ಡ್ರೋನ್ ದಾಳಿಗಳನ್ನು ಎದುರಿಸಲು ಭಾರತೀಯ ಸೇನೆ ಹದ್ದುಗಳಿಗೆ ತರಬೇತಿ ನೀಡುತ್ತಿದೆ. ಡ್ರೋನ್‌ಗಳನ್ನು ಬೇಟೆಯೆಂದು ಗುರುತಿಸಿ ಹೊಡೆದುರುಳಿಸಲು ಹದ್ದುಗಳಿಗೆ ಕಲಿಸಲಾಗುತ್ತಿದೆ. ಈ ತಂತ್ರಗಾರಿಕೆಯನ್ನು ಇತರ ದೇಶಗಳೂ ಬಳಸುತ್ತಿವೆ. ಭಾರತ-ಅಮೆರಿಕ ಜಂಟಿ ಸಮರಾಭ್ಯಾಸದಲ್ಲಿ ಈ ತಂತ್ರ ಯಶಸ್ವಿಯಾಗಿದೆ. ಗಡಿಭಾಗದಲ್ಲಿ ಮಾದಕವಸ್ತು, ಶಸ್ತ್ರಾಸ್ತ್ರ ಕಳ್ಳಸಾಗಣೆ ನಿಯಂತ್ರಿಸಲು ಹದ್ದುಗಳನ್ನು ಬಳಸುವ ಯೋಜನೆಯಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನವು ತನ್ನ ಡ್ರೋನ್‌ಗಳ ಮೂಲಕ ಭಾರತೀಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಇವುಗಳನ್ನು ಭಾರತೀಯ ಸೇನೆ ಇದಾಗಲೇ ಧ್ವಂಸಗೊಳಿಸಿ ಪಾಕಿಗಳು ಮುಟ್ಟಿಕೊಳ್ಳುವಂಥ ತಿರುಗೇಟು ನೀಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ, ವೈರಿಗಳ ಡ್ರೋನ್‌ಗಳನ್ನು ಧ್ವಂಸಗೊಳಿಸಲು ಭಾರತೀಯ ಸೇನೆ ಹದ್ದುಗಳಿಗೂ ತರಬೇತಿ ನೀಡುವ ರೋಚಕ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗ ನಡೆಯುತ್ತಿರುವ ಭಾರತ- ಪಾಕ್ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನೆ ಹದ್ದುಗಳ ಬಳಕೆ ಮಾಡುತ್ತಿಲ್ಲವಾದರೂ, ಸೇನೆ, ಹೀಗೂ ಪಕ್ಷಿಗಳನ್ನು ಆಯುಧವನ್ನಾಗಿಸಿಕೊಂಡಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಸೇನೆಯಲ್ಲಿ ನಾಯಿಗಳಿಗೆ ಪ್ರಮುಖ ಪಾತ್ರ ಇರುವುದು ತಿಳಿದೇ ಇದೆ. ಆದರೆ ಪಕ್ಷಿಯ ವಿಷಯಕ್ಕೆ ಬಂದರೆ ಹದ್ದುಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗೆಂದು ಇದು ಭಾರತದಲ್ಲಿ ಮಾತ್ರವಲ್ಲದೇ, ಹಲವು ದೇಶಗಳಲ್ಲಿಯೂ ಡ್ರೋನ್ ಧ್ವಂಸಗೊಳಿಸಲು ಹದ್ದುಗಳನ್ನು ಬಳಸಿಕೊಳ್ಳುವ ಪದ್ಧತಿ ಇದೆ. ಅವುಗಳಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ. ಡಚ್ ಪೊಲೀಸರು 2016 ರಿಂದ ಡ್ರೋನ್‌ಗಳನ್ನು ಹೊಡೆದುರುಳಿಸಲು ಹದ್ದುಗಳ ಬಳಕೆ ಮಾಡುತ್ತಿದ್ದರು, ಅಲ್ಲಿಂದಲೇ ಇದು ಆರಂಭವಾಗಿದೆ ಎನ್ನಲಾಗುತ್ತಿದೆ. ತರಬೇತಿ ನೀಡುವ ಸಂದರ್ಭದಲ್ಲಿ, ಹಾರುವ ಯಂತ್ರವಾಗಿರುವ ಡ್ರೋನ್ ಅನ್ನು ಬೇಟೆ ಎಂದು ಗುರುತಿಸಬೇಕು ಎನ್ನುವುದನ್ನು ಮೊದಲಿಗೆ ಹದ್ದುಗಳಿಗೆ ಕಲಿಸಲಾಗುತ್ತದೆ. ಅದು ತನ್ನ ಬೇಟೆ ಎಂದು ಹದ್ದುಗಳಿಗೆ ಮೊದಲು ಮನವರಿಕೆ ಮಾಡಿಸಲಾಗುತ್ತದೆ. ಅದೇ ಮಾದರಿಯಲ್ಲಿ ತರಬೇತಿ ನೀಡಲಾಗುತ್ತದೆ.
Operation Sindoor: ನಿಜವಾಗಿಯೂ ಯುದ್ಧ ಶುರು ಯಾವಾಗ? ಗೊತ್ತಾಗೋದು ಹೇಗೆ? ಇಲ್ಲಿದೆ ಡಿಟೇಲ್ಸ್...
