MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಹಮದಾಬಾದ್‌ ಏರ್ ಇಂಡಿಯಾ ದುರಂತ, ಕುಳಿತ ಸ್ಥಿತಿಯಲ್ಲೇ ಏರ್ ಇಂಡಿಯಾ ಕ್ಯಾಪ್ಟನ್ ಶವ ಇತ್ತು: ಪ್ರತ್ಯಕ್ಷದರ್ಶಿ ಹೇಳಿಕೆ

ಅಹಮದಾಬಾದ್‌ ಏರ್ ಇಂಡಿಯಾ ದುರಂತ, ಕುಳಿತ ಸ್ಥಿತಿಯಲ್ಲೇ ಏರ್ ಇಂಡಿಯಾ ಕ್ಯಾಪ್ಟನ್ ಶವ ಇತ್ತು: ಪ್ರತ್ಯಕ್ಷದರ್ಶಿ ಹೇಳಿಕೆ

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಕಂಡ ಆಘಾತಕಾರಿ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹವು,  ಸ್ಟೀರಿಂಗ್ ಹಿಡಿದ ಸ್ಥಿತಿಯಲ್ಲೇ ಇತ್ತು ಎಂದು ಅವರು ವಿವರಿಸಿದ್ದಾರೆ.

3 Min read
Author : Gowthami K
Published : May 21 2026, 12:25 PM IST
Share this Photo Gallery
  • FB
  • TW
  • Linkdin
  • Whatsapp
17
ಸ್ಟೀರಿಂಗ್‌ ಹಿಡಿದ ಸ್ಥಿತಿಯಲ್ಲಿ ಸಭರ್ವಾಲ್ ಶವ
Image Credit : Asianet News

ಸ್ಟೀರಿಂಗ್‌ ಹಿಡಿದ ಸ್ಥಿತಿಯಲ್ಲಿ ಸಭರ್ವಾಲ್ ಶವ

ಅಹಮದಾಬಾದ್‌: ಕಳೆದ ವರ್ಷ ಜೂನ್‌ನಲ್ಲಿ ನಡೆದ ಏರ್ ಇಂಡಿಯಾ AI-171 ವಿಮಾನ ದುರಂತದ ಭೀಕರತೆ ಮತ್ತು ಕಣ್ಣೀರು ತರಿಸುವ ಕಟು ಸತ್ಯಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೂವರು ಕುಟುಂಬ ಸದಸ್ಯರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು, ‘ಅಹಮದಾಬಾದ್‌ನ ಶವಾಗಾರದೊಳಗೆ ವಿಮಾನದ ಕ್ಯಾಪ್ಟನ್‌ನ ಮೃತದೇಹವನ್ನು ನೋಡಿದೆ. ಅದು ಕುಳಿತಿರುವ ಸ್ಥಿತಿಯಲ್ಲಿತ್ತು. ಅವರ ಕೈಗಳು ವಿಮಾನದ ಸ್ಟೀರಿಂಗ್‌ ಅನ್ನು ಹಿಡಿದುಕೊಂಡ ರೀತಿಯಲ್ಲೇ ಇದ್ದವು’ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred
27
ಶವ ನೋಡಿದ್ದಾಗಿ ಮೃತರ ಸಂಬಂಧಿ ಹೇಳಿಕೆ
Image Credit : ANI

