ಇರಾನ್‌- ಅಮೆರಿಕ- ಇಸ್ರೇಲ್‌ ಸಂಘರ್ಷ ತೀವ್ರವಾದ ಬೆನ್ನಲ್ಲೇ ‘ಇರಾನ್‌ ಪರವಾದ ಪ್ರಚೋದನಾಕಾರಿ ಭಾಷಣ, ಹೇಳಿಕೆಗಳ ಬಗ್ಗೆ ನಿಗಾ ವಹಿಸಿ. ಇರಾನ್‌ ಪರವಾದ ವಿದೇಶಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ’ ಎಂದು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ.

ನವದೆಹಲಿ: ಇರಾನ್‌- ಅಮೆರಿಕ- ಇಸ್ರೇಲ್‌ ಸಂಘರ್ಷ ತೀವ್ರವಾದ ಬೆನ್ನಲ್ಲೇ ‘ಇರಾನ್‌ ಪರವಾದ ಪ್ರಚೋದನಾಕಾರಿ ಭಾಷಣ, ಹೇಳಿಕೆಗಳ ಬಗ್ಗೆ ನಿಗಾ ವಹಿಸಿ. ಇರಾನ್‌ ಪರವಾದ ವಿದೇಶಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ’ ಎಂದು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ.

Add Asianetnews Kannada as a Preferred SourcegooglePreferred

ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ

ಈ ಕುರಿತು ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ, ‘ಇರಾನ್‌ ಮೇಲಿನ ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಇರಾನ್‌ ಪರ ಮೂಲಭೂತವಾದಿಗಳ ಭಾಷಣ ಹಾಗೂ ಹೇಳಿಕೆಗಳು ಹಿಂಸೆಗೆ ಕಾರಣವಾಗಬಹುದಾಗಿದೆ. ಹೀಗಾಗಿ ಅವುಗಳ ಮೇಲೆ ನಿಗಾ ಇರಿಸಿ’ ಎಂದು ಸೂಚಿಸಿದೆ.

ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮ ಭಾರತದ ಮೇಲೂ ಆಗುವ ಸಾಧ್ಯತೆ

ಜೊತೆಗೆ, ‘ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮ ಭಾರತದ ಮೇಲೂ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಿಗಾ ವ್ಯವಸ್ಥೆಯನ್ನು ತೀವ್ರಗೊಳಿಸಬೇಕು. ಮೂಲಭೂತವಾದಿಗಳು ಹಾಗೂ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ಜತೆಗೆ ಸಹಾನುಭೂತಿ ಹೊಂದಿರುವವರ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕು. ರಾಜ್ಯಗಳಲ್ಲಿ ಯಾವುದೇ ಹಿಂಸಾಚಾರ ಭುಗಿಲೇಳದಂತೆ ಎಚ್ಚರಿಕೆ ವಹಿಸಬೇಕು. ಅಮೆರಿಕ, ಇಸ್ರೇಲ್‌ ಮತ್ತಿತರ ದೇಶಗಳ ರಾಯಭಾರ ಕಚೇರಿಗಳು, ದೂತವಾಸಗಳು ಮತ್ತು ರಾಜತಾಂತ್ರಿಕ ಕಚೇರಿಗಳ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು’ ಎಂದು ಸೂಚಿಸಿದೆ.

ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಅಯತೋಲ್ಲ ಅಲಿ ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನ, ಯುರೋಪ್‌ ರಾಷ್ಟ್ರಗಳ ಮಾದರಿಯಲ್ಲಿ ಭಾರತದಲ್ಲೂ ಹಿಂಸಾಚಾರದ ಆತಂಕ ಶುರುವಾಗಿದೆ.