ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಭಾರತೀಯ ನಾಗರಿಕರು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಭಾರತೀಯ ಸೇನೆ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ತಡೆಯುತ್ತಿದೆ. ಇದು ಯುದ್ಧವಲ್ಲ, ಘರ್ಷಣೆ ಮಾತ್ರ. ಯುದ್ಧ ಘೋಷಣೆಗೆ ರಾಷ್ಟ್ರಪತಿಗಳ ಅನುಮೋದನೆ ಅಗತ್ಯ.

ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಹಿಂದೂಗಳನ್ನು ಟಾರ್ಗೆಟ್​ ಮಾಡಿಕೊಂಡು ನಡೆದ ಭಯೋತ್ಪಾದನಾ ದಾಳಿಗೆ ಉತ್ತರವಾಗಿ ಭಾರತವು ಆಪರೇಷನ್​ ಸಿಂದೂರದ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಟಾರ್ಗೆಟ್​ ಮಾಡಿ ಇದಾಗಲೇ ಅವರಿಗೆ ಪ್ರತ್ಯುತ್ತರ ಕೊಟ್ಟಾಗಿದೆ. ಆದರೆ ಹೇಳಿ ಕೇಳಿ ಅದು ಪಾಪಿಸ್ತಾನ! ತನ್ನ ದೇಶದಲ್ಲಿ ಉಗ್ರರೇ ಇಲ್ಲ ಎಂದು ಹೇಳುತ್ತಿರುವ ಪಾಕಿಸ್ತಾನ, ತನ್ನ ದೇಶದ ಉಗ್ರರು ಸಾಯುತ್ತಿರುವುದನ್ನು ನೋಡಲಾಗದೇ ಭಾರತದ ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇದಾಗಲೇ ಹಲವು ಜೀವಗಳನ್ನು ಬಲಿಪಡೆದಿದೆ. ಅದು ಅಷ್ಟು ಮಾಡಿದ ಮೇಲೆ ಭಾರತ ಸುಮ್ಮನೆ ಇರತ್ತಾ? ಆದರೂ ಕಾನೂನು, ಮಾನವೀಯತೆ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಳ್ಳುವುದು ಭಾರತೀಯ ಸೇನೆಗೆ ಮೊದಲಿನಿಂದ ಇರುವ ವರ. ಆದ್ದರಿಂದಲೇ ಇನ್ನೂ ಕಾರ್ಯಾಚರಣೆಯನ್ನು ಮುಂದುವರೆಸಿ ಉಗ್ರರ ನೆಲೆಗಳನ್ನೇ ಟಾರ್ಗೆಟ್​ ಮಾಡುವುದರ ಜೊತೆಗೆ, ಪಾಕಿಸ್ತಾನದ ಡ್ರೋನ್​, ಕ್ಷಿಪಣಿಗಳನ್ನು ಆಕಾಶದಲ್ಲಿಯೇ ಉಡೀಸ್​​ ಮಾಡುತ್ತಿದೆ.

ಇವೆಲ್ಲ ಆಗುತ್ತಿದ್ದಂತೆಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಶುರುವಾಗಿಬಿಟ್ಟಿದೆ ಎಂದು ಬಹುತೇಕ ಮಂದಿ ಅಂದುಕೊಳ್ಳುತ್ತಿದ್ದಾರೆ. ಆದರೆ ನಿಜಕ್ಕೂ ಇದು ಯುದ್ಧ ಅಲ್ಲ. ಕಾನೂನು, ಸಂವಿಧಾನದ ಪ್ರಕಾರ ಹೋದರೆ, ಈಗ ನಡೆಯುತ್ತಿರುವುದು ಘರ್ಷಣೆ, ಸಂಘರ್ಷ ಅಷ್ಟೇ. ಇದನ್ನು ಯುದ್ಧ ಎನ್ನಲಾಗದು. ಏಕೆಂದರೆ ಎರಡು ದೇಶಗಳ ನಡುವೆ ನಡೆಯುತ್ತಿರುವುದು ಯುದ್ಧ ಎಂದು ಹೇಳಬೇಕಾದರೆ ಅದಕ್ಕೆ ಅದರದ್ದೇ ಆದ ಹಲವು ನಿಯಮಗಳು ಇವೆ. ಇಲ್ಲಿ ಅವುಗಳ ಬಗ್ಗೆ ಕೆಲವು ಮಾಹಿತಿ ನೀಡಲಾಗಿದೆ.

Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್​

ಎರಡು ದೇಶಗಳ ನಡುವೆ ನಡೆಯುತ್ತಿರುವುದು ಯುದ್ಧ ಎಂದು ಘೋಷಿಸುವುದು ರಾಷ್ಟ್ರಪತಿಗಳು. ಅದಕ್ಕೆ ಸಂವಿಧಾನದ ಅಡಿ ಕೆಲವೊಂದು ನಿಯಮಗಳು ಇವೆ. ಈ ಸಂದರ್ಭದಲ್ಲಿ ಸಂವಿಧಾನದ ಆರ್ಟಿಕಲ್​ 352 ರ ಅಡಿಯಲ್ಲಿ ರಾಷ್ಟ್ರಪತಿಗಳು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಯುದ್ಧ ಆರಂಭ ಎಂದು ಸಾರಬಹುದು. ಏಕೆಂದರೆ, ಭಾರತದ ಸಂವಿಧಾನದ ಪ್ರಕಾರ, ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವವರು ರಾಷ್ಟ್ರಪತಿಗಳು. ಇದರಿಂದ ಯುದ್ಧ ಘೋಷಿಸುವ ಅಧಿಕಾರ ಅವರಿಗಿದೆ. ಹಾಗೆಂದು ಏಕಾಏಕಿ ರಾಷ್ಟ್ರಪತಿ ಸ್ಥಾನದಲ್ಲಿ ಇರುವವರು ಈ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆ ಸಂದರ್ಭದಲ್ಲಿ ಪ್ರಧಾನಿ ಮತ್ತು ಸಚಿವ ಸಂಪುಟದ ಸದಸ್ಯರು ಯಾರು ಇರುತ್ತಾರೆಯೋ ಅವರ ಸಲಹೆ ಪಡೆದು, ಆ ಬಗ್ಗೆ ಚರ್ಚೆ ನಡೆಯುತ್ತದೆ. ಎಲ್ಲರ ಒಪ್ಪಿಗೆ ಪಡೆದ ಮೇಲಷ್ಟೇ ಯುದ್ಧ ಎಂದು ಘೋಷಿಸಲಾಗುತ್ತದೆ. 

ಈ ಸಚಿವ ಸಂಪುಟಕ್ಕೆ ಅಂದು ಯಾರು ದೇಶದ ಪ್ರಧಾನಿ ಇರುತ್ತಾರೆಯೋ ಅವರು ನೇತೃತ್ವ ವಹಿಸುತ್ತಾರೆ. ಜೊತೆಗೆ, ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯರು ಅನುಮತಿ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ, ನಡೆಯುವ ಪ್ರಕ್ರಿಯೆಗಳು ಹೀಗಿವೆ. ಮೊದಲಿಗೆ ಸಚಿವ ಸಂಪುಟವು ರಾಷ್ಟ್ರಪತಿಗಳಿಗೆ ಲಿಖಿತ ಶಿಫಾರಸನ್ನು ಕಳುಹಿಸಬೇಕಾಗುತ್ತದೆ. ಬಳಿಕ ರಾಷ್ಟ್ರಪತಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುತ್ತಾರೆ. ಈ ಘೋಷಣೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ, ಇದಾದ ಬಳಿಕ ಅನುಮೋದನೆಗೆ ಒಂದು ತಿಂಗಳು ಇರುತ್ತದೆ. ಸಂಸತ್ತಿನ ಅನುಮೋದನೆ ಪಡೆದ ನಂತರ, ಇದು 6 ತಿಂಗಳವರೆಗೆ ಪರಿಣಾಮಕಾರಿಯಾಗಿರುತ್ತದೆ ಮತ್ತು ಅದನ್ನು ಮತ್ತಷ್ಟು ವಿಸ್ತರಿಸುವ ಅಧಿಕಾರ ಇರುತ್ತದೆ. ಆದ್ದರಿಂದ ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವುದು ಯುದ್ಧವಲ್ಲ. ಅದು ಯುದ್ಧದ ರೂಪದಲ್ಲಿ ಇದ್ದರೂ ಅಧಿಕೃತವಾಗಿ ಯುದ್ಧ ಎನ್ನುವಂತಿಲ್ಲ. ಅದು ಯುದ್ಧ ಎಂದು ಘೋಷಣೆಯಾದರೆ, ಪರಿಸ್ಥಿತಿ ಇನ್ನೂ ಭಯಾನಕವಾಗಿರುತ್ತದೆ. 

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!