ಶವ ನೋಡಿದ್ದಾಗಿ ಮೃತರ ಸಂಬಂಧಿ ಹೇಳಿಕೆ

ದುರಂತದಲ್ಲಿ ಗುಜರಾತ್‌ನ ಖೇಡಾ ಜಿಲ್ಲೆಯ ರೋಮಿನ್‌ ವೋಹ್ರಾ ಎಂಬುವವರ ಕುಟುಂಬದ ಮೂವರು ಮೃತಪಟ್ಟಿದ್ದರು. ಚಿಕ್ಕಮ್ಮ ಯಾಶ್ಮಿನ್, ಲಂಡನ್ ಅಮೆಜಾನ್ ಉದ್ಯೋಗಿಯಾಗಿದ್ದ ಸಹೋದರ ಪರ್ವೇಜ್ ಮತ್ತು ಮೂರು ವರ್ಷದ ಪುಟ್ಟ ಸೊಸೆಯನ್ನು ಕಳೆದುಕೊಂಡರು. ಶವಗಳನ್ನು ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಯ ಶವಾಗಾರದಲ್ಲಿಟ್ಟಾಗ ಕಂಡ ದೃಶ್ಯವನ್ನು ರೋಮಿನ್‌ ಹಂಚಿಕೊಂಡಿದ್ದಾರೆ. ‘ನನ್ನ ಸೋದರ, ಸೋದರನ ಮಗಳು ಮತ್ತು ನನ್ನ ಚಿಕ್ಕಮ್ಮ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಒಂದು ದಿನದ ನಂತರ ನಾನು ಶವಗಳನ್ನು ಗುರುತಿಸಲು ಹೋಗಿದ್ದೆ. ಕ್ಯಾಪ್ಟನ್ ಸುಮೀತ್‌ ಸಭರ್ವಾಲ್ ಅವರ ದೇಹವನ್ನು ಇತರರಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು. ಆ ಸಮಯದಲ್ಲಿ, ದೇಹವು ಸೆಟೆದುಕೊಂಡಿತ್ತು ಮತ್ತು ಕುಳಿತುಕೊಂಡ ಸ್ಥಿತಿಯಲ್ಲಿತ್ತು. ಅವರು ಇನ್ನೂ ಸ್ಟೀರಿಂಗ್‌ ಅನ್ನು ಹಿಡಿದುಕೊಂಡ ರೀತಿಯಲ್ಲೇ ಇದ್ದರು. ಸಮವಸ್ತ್ರವನ್ನು ತೊಟ್ಟಿದ್ದರು. ಹಿಂಭಾಗ ಹೆಚ್ಚು ಸುಟ್ಟುಹೋಗಿತ್ತು. ಮುಂಭಾಗ ಮತ್ತು ಮುಖ ಅಷ್ಟೊಂದು ಸುಟ್ಟುಹೋಗಿರಲಿಲ್ಲ’ ಎಂದರು.

Related Articles

Related image1
260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್!
Related image2
ಟೇಕಾಫ್ ಆಗ್ತಿದ್ದಂತೆ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲರೂ ಸಾವು: ಅಹ್ಮದಾಬಾದ್ ಘಟನೆ ನೆನಪಿಸಿದ ಭಯಾನಕ ದೃಶ್ಯ
37
ಶವಾಗಾರದೊಳಗೆ ಕಂಡ ನರಕಸದೃಶ ದೃಶ್ಯ
Image Credit : Asianet News

ಶವಾಗಾರದೊಳಗೆ ಕಂಡ ನರಕಸದೃಶ ದೃಶ್ಯ

ವೋಹ್ರಾ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ರೋಗಶಾಸ್ತ್ರ ಪ್ರಯೋಗಾಲಯದ ಸಹಾಯಕರಾಗಿ ಕೆಲಸ ಮಾಡಿದ್ದರಿಂದ, ಅವರಿಗೆ ಶವಾಗಾರದೊಳಗೆ ಪ್ರವೇಶ ಸಿಕ್ಕಿತ್ತು. ತಮ್ಮ ಕುಟುಂಬದವರ ಮೃತದೇಹಗಳನ್ನು ಗುರುತಿಸುವ ಆಶಯದೊಂದಿಗೆ ಒಳಗೆ ಹೋದ ವೋಹ್ರಾ ಅವರಿಗೆ ಅಲ್ಲಿ ಕಂಡ ದೃಶ್ಯಗಳು ಜನ್ಮದಲ್ಲಿ ಮರೆಯಲಾಗದ ಆಘಾತವನ್ನು ನೀಡಿವೆ.

