನೆ
ಅಯೋಧ್ಯೆ: 1949ರಿಂದಲೂ ಪೂಜಿಸಿಕೊಂಡು ಬರಲಾಗುತ್ತಿರುವ 6 ಇಂಚು ಎತ್ತರವಿರುವ ರಾಮಲಲ್ಲಾ ಮೂರ್ತಿ ಮತ್ತು ರಾಮನ ಸೋದರರಾದ ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತನ ವಿಗ್ರಹಗಳನ್ನು ಕೂಡಾ ನೂತನ ವಿಗ್ರಹ ಕೂರಿಸುವ ಪೀಠದಲ್ಲೇ ಕೂರಿಸಲಾಗುತ್ತದೆ. ಸದ್ಯ ತಾತ್ಕಾಲಿಕ ಮಂದಿರದಲ್ಲಿಟ್ಟು ಪೂಜಿಸಲಾಗುತ್ತಿರುವ ಈ ವಿಗ್ರಹಗಳನ್ನು ಪ್ರಾಣಪ್ರತಿಷ್ಠಾಪನೆಯ ದಿನ ಗರ್ಭಗುಡಿಯಲ್ಲಿ ಕೂರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಮ್‌ಲಲ್ಲಾ ವಿರಾಜ್‌ಮಾನ್ ಮೂರ್ತಿ ಕೇವಲ 6 ಇಂಚು ಎತ್ತರವಿದೆ. ಆದರೆ ರಾಮಲಲ್ಲಾನ ವಿಗ್ರಹ 4.5 ಅಡಿ ಎತ್ತರವಿದೆ. ಜೊತೆಗೆ ಅದನ್ನು ಎತ್ತರದ ಪೀಠದ ಮೇಲೆ ಕೂರಿಸಿರುವ ಕಾರಣ ಅದು ನೆಲದಿಂದ ಸುಮಾರು 8 ಅಡಿ ಎತ್ತರದಲ್ಲಿ ದರ್ಶನ ನೀಡಲಿದೆ.
Ram Mandir: ಅಡ್ವಾಣಿ ಬಂಧನ..ಸರ್ಕಾರ ಪತನ..ಏನಿದರ ರಹಸ್ಯ ? ರಾಜಕೀಯ ಚಿತ್ರಣ ಬದಲಿಸಿತ್ತು ರಾಮ ರಥಯಾತ್ರೆ!
ಮಂದಿರ ಉದ್ಘಾಟನೆ ದಿನ ಬಿಜೆಪಿ ಆಳ್ವಿಕೆ ರಾಜ್ಯಗಳಲ್ಲೆಲ್ಲ ರಜೆ
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಳಿಕ ಅನೇಕ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ರಜೆ ಘೋಷಿಸಿವೆ. ಗೋವಾ ಹಾಗೂ ಮಹಾರಾಷ್ಟ್ರ ಪೂರ್ತಿ ದಿನ ರಜೆ ಘೋಷಿಸಿವೆ. ಮಧ್ಯಪ್ರದೇಶ, ಗುಜರಾತ್, ಹರ್ಯಾಣ, ಉತ್ತರಾಖಂಡ ಹಾಗೂ ತ್ರಿಪುರಾ ರಾಜ್ಯ ಸರ್ಕಾರಗಳು ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಪ್ರಕಟಿಸಿವೆ.
ನೋಡದ ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ್ದೇಗೆ ಅರುಣ್? ಹಾರೋಹಳ್ಳಿ ಕಲ್ಲು ಹಿಂದೂಗಳ ಆರಾಧ್ಯದೈವ ಆಗಿದ್ದೇಗೆ?
22ಕ್ಕೆ ಕರ್ನಾಟಕದಲ್ಲಿ ರಜೆ ನೀಡುವಂತೆ ಸಿಎಂಗೆ ಬಿಜೆಪಿ ಪತ್ರ
ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲು ಈ ತಿಂಗಳ 22ರಂದು ರಾಜ್ಯ ಸರ್ಕಾರ ರಜೆ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಇದೇ ವೇಳೆ ರಜೆ ನೀಡುವಂತೆ ಒತ್ತಾಯಿಸಿ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
500 ವರ್ಷಗಳ ರಾಮಧ್ಯಾನ, ಸಿಂಗಾರವಾಗ್ತಿದೆ ಅಯೋಧ್ಯಾಧಾಮ!