ಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ ನಾಯಿ, ಪ್ರಾಮಾಣಿಕತೆಗಿಲ್ಲ ಸರಿಸಾಟಿ!
* ನಾಯಿಗಳ ಪ್ರೀತಿಗಿಲ್ಲ ಸರಿಸಾಟಿ
* ತುತ್ತ ಅನ್ನ ಹಾಕಿದ ಮಾಲಿಕನಿಗಾಗಿ ಜೀವ ಕೊಡಲೂ ಸಿದ್ಧ ಮುದ್ದಿನ ನಾಯಿ
* ನೀರಿನಲ್ಲಿ ಮುಳುಗುತ್ತಿದ್ದ ಮಾಲಿಕನ ಮಗಳನ್ನು ರಕ್ಷಿಸಿದ ನಾಯಿ
ನವದೆಹಲಿ(ಸೆ.20): ಮಾನವನಿಗೆ ಬಹಳ ಆಪ್ತವಾದ ಪ್ರಾಣಿ ಎಂದರೆ ಅದು ನಾಯಿ. ಅವು ಮನುಷ್ಯನ ಆಪ್ತ ಸ್ನೇಹಿತರಂತಿರುತ್ತವೆ. ಅನೇಕ ಮಂದಿ ಇವುಗಳಿಗೆ ಮನೆ ಸದಸ್ಯನ ಸ್ಥಾನ ನಡಿ, ತಮ್ಮೆಲ್ಲಾ ಸುಖ ದುಃಖವನ್ನು ಹಂಚಿಕೊಳ್ಳುತ್ತಾರೆ. ಹೀಗಾಗೇ ಸಾಮಾಜಿಕ ಜಾಲತಾಣಗಳಲ್ಲೂ ಸಾಮಾಣ್ಯವಾಗಿ ಜನರು ಕೂಡಾ ನಾಯಿಗಳ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ವಿಡಿಯೋ ವೈರಲ್ ಆಗದ್ದು, ಇದರಲ್ಲಿ ನಾಯಿಯೊಂದು ತನ್ನ ಜೀವ ಪಣಕ್ಕಿಟ್ಟು ಮಾಲೀಕನ ಮಗಳನ್ನು ಕಾಪಾಡಿ ಪ್ರಾಮಾಣಿಕತೆ ಮೆರೆದರುವ ದೃಶ್ಯಗಳಿವೆ. ಈ ವಿಡಿಯೋ ನೋಡಿದವರೆಲ್ಲರೂ ನಾಯಿಯ ಧೈರ್ಯ ಹಾಘೂ ಪ್ರೀತಿಗೆ ತಲೆ ಬಾಗಿದ್ದಾರೆ.
ಪುಟ್ಟ ಬಾಲಕಿಯೊಬ್ಬಳು ಸಮುದ್ರದಲ್ಇ ಆಡುತ್ತಿರುವಾಗ ಅಲ್ಲೇ ನಾಯಿಯೊಂದು ಬಂದು ನಿಲ್ಲುತ್ತದೆ. ಹೀಗಿರುವಾಗಲೇ ದೊಡ್ಡ ಅಲೆಯೊಂದು ಮಗುವನ್ನು ಆವರಿಸುತ್ತದೆ. ಇದನ್ನು ನೋಡಿದ ನಾಯಿ ಮಗು ಸುರಕ್ಷಿತವಾಗಿಲ್ಲ ಎಂದು ಭಾವಿಸಿ, ಕೂಡಲೇ ಆಕೆಯನ್ನು ದಡಕ್ಕೆಳೆದೊಯ್ಯುವ ಯತ್ನ ನಡೆಸುತ್ತದೆ. ಮಗುವಿಗೆ ನೋವಾಗದಂತೆ, ಬಟ್ಟೆಯನ್ನು ಬಾಯಿಯಿಂದ ಕಚ್ಚಿ ಹಿಡಿಯುವ ನಾಯಿ, ಆಕೆಯನ್ನು ದಡಕ್ಕೆಳೆದುಕೊಂಡು ಹೋದ ಈ ದೃಶ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
@buitengebieden_ ಹೆಸರಿನ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು, ನ್ಯಾನಿ ಡಾಗ್ ಅಂದರೆ ಕಾಳಜಿವಹಿಸುವ ನಾಯಿ ಎಂಬರ್ಥದಲ್ಲಿ ಶೀರ್ಷಿಕೆ ನಡಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.