"ಅಲ್ಲಿನ ದೃಶ್ಯಗಳು ನರಕದಂತಿದ್ದವು. ನೆಲದ ಮೇಲೆ ನೂರಾರು ಶವಗಳನ್ನು ಅಕ್ಕಪಕ್ಕದಲ್ಲಿ ಇಡಲಾಗಿತ್ತು. ಕತ್ತರಿಸಿದ ತಲೆಗಳು, ಕೈಕಾಲುಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ತನ್ನ ಮಗುವನ್ನು ಎದೆಗೆ ಬಿಗಿದಪ್ಪಿಕೊಂಡ ಸ್ಥಿತಿಯಲ್ಲೇ ಸುಟ್ಟು ಕರಕಲಾಗಿದ್ದ ತಾಯಿಯ ಶವ ಕರುಳು ಹಿಂಡುವಂತಿತ್ತು. ನನ್ನ ಮೂರು ವರ್ಷದ ಸೊಸೆಯ ತಲೆಯನ್ನು ಆಕೆಯ ಛಾಯಾಚಿತ್ರದೊಂದಿಗೆ ಹೊಂದಿಸಲು ನಾನು ನಡೆಸಿದ ಪ್ರಯತ್ನ ತೀವ್ರ ಆಘಾತಕಾರಿಯಾಗಿತ್ತು," ಎಂದು ವೋಹ್ರಾ ನೆನೆದಿದ್ದಾರೆ.

47
ಗಮನ ಸೆಳೆದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮೃತದೇಹ
Image Credit : Getty

ಗಮನ ಸೆಳೆದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮೃತದೇಹ

ಶವಾಗಾರದ ಮೂಲೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದ ವಿಮಾನದ ಮುಖ್ಯ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹ ರೋಮಿನ್ ಅವರ ಗಮನ ಸೆಳೆಯಿತು. ಆ ದೃಶ್ಯ ಇಡೀ ವಿಮಾನ ದುರಂತದ ಕಡೆಯ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತಿತ್ತು. ಮೃತದೇಹವು ಶವಾಗಾರದಲ್ಲೂ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲೇ ಇತ್ತು. ಕ್ಯಾಪ್ಟನ್ ಧರಿಸಿದ್ದ ನಾಲ್ಕು ಚಿನ್ನದ ಪಟ್ಟಿಗಳಿರುವ ಬಿಳಿ ಸಮವಸ್ತ್ರದ ಶರ್ಟ್, ಕಪ್ಪು ಟೈ, ಪ್ಯಾಂಟ್ ಮತ್ತು ಬೂಟುಗಳು ಸಂಪೂರ್ಣವಾಗಿ ಸುಡದೆ ಹಾಗೇ ಇದ್ದವು. ಮೃತರ ಬೆನ್ನಿನ ಭಾಗ ಸುಟ್ಟುಹೋಗಿತ್ತಾದರೂ ಮುಂಭಾಗ ಸುಟ್ಟಿರಲಿಲ್ಲ.

57
ಕರ್ತವ್ಯ ನಿರತ ವೈದ್ಯರೊಬ್ಬರು ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ
Image Credit : ANI

ಕರ್ತವ್ಯ ನಿರತ ವೈದ್ಯರೊಬ್ಬರು ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ

ಅತ್ಯಂತ ಆಶ್ಚರ್ಯಕರ ಮತ್ತು ಆಘಾತಕಾರಿ ವಿಷಯವೆಂದರೆ, ಕ್ಯಾಪ್ಟನ್ ಸಭರ್ವಾಲ್ ಅವರ ಕೈಗಳು ಇನ್ನೂ ವಿಮಾನದ ಸ್ಟೀರಿಂಗ್ ಕಾಲಮ್ (ಯೋಕ್ - Yoke) ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಅಪಘಾತದ ತೀವ್ರತೆಗೆ ಅಥವಾ ರಕ್ಷಣಾ ತಂಡ ಕಾಕ್‌ಪಿಟ್‌ನಿಂದ ಹೊರತೆಗೆಯುವಾಗ ಆ ಸ್ಟೀರಿಂಗ್ ಮುರಿದು ಅವರ ಕೈಯಲ್ಲೇ ಉಳಿದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶವಾಗಾರದಲ್ಲಿದ್ದ ಕರ್ತವ್ಯ ನಿರತ ವೈದ್ಯರೊಬ್ಬರು ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ.