ಅಲ್ಲಿ ಹಾರಾಡುತ್ತಿರುವುದು ತನ್ನ ಬೇಟೆ ಎಂದು ಗುರುತಿಸುವ ಹದ್ದುಗಳು ಅವುಗಳ ಬೇಟೆಗೆ ಸನ್ನದ್ಧವಾಗಿ ಅವುಗಳನ್ನು ಸುಲಭದಲ್ಲಿ ಹೊಡೆದುರುಳಿಸುತ್ತದೆ. ಇದಾಗಲೇ ಕೆಲವು ದೇಶಗಳಲ್ಲಿ ಹದ್ದುಗಳ ಬಳಕೆ ಮಾಡಿಕೊಂಡಿದ್ದು, ಶತ್ರುಗಳ ಡ್ರೋನ್ ಉರುಳಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ. ಕುತೂಹಲದ ವಿಷಯ ಏನೆಂದರೆ, ಇಲ್ಲಿಯವರೆಗೆ ಯಾವುದೇ ಹದ್ದುಗಳೂ ಗಾಯಗೊಂಡಿಲ್ಲ. 2020ರಿಂದ, ಗಮನಾರ್ಹ ಸಂಖ್ಯೆಯ ಪಕ್ಷಿಗಳು ಈ ಕಾರ್ಯಾಚರಣೆಗಾಗಿ ತರಬೇತಿಯಲ್ಲಿ ಭಾಗವಹಿಸುತ್ತಿವೆ. ಇದನ್ನು ಹೇಗೆ ವಿಡಿಯೋ ಮಾಡಲಾಗಿದೆ ಎನ್ನುವುದು ಕೂಡ ಕುತೂಹಲಕಾರಿಯಾಗಿದೆ. ಹದ್ದುಗಳ ತಲೆಗಳಿಗೆ ವಿಡಿಯೋ ಕ್ಯಾಮೆರಾ ಫಿಕ್ಸ್ ಮಾಡಲಾಗುತ್ತದೆ. ಇದರಿಂದಾಗಿ ಅದು ಹೇಗೆ ಡ್ರೋನ್‌ಗಳ ಮೇಲೆ ದಾಳಿ ಮಾಡುತ್ತದೆ ಎನ್ನುವುದು ತಿಳಿಯಬಹುದು. ಪಕ್ಷಿಗಳ ಕಾಲುಗಳಿಗೆ ಬಲೆಯನ್ನು ಕಟ್ಟಲಾಗುತ್ತದೆ. ಅದು ಡ್ರೋನ್ ಬಳಿಗೆ ಹೋದಾಗ ಡ್ರೋನ್‌ನ ರೆಕ್ಕೆಗಳನ್ನು ಹಿಡಿಯುತ್ತದೆ ಮತ್ತು ಅದನ್ನು ಬೇರೆ ಸ್ಥಳಕ್ಕೆ ಒಯ್ಯುತ್ತದೆ. ಸಣ್ಣ ಕ್ಯಾಮೆರಾವನ್ನು ಲ್ಯಾಪ್‌ಟಾಪ್‌ಗೆ ಜೋಡಿಸಲಾಗಿದೆ ಮತ್ತು ಕಣ್ಗಾವಲು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಕೆಲ ವರ್ಷಗಳಿಂದ ಭಾರತದ ಸೇನೆಯಲ್ಲಿಯೂ ಪರಿಚಯಿಸಲಾಗಿದೆ.
ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಮಿಲಿಟರಿ ಎಕ್ಸಸೈಸ್ ಸಮಯದಲ್ಲಿ, ಭಾರತೀಯ ಸೇನೆಯು ಹದ್ದುಗಳನ್ನು ಬಳಸಿ ಡ್ರೋನ್ ನಾಶಪಡಿಸುವಲ್ಲಿ ಯಶಸ್ಸು ಕಂಡಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದಿಂದ ಹಲವಾರು ದಾಳಿ ಡ್ರೋನ್‌ಗಳ ಬೆದರಿಕೆಗಳು ಇರುವ ಸಮಯದಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು. ಈ ಡ್ರೋನ್‌ಗಳು ಗಡಿಯ ಮೂಲಕ ಭಾರತದ ರಾಜ್ಯಗಳಿಗೆ ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹೊಡೆದುರುಳಿಸಲು ಹದ್ದುಗಳನ್ನು ಬಳಕೆ ಮಾಡಲಾಗಿದೆ. ಕಪ್ಪು ಹದ್ದುಗಳು ಮತ್ತು ಫಾಲ್ಕನ್‌ಗಳಿಗೆ ತರಬೇತಿ ನೀಡಲಾಗಿದೆ. ವರದಿಗಳ ಪ್ರಕಾರ, ಈ ಪ್ರಯತ್ನಗಳು ತರಬೇತಿ ಹಂತದಲ್ಲಿವೆ. ಸದ್ಯ ಭಾರತದಲ್ಲಿ ಹದ್ದುಗಳನ್ನು ಇನ್ನೂ ಯಾವುದೇ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾಗಿಲ್ಲ.
Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್


