ಅಯೋಧ್ಯಾ: ಕರುನಾಡ ಕಲಾವಿದ ಅರುಣ್ ಕೆತ್ತಿದ್ದ ರಾಮಲಲ್ಲಾ ಮೂರ್ತಿಯಲ್ಲೇನಿದೆ ವಿಶೇಷತೆ?
ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಇದೆ.
ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಸಮೀಪಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ
ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ವಿಗ್ರಹವನ್ನೇ ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ.
ಐದು ವರ್ಷ ಬಾಲಕನ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿ ಪ್ರತಿಮೆಯ ಎತ್ತರ 51 ಇಂಚು. ಅಂದರೆ ಸುಮಾರು 4 ಅಡಿ. ಕೈಯಲ್ಲಿ ಬಲಗೈಯಲ್ಲಿ ಬಾಣ , ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದ್ದಾನೆ.
ರಾಮನ ಬಲಭಾಗದಲ್ಲಿ ನಿಂತಿರುವ ಹನುಮಂತ, ಎಡಭಾಗದಲ್ಲಿ ಗರುಡ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರ ಬಿಂಬಿಸುವ ಕೆತ್ತನೆ ಇದೆ.ಬಾಲರಾಮನ ಮೇಲ್ಗಡೆ ಬ್ರಹ್ಮ, ವಿಷ್ಣು ಮಹೇಶ್ವರ ನೆತ್ತಿಯ ಮೇಲೆ ಸೂರ್ಯನಿದ್ದಾನೆ.
Ayodhya Rama 02
ಬಾಲ ರಾಮನು ಕಾಲಿಗೆ ಗೆಜ್ಜೆ ತೊಟ್ಟಿದ್ದನೆ, ಹೊಯ್ಸಳ ಶೈಲಿಯ ಆಭರಣ ಕೆತ್ತನೆ ಉತ್ತರ ಭಾರತ ಶೈಲಿಯಲ್ಲಿ ಧೋತಿ ತೊಟ್ಟಿದ್ದಾನೆ.