ವೋಹ್ರಾ ಅವರ ಈ ಹೇಳಿಕೆ ನಿಖರವಾಗಿದ್ದರೆ, ಇದು ತನಿಖೆಗೆ ಹೊಸ ಆಯಾಮ ನೀಡಲಿದೆ ಎಂದು ವಾಯುಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಮಾನವು ತಾಂತ್ರಿಕ ದೋಷಕ್ಕೆ ಒಳಗಾದಾಗ ಕ್ಯಾಪ್ಟನ್ ಸಭರ್ವಾಲ್ ಅವರು ಹೆದರಿ ಹಿಂದೆ ಸರಿಯದೆ, ಕೊನೆಯ ಸೆಕೆಂಡಿನವರೆಗೂ ಪ್ರಯಾಣಿಕರ ಜೀವ ಉಳಿಸಲು ವಿಮಾನವನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು ಎಂಬುದಕ್ಕೆ ಇದು ಬಲವಾದ ಸಾಕ್ಷಿಯಾಗಿದೆ.

67
ಪ್ರಾಥಮಿಕ ವರದಿಯಲ್ಲೇನಿದೆ?
Image Credit : Social Media

ಪ್ರಾಥಮಿಕ ವರದಿಯಲ್ಲೇನಿದೆ?

ಕಳೆದ ವರ್ಷ ಜುಲೈ 12 ರಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಸರಬರಾಜಾಗುತ್ತಿದ್ದ ಇಂಧನ ಪೂರೈಕೆಯು ಕೇವಲ ಒಂದು ಸೆಕೆಂಡ್ ಅಂತರದಲ್ಲಿ ಕಡಿತಗೊಂಡಿತ್ತು. ಇದು ಕಾಕ್‌ಪಿಟ್‌ನಲ್ಲಿ ತೀವ್ರ ಗೊಂದಲ ಮತ್ತು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿತ್ತು ಎಂದು ಹೇಳಲಾಗಿತ್ತು.

77
ಒಟ್ಟು 260 ಮಂದಿ ಸಜೀವ ದಹನ
Image Credit : X-twitter

ಒಟ್ಟು 260 ಮಂದಿ ಸಜೀವ ದಹನ

ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಹಮದಾಬಾದ್‌ನ ಬಿ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಭೀಕರ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಹಾಗೂ ನೆಲದ ಮೇಲಿದ್ದ 19 ಜನರು ಸೇರಿದಂತೆ ಒಟ್ಟು 260 ಮಂದಿ ಸಜೀವ ದಹನವಾಗಿದ್ದರು. ಕೇವಲ ಓರ್ವ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಹಮದಾಬಾದ್
ವೈಮಾನಿಕ ದಾಳಿ
ಏರ್ ಇಂಡಿಯಾ
ವಿಮಾನ ಅಪಘಾತ
ಗುಜರಾತ್

Latest Videos
Recommended Stories
Recommended image1
ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್‌ ರೈಲು ಯೋಜನೆ ರದ್ದು, 530 ಕಿಮೀ ಸಿಲ್ವರ್‌ಲೈನ್ ಪ್ರಾಜೆಕ್ಟ್ ಕಮರಿತು
Recommended image2
Genocide: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತ: 'ನರಮೇಧ ನಿಮ್ಮ ಹಳೇ ಚಾಳಿ' ಅಂತ ತರಾಟೆ
Recommended image3
GBA elections: ಮಳೆ, ಸಿಬ್ಬಂದಿ ಕೊರತೆ ಕಾರಣ ಹೇಳಬೇಡಿ; ಜಿಬಿಎ ಚುನಾವಣೆಗೆ ಆ.31 ಡೆಡ್‌ಲೈನ್ ಕೊಟ್ಟ ಸುಪ್ರೀಂ!
Related Stories
Recommended image1
260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್!
Recommended image2
ಟೇಕಾಫ್ ಆಗ್ತಿದ್ದಂತೆ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲರೂ ಸಾವು: ಅಹ್ಮದಾಬಾದ್ ಘಟನೆ ನೆನಪಿಸಿದ ಭಯಾನಕ ದೃಶ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved