ಕೇರಳದ ಮುನ್ನಾರ್‌ನಲ್ಲಿ 'ಪಡಯಪ್ಪ' ಎಂಬ ಕಾಡಾನೆಯೊಂದು ಕಾರಿನ ಮೇಲೆ ದಾಳಿ ಮಾಡಿದೆ. ಈ ವೇಳೆ ಚಾಲಕನು ಸಮಯಪ್ರಜ್ಞೆ ಮೆರೆದು ಹಾರ್ನ್ ಬಳಸಿ ಆನೆಯ ಗಮನವನ್ನು ಬೇರೆಡೆಗೆ ಸೆಳೆದು, ವಾಹನವನ್ನು ಸುರಕ್ಷಿತವಾಗಿ ಪಾರುಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರನ್ನು ಅಡ್ಡಗಟ್ಟಿ ಮೇಲೆತ್ತಿದ್ದ ಪಡಯಪ್ಪ:

Add Asianetnews Kannada as a Preferred SourcegooglePreferred

ಕೇರಳದ ಪ್ರವಾಸಿ ತಾಣ ಮುನ್ನಾರ್‌ನಲ್ಲಿ ಕಾಡಾನೆಯೊಂದು ಕಾರಿನ ಮೇಲೆ ದಾಳಿಮಾಡಿದ್ದು, ಈ ವೇಳೆ ಚಾಲಕ ಸಮಯಪ್ರಜ್ಞೆ ಮೆರೆದು ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಕೇರಳದ ಮುನ್ನಾರ್‌ನ ವಾಗುವರೈ ಪ್ರದೇಶದಲ್ಲಿ ಭಾನುವಾರ ರಾತ್ರಿ ಪಡಯಪ್ಪ ಎಂಬ ಹೆಸರಿನ ಕಾಡಾನೆ ಕಾರಿನ ಮೇಲೆ ದಾಳಿ ಮಾಡಿದ ನಂತರ ಆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಭೀತಿ ಎದುರಾಗಿದೆ. 

ಮುನ್ನಾರ್‌ನ ವಾಗುವರೈನಲ್ಲಿ ಕಾಡಾನೆ ಹಾವಳಿ:

ಪ್ರತ್ಯಕ್ಷದರ್ಶಿಗಳ ಪ್ರಕಾರ ಆನೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಣಿಸಿಕೊಂಡು ವಾಹನದ ಮೇಲೆ ದಾಳಿ ಮಾಡಿ ಒಳಗಿದ್ದ ಪ್ರಯಾಣಿಕರು ಭಯಬೀಳುವಂತೆ ಮಾಡಿದೆ. ಆನೆ ಹತ್ತಿರ ಬರ್ತಿದ್ದಂತೆ ಕಾರಿನಲ್ಲಿದ್ದವರು ಭಯಗೊಂಡು ಬೊಬ್ಬೆ ಹಾಕಿದ್ದಾರೆ. ಆದರೆ ಕಾರಿನ ಚಾಲಕ ಮಾತ್ರ ಶಾಂತನಾಗಿ ವರ್ತಿಸಿ ಆನೆಯ ಗಮನ ಬೇರೆಡೆ ಸೆಳೆಯಲು ಅವನು ಪದೇ ಪದೇ ಹಾರ್ನ್ ಹಾಕಿದ್ದಾನೆ. ಈ ವೇಳೆ ಆನೆ ಒಂದು ಕ್ಷಣ ಪಕ್ಕಕ್ಕೆ ತಿರುಗಿದ ಸಂದರ್ಭವನ್ನು ನೋಡಿಕೊಂಡು ಕಾರನ್ನು ಪಕ್ಕಕ್ಕೆ ತಿರುಗಿಸಿ ವೇಗವಾಗಿ ಅಲ್ಲಿಂದ ಹೊರಟು ಹೋಗಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: 

ಟ್ರಂಪ್ ಆಡಳಿತದಲ್ಲಿ ದಿವಾಳಿ ಆಯ್ತಾ ಅಮೆರಿಕಾ: ಸರ್ಕಾರಿ ಅಧಿಕಾರಿಗಳಿಗಿನ್ನೂ ಆಗಿಲ್ಲ ವೇತನ: ಎಲಾನ್ ಮಸ್ಕ್ ಹೇಳಿದ್ದೇನು?

ಈ ಪ್ರದೇಶದಲ್ಲಿ ಫೇಮಸ್ ಆಗಿರುವ ಪಡಯಪ್ಪ:
ಈ ಪಡಿಯಪ್ಪ ಆನೆ ಈ ಪ್ರದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಕಾಡಾನೆಯಾಗಿದ್ದು, ಭಾರಿ ಗಾತ್ರದ ಎರಡು ದಂತಗಳನ್ನು ಹೊಂದಿದೆ. ತನ್ನೆರಡು ಬಲಿಷ್ಠ ದಂತಗಳಿಂದ ಆನೆ ಕಾರನ್ನು ಹಿಂದಿನಿಂದ ಎತ್ತುತ್ತಿರುವ ದೃಶ್ಯ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ವಿಮಾನದಲ್ಲಿ ಶವದೊಂದಿಗೆ 13 ಗಂಟೆಗಳ ಪ್ರಯಾಣ ಮಾಡಿದ 331 ಪ್ರಯಾಣಿಕರು