ಪಾಕಿಸ್ತಾನದ ಪೆಹಲ್ಗಾಮ್ ದಾಳಿಗೆ ಭಾರತ ಪ್ರತ್ಯುತ್ತರ ನೀಡುತ್ತಿದ್ದು, ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನ ಪ್ರತಿ ದಾಳಿ ನಡೆಸುತ್ತಿದ್ದು, ಯುದ್ಧದ ಭೀತಿ ಎದುರಾಗಿದೆ. ಕರ್ತವ್ಯಕ್ಕೆ ಮರಳುತ್ತಿರುವ ಯೋಧರು ದೇಶರಕ್ಷಣೆಗಾಗಿ ಪ್ರಾಣಾರ್ಪಣೆಗೆ ಸಿದ್ಧರಿದ್ದಾರೆ. ಭಾರತದ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಪಾಪಿ ಪಾಕಿಸ್ತಾನದ ಪಾಪದ ಕೊಡ ತುಂಬಿದೆ. ತನ್ನ ದೇಶದ ಸರ್ವನಾಶಕ್ಕೆ ತಾನೇ ಹಳ್ಳತೋಡಿಕೊಂಡಿದೆ. ಇಷ್ಟು ವರ್ಷಗಳವರೆಗೆ ತಾಳ್ಮೆಯಿಂದ ಇದ್ದ ಭಾರತೀಯರನ್ನು ಕೆಣಕುವ ಮೂಲಕ ನಾಮಾವಶೇಷವಾಗುವತ್ತ ಹೊರಟಿದೆ. ಭಾರತೀಯರಿಗೆ ಏನು ಮಾಡಿದರೂ ಅವರು ಸುಮ್ಮನಿರುತ್ತಾರೆ ಎಂದುಕೊಂಡಿರುವ ಪಾಕಿಸ್ತಾನಕ್ಕೆ ಕಾಶ್ಮೀರದ ಪೆಹಲ್ಗಾಮ್​ ದಾಳಿ ಭಾರಿ ತೊಂದರೆಗೆ ಸಿಲುಕಿದೆ. ತನ್ನ ದೇಶದಲ್ಲಿ ಉಗ್ರರೇ ಇಲ್ಲ, ಸುಖಾಸುಮ್ಮನೆ ಭಾರತ ತಮ್ಮ ಮೇಲೆ ದಾಳಿ ಮಾಡಲು ಬರುತ್ತಿದೆ ಎಂದು ಹೇಳಿಕೊಂಡು ತಿರುಗುವ ಸ್ಥಿತಿ ಬಂದಿದೆ. ಇದಾಗಲೇ ಘಟಾನುಘಟಿ ನಾಯಕರು ಸುರಕ್ಷಿತ ತಾಣಗಳಿಗೆ ತಮ್ಮ ಕುಟುಂಬವನ್ನು ಸ್ಥಳಾಂತರಿಸುತ್ತಿದ್ದಾರೆ. ಕೇವಲ ಪೆಹಲ್ಗಾಮ್​ ದಾಳಿಯನ್ನು ಗುರಿಯಾಗಿಸಿಕೊಂಡು ಉಗ್ರರ ನೆಲೆಗಳನ್ನು ಭಾರತ ಧ್ವಂಸಗೊಳಿಸಿದರೆ ಅಲ್ಲಿಗೆ ಸುಮ್ಮನಿರದ ಪಾಕಿಸ್ತಾನ ಕಾಲು ಕೆರೆದು ಜಗಳಕ್ಕೆ ಬಂದಿದೆ. ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದೆ.

ಇದಕ್ಕೆ ತಕ್ಕ ಉತ್ತರವನ್ನು ಭಾರತ ನೀಡುತ್ತಲೇ ಇದೆ. ಕೊನೆಗೆ ವಿಜಯದ ನಗು ಬೀರುವುದು ಭಾರತವೇ ಎನ್ನುವುದು ಇಡೀ ವಿಶ್ವಕ್ಕೇ ತಿಳಿದಿರುವ ವಿಷಯ. ಆದರೆ ಇದರ ನಡುವೆಯೇ ಅದೆಷ್ಟು ರಕ್ತಪಾತಗಳು ನಡೆಯುತ್ತವೆಯೋ, ಅದೆಷ್ಟು ಯೋಧರು ಹುತಾತ್ಮರಾಗಬೇಕಾಗುತ್ತದೆಯೋ ಆ ಕಾಲವೇ ನಿರ್ಧರಿಸಬೇಕಿದೆ. ಎಲ್ಲಿ, ಯಾವಾಗ ಏನು ಬೇಕಾದರೂ ಆಗುವ ಸ್ಥಿತಿ ಇದೆ. ಆದರೆ ಜನರು ನೆಮ್ಮದಿಯಿಂದ ಕಾಲ ಕಳೆಯಲು ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಲೇ ಇರುತ್ತಾರೆ. ಆದರೆ ಅವರಿಗೆ ಇದು ದೇಶಪ್ರೇಮ, ದೇಶಪ್ರೇಮದ ಮಾತು, ಭಾರತ ಮಾತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವ ರೀತಿ ಮಾತ್ರ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 

ಹದ್ದುಗಳಿಂದ ವೈರಿ ದೇಶದ ಡ್ರೋನ್​ಗಳ ಬೇಟೆ- ಆಕಾಶದಲ್ಲೇ ಉಡೀಸ್​: ರೋಚಕ ವಿಡಿಯೋ ವೈರಲ್​

ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದಾಗಲೇ ಭಾರತೀಯ ಯೋಧರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳಲಾಗಿದೆ. ರಜೆಯ ಮೇಲೆ ತೆರಳಿದ್ದವರಿಗೂ ಬುಲಾವ್​ ಬಂದಿದೆ. ಅಂಥ ಒಬ್ಬ ಯೋಧ ಆಡಿದ ಮಾತು, ಅವರ ಆತ್ಮಸ್ಥೈರ್ಯದ ನುಡಿಗಳು ಎಲ್ಲರ ಕಂಬನಿಯನ್ನು ತೇವ ಮಾಡುವುದು ನಿಜ. ಅವರೇ ಹೇಳಿದಂತೆ, 'ರಜೆಯ ಮೇಲೆ ಮನೆಗೆ ಬಂದಿದ್ದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆ ಹೆಚ್ಚಾದ ಹಿನ್ನೆಲೆಯಲ್ಲಿ, ಮರಳಿ ಕೆಲಸಕ್ಕೆ ಹೊರಟಿದ್ದೇನೆ. ರಜೆ ರದ್ದಾಗಿದೆ, ಅಲ್ಲಿ ಸಂಘರ್ಷ ಮುಂದುವರೆದಿದೆ. ನಾನು ವಾಪಸ್​ ಬರುತ್ತೇನೋ, ಇಲ್ಲವೊ ಎನ್ನುವುದು ಗೊತ್ತಿಲ್ಲ. ಆದರೆ ಒಂದಂತೂ ಹೇಳಬಲ್ಲೆ... ಭಾರತಕ್ಕೆ ಏನೂ ಆಗಲ್ಲ. ಭಾರತ ಸದಾ ಸುರಕ್ಷಿತವಾಗಿಯೇ ಇರುತ್ತದೆ. ಶತ್ರುಗಳ ನಾಶವಾಗುತ್ತದೆ. ಹಿಂದೆ ಕಾರ್ಗಿಲ್​ ಯುದ್ಧದಲ್ಲಿಯೂ ಹೀಗೆಯೇ ಆಗಿತ್ತು. ಕೊನೆಯದಾಗಿ ಹರ್​ ಹರ್​ ಮಹಾದೇವ ಮಂತ್ರ ಮೊಳಗಿತ್ತು, ಈಗಲೂ ಹಾಗೆಯೇ ಆಗುತ್ತದೆ. ಆದರೆ ನಾನು ವಾಪಸ್​ ಬರುತ್ತೇನೋ ಗೊತ್ತಿಲ್ಲ...' ಎಂದು ಐಸ್​ಕ್ರೀಂ ತಿನ್ನುತ್ತ, ಐಸ್​ಕ್ರೀಂನಷ್ಟೇ ಕೂಲ್​ ಆಗಿ ಹೇಳಿದ್ದಾರೆ ಭಾರತದ ಯೋಧ. 

ಈ ಯೋಧನ ಮುಖದಲ್ಲಿ ದೇಶಪ್ರೇಮ ಅದೆಷ್ಟರ ಮಟ್ಟಿಗೆ ಇದೆ ಎನ್ನುವುದು ಅವರ ಮಾತಿನಲ್ಲಿಯೇ ತಿಳಿಯುತ್ತದೆ. ದೇಶಪ್ರೇಮದ ಬಗ್ಗೆ ಭಾಷಣ ಬೀಗುತ್ತಾ ಇರುವವರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೇಶಪ್ರೇಮ ಮೂಡಿಸುವ ದೊಡ್ಡ ವರ್ಗವೇ ಇದೆ. ಆದರೆ ಗಡಿಯಲ್ಲಿ ನಿಂತು ಶತ್ರುಗಳ ಜೊತೆ ಹೋರಾಡಿ ಜನರ ಜೀವವನ್ನು ಕಾಪಾಡುವ ಪಣ ತೊಟ್ಟ ಇಂಥ ಯೋಧರಿಗೆ ಅದೆಷ್ಟು ನಮನ ಸಲ್ಲಿಸಿದರೂ ಸಾಲದು. 

Operation Sindoor: ನಿಜವಾಗಿಯೂ ಯುದ್ಧ ಶುರು ಯಾವಾಗ? ಗೊತ್ತಾಗೋದು ಹೇಗೆ? ಇಲ್ಲಿದೆ ಡಿಟೇಲ್ಸ್​...

View post on Instagram